ಅರುಣಾ ಕುಮಾರಿಯನ್ನ ಮುಂದೆ ಬಿಟ್ಟಿದ್ದೇ ನಿರ್ಮಾಪಕ ಉಮಾಪತಿನಾ? ‘ರಾಬರ್ಟ್’ ನಿರ್ಮಾಪಕನ ವಿರುದ್ಧ ದಚ್ಚು ಆಪ್ತರ ಆರೋಪವೇನು?

| Updated By: sandhya thejappa

Updated on: Jul 12, 2021 | 11:47 AM

ದರ್ಶನ್ಗೂ ಈ ವಿಚಾರವನ್ನು ತಿಳಿಸಿದಾಗ ಬೆಂಗಳೂರಿನ ನಿವಾಸದಲ್ಲಿ ಅರುಣಾಕುಮಾರಿ ಭೇಟಿ ಮಾಡಿದ್ದರು. ಅರುಣಾಕುಮಾರಿಯನ್ನ ದರ್ಶನ್ ಸರ್ಗೆ ಭೇಟಿ ಮಾಡಿಸಿದ್ದೆ. ದರ್ಶನ್, ಹರ್ಷಗೆ ಸಂಬಂಧಿಸಿ ಯಾವುದೇ ದಾಖಲೆ ಇರಲಿಲ್ಲ.

ಅರುಣಾ ಕುಮಾರಿಯನ್ನ ಮುಂದೆ ಬಿಟ್ಟಿದ್ದೇ ನಿರ್ಮಾಪಕ ಉಮಾಪತಿನಾ? ‘ರಾಬರ್ಟ್’ ನಿರ್ಮಾಪಕನ ವಿರುದ್ಧ ದಚ್ಚು ಆಪ್ತರ ಆರೋಪವೇನು?
ನಿರ್ಮಾಪಕ ಉಮಾಪತಿ (ಫೈಲ್ ಚಿತ್ರ)
Follow us on

ಬೆಂಗಳೂರು: ನಟ ದರ್ಶನ್ ಹೆಸರಿನಲ್ಲಿ ವಂಚನೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಟಿವಿ9ಗೆ ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ ನೀಡಿದ್ದಾರೆ. ಅರುಣಾ ಕುಮಾರಿ ಲೋನ್ ದಾಖಲೆ ಪರಿಶೀಲನೆಯ ಸಿಬ್ಬಂದಿ ಎಂದು ಕರೆಮಾಡಿದ್ದರು. ಮೈಸೂರಿನ ಪಬ್​ವೊಂದರ ಮೇಲೆ ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ ಅಂತ ಅರುಣಾ ಕುಮಾರಿ ಮಾಹಿತಿ ನೀಡಿದ್ದರು. ಆದರೆ ದಾಖಲೆ ಪರಿಶೀಲನೆ ವೇಳೆ ಫೇಕ್ ಎಂಬುದು ಸ್ಪಷ್ಟವಾಯಿತು ಎಂದು ಉಮಾಪತಿ ತಿಳಿಸಿದರು.

ದರ್ಶನ್ಗೂ ಈ ವಿಚಾರವನ್ನು ತಿಳಿಸಿದಾಗ ಬೆಂಗಳೂರಿನ ನಿವಾಸದಲ್ಲಿ ಅರುಣಾಕುಮಾರಿ ಭೇಟಿ ಮಾಡಿದ್ದರು. ಅರುಣಾಕುಮಾರಿಯನ್ನ ದರ್ಶನ್ ಸರ್ಗೆ ಭೇಟಿ ಮಾಡಿಸಿದ್ದೆ. ದರ್ಶನ್, ಹರ್ಷಗೆ ಸಂಬಂಧಿಸಿ ಯಾವುದೇ ದಾಖಲೆ ಇರಲಿಲ್ಲ. ಯಾವುದೇ ಪ್ರಾಪರ್ಟಿ ಬಗ್ಗೆ ಸರಿಯಾದ ದಾಖಲೆ ಇರಲಿಲ್ಲ. ಎಲ್ಲ ದಾಖಲೆ ಫೇಕ್ ಅನ್ನೋದು ನಮಗೆ ಗೊತ್ತಾಯಿತು. ಇದಾದ ನಂತರ ನಾನು, ದರ್ಶನ್, ಹರ್ಷ ಸೇರಿ ಚರ್ಚಿಸಿದ್ದೆವು. ಬಳಿಕ ಜಯನಗರದ ಠಾಣೆಯಲ್ಲಿ ಜೂ.17ರಂದು ದೂರು ದಾಖಲಿಸಿದ್ದೆವು ಎಂದು ನಿರ್ಮಾಪಕ ಉಮಾಪತಿ ತಿಳಿಸಿದರು.

