AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯುಐ’ ಸಿನಿಮಾದ ಮೊದಲ ದಿನ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?

Upendra: ಉಪೇಂದ್ರ ನಟನೆಯ ‘ಯುಐ’ ಸಿನಿಮಾ ನಿನ್ನೆ (ಡಿಸೆಂಬರ್ 20)ಯಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಮೊದಲ ದಿನ ನಿರೀಕ್ಷೆಗಿಂತಲೂ ಉತ್ತಮ ಕಲೆಕ್ಷನ್ ಮಾಡಿದೆ. ‘ಯುಐ’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು? ಪರ ರಾಜ್ಯಗಳಲ್ಲಿ ಸಿನಿಮಾ ಗಳಿಕೆ ಮಾಡಿರುವುದೆಷ್ಟು ಮೊತ್ತ? ಇಲ್ಲಿದೆ ನೋಡಿ ಮಾಹಿತಿ.

‘ಯುಐ’ ಸಿನಿಮಾದ ಮೊದಲ ದಿನ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Ui
ಮಂಜುನಾಥ ಸಿ.
|

Updated on:Dec 21, 2024 | 8:39 AM

Share

ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾ ನಿನ್ನೆ (ಡಿಸೆಂಬರ್ 20) ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಪ್ರೇಕ್ಷಕರಿಗೆ ಭಾರಿ ನಿರೀಕ್ಷೆ ಇತ್ತು. ಮೊದಲ ದಿನ ಬೆಂಗಳೂರು ಸೇರಿದಂತೆ ಹಲವು ಕಡೆ ಬೆಳ್ಳಂಬೆಳಿಗ್ಗೆ ಶೋಗಳನ್ನು ಸಹ ಹಾಕಲಾಗಿತ್ತು. ಕನ್ನಡದಲ್ಲಿ ಮಾತ್ರವೇ ಅಲ್ಲದೆ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿಯೂ ಸಹ ‘ಯುಐ’ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಸಿನಿಮಾಕ್ಕೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೂ ಸಹ ಮೊದಲ ದಿನ ‘ಯುಐ’ ಉತ್ತಮ ಕಲೆಕ್ಷನ್ ಅನ್ನೇ ಮಾಡಿದೆ.

ಉಪೇಂದ್ರ ಅವರ ‘ಯುಐ’ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್​ನಲ್ಲಿ 6.75 ಕೋಟಿ ರೂಪಾಯಿ ಹಣ ಗಳಿಸಿದೆ ಎನ್ನಲಾಗಿದೆ. ಚಿತ್ರರಂಗದ ಬಾಕ್ಸ್ ಆಫೀಸ್​ ಮಾಹಿತಿ ಕಲೆಹಾಕುವ ಸ್ಯಾಕ್​ನಿಲ್ಕ್​​ ನೀಡಿರುವ ಮಾಹಿತಿಯಂತೆ 6.75 ಕೋಟಿ ಹಣವನ್ನು ಮೊದಲ ದಿನ ‘ಯುಐ’ ಸಿನಿಮಾ ಕಲೆ ಹಾಕಿದ್ದು ಇದರಲ್ಲಿ ಬಹುತೇಕ ಮೊತ್ತ ಬಂದಿರುವುದು ಕರ್ನಾಟಕದಿಂದಲೇ.

ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಕಂಡಿಲ್ಲ ಅದರಲ್ಲೂ ವಿಶೇಷವಾಗಿ ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ‘ಯುಐ’ ಸಿನಿಮಾಕ್ಕೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ತೆಲುಗಿನಲ್ಲಿ ಮೊದಲ ದಿನ ಸುಮಾರು 70 ಲಕ್ಷ ಹಣ ಗಳಿಕೆ ಮಾಡಿದ್ದು, ಇದು ಬಹುತೇಕ ಉತ್ತಮ ಮೊತ್ತವೇ ಆಗಿದೆ. ಆದರೆ ತಮಿಳಿನಲ್ಲಿ ‘ಯುಐ’ ಸಿನಿಮಾ ಕೇವಲ ನಾಲ್ಕು ಲಕ್ಷ ರೂಪಾಯಿ ಹಾಗೂ ಹಿಂದಿಯಲ್ಲಿ ಕೇವಲ ಒಂದು ಲಕ್ಷ ರೂಪಾಯಿ ಗಳಿಕೆ ಮಾಡಿದೆ ಎಂದು ಸ್ಯಾಕ್​ನಿಲ್ಕ್ ಮಾಹಿತಿ ಹೇಳಿದೆ.

ಇದನ್ನೂ ಓದಿ:UI Movie Review: ಯುಐ ಸಿನಿಮಾದಲ್ಲಿ ಉಪೇಂದ್ರ ವಿಚಾರಗಳ ಓವರ್​ ಡೋಸ್​

ಉಪೇಂದ್ರ ನಟನೆಯ ಈ ಹಿಂದಿನ ಸಿನಿಮಾ ‘ಕಬ್ಜ’ ಬಿಡುಗಡೆಯ ಮೊದಲ ದಿನ ಕಲೆಕ್ಷನ್ ಮಾಡಿದ್ದು ಕೇವಲ ಒಂದು ಕೋಟಿ ರೂಪಾಯಿ, ಇದೀಗ ಆ ದಾಖಲೆಯನ್ನು ಬಲು ಸುಲಭವಾಗಿ ‘ಯುಐ’ ಸಿನಿಮಾ ಮುರಿದಿದೆ. ಮೊದಲ ದಿನ 6.70 ಕೋಟಿ ಗಳಿಕೆ ಬಹಳ ಒಳ್ಳೆಯ ಮೊತ್ತವಾಗಿದ್ದು, ವೀಕೆಂಡ್ ಆಗಿರುವ ಶನಿವಾ ಮತ್ತು ಭಾನುವಾರದಂದು ಇದೇ ಮೊತ್ತ ಉಳಿಸಿಕೊಂಡರೂ ಸಿನಿಮಾ ಉತ್ತಮ ಗೆಲುವನ್ನೇ ಕಾಣಲಿದೆ.

‘ಯುಐ’ ಸಿನಿಮಾ ಉಪೇಂದ್ರ ನಟಿಸಿ, ನಿರ್ದೇಶನ ಸಹ ಮಾಡಿರುವ ಸಿನಿಮಾ ಆಗಿದೆ. ಬಹಳ ವರ್ಷಗಳ ಬಳಿಕ ಉಪೇಂದ್ರ ಮತ್ತೆ ನಿರ್ದೇಶಕನ ಟೋಪಿ ತೊಟ್ಟಿದ್ದಾರೆ. ಸಿನಿಮಾದಲ್ಲಿ ಭವಿಷ್ಯದ ಕತೆ ಹೇಳಲಾಗಿದೆ. ಈ ಸಿನಿಮಾ ಕೇವಲ ದಡ್ಡರಿಗೆ ಮಾತ್ರ ಎಂಬ ಅಡಿಪಟ್ಟಿಯನ್ನೂ ಸಹ ಉಪೇಂದ್ರ ನೀಡಿದ್ದಾರೆ. ಸಿನಿಮಾಕ್ಕೆ ಲಹರಿ ವೇಲು ಮತ್ತು ಕೆಪಿ ಶ್ರೀಕಾಂತ್ ಬಂಡವಾಳ ಹೂಡಿದ್ದು, ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:35 am, Sat, 21 December 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