UI Teaser: ರಿಲೀಸ್ ಆಯ್ತು ‘UI’ ಚಿತ್ರದ ಫಸ್ಟ್ ಲುಕ್ ಟೀಸರ್; ಹೇಗಿದೆ ನೋಡಿ ಉಪ್ಪಿ ಜಗತ್ತು

|

Updated on: Jan 08, 2024 | 11:27 AM

ಉಪೇಂದ್ರ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.  ಈಗ ಅವರು ಹಲವು ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ್ದಾರೆ. ಈ ಕಾರಣದಿಂದ ನಿರೀಕ್ಷೆ ಸೃಷ್ಟಿ ಆಗಿದೆ.

UI Teaser: ರಿಲೀಸ್ ಆಯ್ತು ‘UI’ ಚಿತ್ರದ ಫಸ್ಟ್ ಲುಕ್ ಟೀಸರ್; ಹೇಗಿದೆ ನೋಡಿ ಉಪ್ಪಿ ಜಗತ್ತು
ಉಪೇಂದ್ರ
Follow us on

ಉಪೇಂದ್ರ (Upendra) ಅವರ ನಿರ್ದೇಶನದ ಸಿನಿಮಾಗಳು ಎಂದರೆ ಭಿನ್ನವಾಗಿರುತ್ತವೆ. ಈ ಕಾರಣದಿಂದಲೇ ‘UI’ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಟೀಸರ್​ ಅನ್ನು ಶಿವರಾಜ್​ಕುಮಾರ್ ರಿಲೀಸ್ ಮಾಡಿದ್ದಾರೆ. ಟಾಲಿವುಡ್ ನಿರ್ಮಾಪಕ ಅಲ್ಲು ಅರವಿಂದ್ ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಈ ಟೀಸರ್ ಗಮನ ಸೆಳೆಯುತ್ತಿದೆ. ಟ್ವಿಟರ್​ನಲ್ಲಿ ಕಿಚ್ಚ ಸುದೀಪ್ ಅವರು ಈ ಟೀಸರ್ ಬಿಡುಗಡೆ ಮಾಡಿದ್ದಾರೆ.

ಉಪೇಂದ್ರ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.  ಈಗ ಅವರು ಹಲವು ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ್ದಾರೆ. ಈ ಕಾರಣದಿಂದ ನಿರೀಕ್ಷೆ ಸೃಷ್ಟಿ ಆಗಿದೆ. ಉಪೇಂದ್ರ ಅವರು ಕುದುರೆ ಏರಿ ಬರುತ್ತಾರೆ. ಈ ಸಿನಿಮಾದಲ್ಲಿ ಸಾಧು ಕೋಕಿಲ ಹಾಗೂ ರವಿ ಶಂಕರ್ ಪಾತ್ರಗಳು ಕೂಡ ಗಮನ ಸೆಳೆದಿವೆ. ‘ಇದು ಎಐ ಜಗತ್ತಲ್ಲ. ಇದು ಯುಐ ಜಗತ್ತು’ ಎಂದು ಹೇಳುವ ಲೈನ್ ಗಮನ ಸೆಳೆದಿದೆ.

ಇದನ್ನೂ ಓದಿ: ‘ಯುಐ’ ಸಿನಿಮಾದಲ್ಲಿ ಎಷ್ಟು ಪರ್ಸೆಂಟ್ ಗ್ರಾಫಿಕ್ಸ್ ಇರಲಿದೆ? ಸತ್ಯ ಹೇಳಿದ ಉಪೇಂದ್ರ

ಉಪ್ಪಿ ಬರ್ತ್​ಡೇ ಪ್ರಯುಕ್ತ ಟೀಸರ್ ರಿಲೀಸ್ ಆಗಿತ್ತು. ಆದರೆ, ಟೀಸರ್​ನಲ್ಲಿ ಯಾವುದೇ ದೃಶ್ಯಗಳನ್ನು ತೋರಿಸಿರಲಿಲ್ಲ. ‘ಈ ಚಿತ್ರದಲ್ಲಿ ಶೇ. 90 ಗ್ರಾಫಿಕ್ಸ್ ಇದೆ. ಬೇರೆ ಬೇರೆ ಕಡೆಗಳಲ್ಲಿ ಇದರ ಕೆಲಸ ನಡೆಯುತ್ತಿದೆ. ಅದು ಮುಗಿಯೋವರೆಗೂ ಏನನ್ನೂ ತೋರಿಸಲ್ಲ’ ಎಂದಿದ್ದರು ಉಪ್ಪಿ. ಈಗ ಫಸ್ಟ್ ಲುಕ್ ಟೀಸರ್​ನಲ್ಲಿ ಗ್ರಾಫಿಕ್ ದೃಶ್ಯಗಳು ಹೈಲೈಟ್ ಆಗಿದೆ.

‘ಯುಐ’ ಚಿತ್ರವನ್ನು ಜಿ ಮನೋಹರನ್ ಹಾಗೂ ಕೆಪಿ ಶ್ರೀಕಾಂತ್ ನಿರ್ಮಾಣ ಮಾಡುತ್ತಿದ್ದಾರೆ. ಬಿ. ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:22 am, Mon, 8 January 24