ಸ್ನೇಹ ಒಡೆಯಲು ಷಡ್ಯಂತ್ರ
ನಮ್ಮ ಸ್ನೇಹವನ್ನು ಒಡೆಯಲು ಯಾರೋ ಷಡ್ಯಂತ್ರ ಮಾಡಿದ್ದಾರೆ ಎಂದು ದರ್ಶನ್ ಸ್ನೇಹಿತ ಹರ್ಷ ಹೇಳಿದ್ದಾರೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿರಬಹುದು. ಅರುಣಾ ಕುಮಾರಿಯನ್ನು ಮುಂದೆ ಬಿಟ್ಟು ಆಟ ಆಡಿದ್ದಾರೆ. ದರ್ಶನ್ ಸರ್ ನನಗೆ ಕಾಲ್ ಮಾಡಿ ಈ ಬಗ್ಗೆ ಕೇಳಿದರು. ನಾನು ಯಾವುದೇ ಲೋನ್ಗೆ ಅಪ್ಲೈ ಮಾಡಿಲ್ಲ ಎಂದಿದ್ದೆ. ಬಳಿಕ ದರ್ಶನ್ ಸರ್ನ ಭೇಟಿ ಮಾಡಿದ್ದೆ. ಕೆನರಾ ಬ್ಯಾಂಕ್ ಶಾಖೆಗೆ ನಾವು ಕೂಡ ಭೇಟಿ ನೀಡಿದ್ದೆವು. ಅರುಣಾ ಕುಮಾರಿ ಬಗ್ಗೆ ಬ್ಯಾಂಕ್ನಲ್ಲಿ ನಾವು ವಿಚಾರಿಸಿದೆವು. ಅರುಣಾ ಕುಮಾರಿ ಹೆಸರಿನವಱರು ಇಲ್ಲ ಎಂದು ಹೇಳಿದರು. ಆ ಬಳಿಕ ಹೂರು ನೀಡಿದ್ದೇವೆ ಎಂದು ಹರ್ಷ ತಿಳಿಸಿದರು.

ಉಮಾಪತಿಗೆ ದರ್ಶನ್ ಆಪ್ತ ಶರ್ಮಾ ಪ್ರಶ್ನೆ
ದರ್ಶನ್ ಸರ್ ನನಗೆ ಅವತ್ತು ಬೆಳಗ್ಗೆ 11.30ಕ್ಕೆ ಕರೆ ಮಾಡಿದ್ದರು. ಏನಾದ್ರು ಲೋನ್​ಗೆ ಅಪ್ಲೈ ಮಾಡಿದ್ಯಾ ಅಂತ ಕೇಳಿದ್ದರು. ನನಗೆ ಶಾಕ್ ಆಯ್ತು. ಯಾವ ಲೋನ್ಗೂ ಅಪ್ಲೈ ಮಾಡಿಲ್ಲ ಎಂದು ತಿಳಿಸಿದ್ದೆ ಎಂದು ಟಿವಿ9ಗೆ ಪತ್ರಿಕ್ರಿಯೆ ನೀಡಿದ ದರ್ಶನ್ ಆಪ್ತ ಶರ್ಮಾ, 47 ಲಕ್ಷ ರೂ. ಚೆಕ್ ಕೊಟ್ಟಿರುವ ಬಗ್ಗೆ ಉಮಾಪತಿಯವರು ಆಕೆಯ ಬಳಿ ಏಕೆ ಕೇಳಲಿಲ್ಲ ಅಂತ ಪ್ರಶ್ನಿಸಿದ್ದಾರೆ.

