ಅಕ್ಟೋಬರ್ನಲ್ಲಿ ಬರಲಿದೆ ‘ಯುಐ’; ‘ಮಾರ್ಟಿನ್’ ಜೊತೆ ಸ್ಪರ್ಧೆಗೆ ಇಳಿದ್ರಾ ಉಪ್ಪಿ?
‘ಯುಐ’ ಸಿನಿಮಾ ರಿಲೀಸ್ ಯಾವಾಗ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಉಪೇಂದ್ರ ಅವರು ‘ಯುಐ’ ಚಿತ್ರದ ರಿಲೀಸ್ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಅಕ್ಟೋಬರ್ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂದು ಅವರು ತಿಳಿಸಿದ್ದಾರೆ.
ಉಪೇಂದ್ರ ನಟನೆಯ ‘ಯುಐ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ಈ ಚಿತ್ರದಿಂದ ಅವರು ದೊಡ್ಡ ಗೆಲುವು ಕಾಣುವ ಭರವಸೆಯಲ್ಲಿ ಇದ್ದಾರೆ. ಈ ಚಿತ್ರದ ಗ್ರಾಫಿಕ್ಸ್ ಕೆಲಸಗಳು ನಡೆಯುತ್ತಿವೆ. ಈ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅಕ್ಟೋಬರ್ನಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ.
‘ಯುಐ’ ಸಿನಿಮಾ ರಿಲೀಸ್ ಯಾವಾಗ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಉಪೇಂದ್ರ ಅವರು ‘ಯುಐ’ ಚಿತ್ರದ ರಿಲೀಸ್ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಅಕ್ಟೋಬರ್ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂದು ಅವರು ತಿಳಿಸಿದ್ದಾರೆ. ಈ ವಿಚಾರ ಕೇಳಿ ಉಪ್ಪಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.
ಅಕ್ಟೋಬರ್ನಲ್ಲಿ ‘ಮಾರ್ಟಿನ್’ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೇ ತಿಂಗಳಲ್ಲಿ ‘ಯುಐ’ ಕೂಡ ರಿಲೀಸ್ ಆಗಲಿದೆ. ಈಗಾಗಲೇ ‘ಮಾರ್ಟಿನ್’ ಸಿನಿಮಾ ಅಕ್ಟೋಬರ್ 11ರಂದು ರಿಲೀಸ್ ಆಗಲಿದೆ ಎಂದು ತಂಡ ತಿಳಿಸಿದೆ. ಹೀಗಾಗಿ, ‘ಯುಐ’ ಅಕ್ಟೋಬರ್ ಅಂತ್ಯಕ್ಕೆ ಬಿಡುಗಡೆ ಆಗಬಹುದು ಎಂದು ಕೆಲವರು ಊಹಿಸಿದ್ದಾರೆ.
ಇದೇ ಅಕ್ಟೋಬರ್ ನಲ್ಲಿ ನಿಮ್ಮಮುಂದೆ… In cinemas from October 2024 pic.twitter.com/0fGYuUcIqa
— Upendra (@nimmaupendra) August 16, 2024
ಇದನ್ನೂ ಓದಿ: ‘ಯುಐ’ ಅಂತರಾಷ್ಟ್ರೀಯ ಸ್ಪರ್ಷ, ಹಂಗೆರಿಯಲ್ಲಿ ಉಪೇಂದ್ರ, ಅಜನೀಶ್
‘ಯುಐ’ ಸಿನಿಮಾದ ಪೋಸ್ಟರ್ಗಳು ಮಾತ್ರ ಈವರೆಗೆ ರಿಲೀಸ್ ಆಗಿವೆ. ಈ ಚಿತ್ರದಲ್ಲಿ ಬಹುತೇಕ ದೃಶ್ಯಗಳು ಗ್ರಾಫಿಕ್ಸ್ನಿಂದ ಕೂಡಿರಲಿದೆ ಎಂದು ಉಪೇಂದ್ರ ಮಾಹಿತಿ ನೀಡಿದ್ದಾರೆ. ಈ ಸಿನಿಮಾದ ಟ್ರೇಲರ್ಗಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಸಿನಿಮಾ ಯಾವ ರೀತಿಯಲ್ಲಿ ಮೂಡಿ ಬಂದಿದೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.