ಕನ್ನಡದ ‘ಕಬ್ಜ’ ಸಿನಿಮಾ (Kabzaa Movie) ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಲು ಬೇಕಾದ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ. ಪ್ರತಿ ಹೆಜ್ಜೆಯಲ್ಲೂ ಭಾರಿ ನಿರೀಕ್ಷೆ ಹುಟ್ಟು ಹಾಕುತ್ತಿರುವ ಈ ಸಿನಿಮಾದಲ್ಲಿ ಉಪೇಂದ್ರ (Upendra) ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಕೂಡ ನಟಿಸಿರುವುದರಿಂದ ಹೈಪ್ ಇನ್ನಷ್ಟು ಹೆಚ್ಚಿದೆ. ಆರ್. ಚಂದ್ರು ನಿರ್ದೇಶನದ ಈ ಸಿನಿಮಾ ಈಗಾಗಲೇ ಟೀಸರ್ ಮೂಲಕ ಸೌಂಡು ಮಾಡಿದೆ. ಈಗ ಹಾಡುಗಳ ಮೂಲಕ ಧೂಳೆಬ್ಬಿಸಲು ಪ್ಲ್ಯಾನ್ ರೆಡಿ ಆಗಿದೆ. ಫೆಬ್ರವರಿ 4ರಂದು ‘ಕಬ್ಜ’ ಸಿನಿಮಾದ ಮೊದಲ ಹಾಡಿನ ಲಿರಿಕಲ್ ವಿಡಿಯೋ (Kabzaa First Song) ರಿಲೀಸ್ ಆಗಲಿದೆ. ಅದಕ್ಕಾಗಿ ಹೈದರಾಬಾದ್ನಲ್ಲಿ ವೇದಿಕೆ ಸಜ್ಜಾಗುತ್ತಿದೆ.
‘ಕಬ್ಜ’ ಸಿನಿಮಾದಲ್ಲಿ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಆರ್. ಚಂದ್ರು ಅವರ ಮುಂದಾಳತ್ವದಲ್ಲಿ ನುರಿತ ತಂತ್ರಜ್ಞರ ತಂಡ ಹಗಲಿರುಳು ಶ್ರಮಿಸುತ್ತಿದೆ. ಸಂಗೀತದ ಜವಾಬ್ದಾರಿಯನ್ನು ರವಿ ಬಸ್ರೂರು ಅವರು ನಿಭಾಯಿಸುತ್ತಿದ್ದಾರೆ. ಟೀಸರ್ಗೆ ಅವರು ನೀಡಿದ ಹಿನ್ನೆಲೆ ಸಂಗೀತ ಕೇಳಿ ಫ್ಯಾನ್ಸ್ ಫಿದಾ ಆಗಿದ್ದರು. ಈಗ ಮೊದಲ ಹಾಡು ಕೇಳುವ ಸಮಯ ಹತ್ತಿರವಾಗಿದೆ. ರವಿ ಬಸ್ರೂರು ಅವರ ಬತ್ತಳಿಕೆಯಿಂದ ಬರಲಿರುವ ಈ ಸಾಂಗ್ ಹೇಗಿರಲಿದೆ ಎಂಬುದನ್ನು ತಿಳಿಯಲು ಅಭಿಮಾನಿ ಬಳಗ ಕಾದು ಕೂತಿದೆ.
Here is the biggest announcement all have been waiting for #Kabzaa first lyrical video & A Grand event to be held at Hyderabad On #Feb4th 7PM… @KicchaSudeep @shriya1109 @anandpandit63 @apmpictures @Alankar_Pandian @RaviBasrur @shivakumarart @aanandaaudio pic.twitter.com/X9npzZEqLN
— Upendra (@nimmaupendra) January 30, 2023
‘ಕೆಜಿಎಫ್’ ಮತ್ತು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಯಶಸ್ಸಿನ ಬಳಿಕ ರವಿ ಬಸ್ರೂರು ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಇರುವ ಸಂಗೀತ ನಿರ್ದೇಶಕನಾಗಿ ಬೆಳೆದು ನಿಂತಿದ್ದಾರೆ. ಅವರ ಕೆಲಸದ ಮೇಲೆ ಸಿನಿಪ್ರಿಯರು ಸಖತ್ ಭರವಸೆ ಇಟ್ಟುಕೊಂಡಿದ್ದಾರೆ. ‘ಕಬ್ಜ’ ಚಿತ್ರಕ್ಕೆ ಅವರು ಸಂಗೀತ ನಿರ್ದೇಶನ ಮಾಡಿರುವುದರಿಂದ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿ ಆಗಿದೆ.
ಇದನ್ನೂ ಓದಿ: Kabzaa: ಟ್ವಿಟರ್ ಟ್ರೆಂಡಿಂಗ್ನಲ್ಲಿ ‘ಪಠಾಣ್’ ಚಿತ್ರವನ್ನೇ ಮೀರಿಸಿದ ‘ಕಬ್ಜ’: ಉಪ್ಪಿ-ಆರ್. ಚಂದ್ರು ಕಮಾಲ್
ಫೆಬ್ರವರಿ 4ರಂದು ‘ಕಬ್ಜ’ ಸಿನಿಮಾದ ಮೊದಲ ಸಾಂಗ್ ಬಿಡುಗಡೆ ಆಗಲಿದೆ ಎಂಬುದನ್ನು ತಿಳಿಸಲು ಹೊಸ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮುಂತಾದ ಭಾಷೆಗಳಲ್ಲಿ ಪೋಸ್ಟರ್ಗಳನ್ನು ರಿಲೀಸ್ ಮಾಡಲಾಗಿದ್ದು, ಉಪೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ದಿನವೇ ಉಪೇಂದ್ರ-ಸುದೀಪ್ ನಟನೆಯ ‘ಕಬ್ಜ’ ಸಿನಿಮಾ ರಿಲೀಸ್
‘ಕಬ್ಜ ಚಿತ್ರದ ಮೊದಲ ಲಿರಿಕಲ್ ಸಾಂಗ್ಗೆ ಸಂಬಂಧಪಟ್ಟಂತೆ ನೀವೆಲ್ಲ ಕಾಯುತ್ತಿದ್ದ ದೊಡ್ಡ ಅನೌನ್ಸ್ಮೆಂಟ್ ಇಲ್ಲಿದೆ. ಹೈದರಾಬಾದ್ನಲ್ಲಿ ಫೆಬ್ರವರಿ 4ರಂದು ಅದ್ದೂರಿ ಕಾರ್ಯಕ್ರಮ ಮಾಡಲಾಗುವುದು’ ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅನೇಕ ಸ್ಟಾರ್ ಕಲಾವಿದರು ನಟಿಸಿದ್ದಾರೆ. ನಾಯಕಿಯಾಗಿ ಶ್ರೀಯಾ ಶರಣ್ ಅಭಿನಯಿಸಿದ್ದಾರೆ. ಮಾರ್ಚ್ 17ರಂದು ‘ಕಬ್ಜ’ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:53 pm, Mon, 30 January 23