ಕೆನರಾ ಬ್ಯಾಂಕ್ ಡೆಪ್ಯುಟಿ ಜನರಲ್ ಮ್ಯಾನೇಜರ್ ಬೋರಯ್ಯ ಪತ್ರಿಕ್ರಿಯೆ
ಅರುಣಾ ಕುಮಾರಿ ಎಂಬ ಸಿಬ್ಬಂದಿ ನಮ್ಮ ಬ್ರ್ಯಾಂಚ್​ನಲ್ಲಿಲ್ಲ. 25 ಕೋಟಿಗೆ ಸಂಬಂಧಿಸಿದಂತೆ ಸಾಲಕ್ಕೆ ಬೇಡಿಕೆ ಬಂದಿಲ್ಲ. ಜೂ.17ರಂದು ಸಂಜೆ ಹರ್ಷ ಎಂಬುವವರು ಕರೆ ಮಾಡಿದ್ದರು. ನಮ್ಮಲ್ಲಿ ಅರುಣಾ ಕುಮಾರಿ ಎಂಬ ಸಿಬ್ಬಂದಿ ಇಲ್ಲ ಅಂತ ಹೇಳಿದ್ದೆವು. ಅಂತ ಟಿವಿ9 ಗೆ ಕೆನರಾ ಬ್ಯಾಂಕ್ ಡೆಪ್ಯುಟಿ ಜನರಲ್ ಮ್ಯಾನೇಜರ್ ಬೋರಯ್ಯ ಹೇಳಿದರು.

ದಕ್ಷಿಣ ವಿಭಾಗದ ಡಿಸಿಪಿ ಹೇಳಿದ್ದೇನು?
ಕಳೆದ ತಿಂಗಳು 17ರಂದು ನಿರ್ಮಾಪಕ ಉಮಾಪತಿ ಒಂದು ಪೆಟಿಷನ್ ಕೊಟ್ಟಿದ್ದರು. ಅವರ ಭೂ ದಾಖಲಾತಿಗಳ ಶ್ಯೂರಿಟಿ ನಮ್ಮ ಲಿಮಿಟ್ಸ್​ಗೆ ಬರುತ್ತಿರಲಿಲ್ಲ. ಹೀಗಾಗಿ ಅವರಿಗೆ ತಿಳಿಸಿ ಪೆಟಿಷನ್ ಅರ್ಜಿ ವಜಾ ಮಾಡಿದ್ದೀವಿ. ಲೋನ್ ಅರ್ಜಿ, ಶ್ಯೂರಿಟಿ ವಿಚಾರ ಯಾವುದೂ ನಮ್ಮ ಲಿಮಿಟ್​ಗೆ ಬರುವುದಿಲ್ಲ. ಇನ್ನು ಬ್ಯಾಂಕ್ ನವರು ಯಾರೂ ನಮ್ಮನ್ನ ಅಪ್ರೋಚ್ ಮಾಡಿಲ್ಲ. ಈ ವಿಚಾರವಾಗಿ ಸೌತ್ ಎಂಡ್ ಸರ್ಕಲ್ ಕೆನಾರಾ ಬ್ಯಾಂಕ್ ನಿಂದ ನಮಗೆ ಯಾವುದೇ ಕಂಪ್ಲೆಂಟ್ ಬಂದಿಲ್ಲ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

ಅರುಣ ಕುಮಾರಿ ವಿರುದ್ಧ ಉಮಾಪತಿ ಮೊದಲು ಠಾಣೆ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಜಯನಗರ ಠಾಣೆಗೆ ತೆರಳಿ ಆಕೆ ವಿರುದ್ಧ ಉಮಾಪತಿ ಶ್ರೀನಿವಾಸ್ ಅರ್ಜಿ ನೀಡಿದ್ದರು. ಬ್ಯಾಂಕ್ ನೌಕರರೆಂದು ಬಂದು ಸುಳ್ಳು ಮಾಹಿತಿ ನೀಡಿದ್ದಾರೆ ಅಂತ ಅರ್ಜಿಯಲ್ಲಿ ಉಲ್ಲೇಖಿಸಿದ್ದು, ಆಕೆಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದರು.

ಇದನ್ನೂ ಓದಿ

ದರ್ಶನ್ ಹೆಸರಲ್ಲಿ ವಂಚನೆ ಆರೋಪ ಪ್ರಕರಣ; ದಕ್ಷಿಣ ವಿಭಾಗದ ಡಿಸಿಪಿ ಹೇಳಿದ್ದೇನು?

Actor Darshan: ವಂಚನೆ ಪ್ರಯತ್ನದ ಬಗ್ಗೆ ದರ್ಶನ್ ಹೇಳಿದ್ದೇನು?

(Umapathi Srinivas and Darshan fraud case controversy What Darshan alleging on Umapathi)

Published On - 10:59 am, Mon, 12 July 21