‘ಎ’ ಆಯ್ತು ಈಗ ವಿಶೇಷ ದಿನದಂದು ‘ಉಪೇಂದ್ರ’ ಸಿನಿಮಾ ಮರು ಬಿಡುಗಡೆ

Upendra: ಉಪೇಂದ್ರ ನಟಿಸಿ ನಿರ್ದೇಶನ ಮಾಡಿದ್ದ ‘ಎ’ ಸಿನಿಮಾ ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಇದೀಗ ಉಪೇಂದ್ರ ನಟಿಸಿ ನಿರ್ದೇಶಿಸಿದ್ದ ಮತ್ತೊಂದು ಹಿಟ್ ಸಿನಿಮಾ ‘ಉಪೇಂದ್ರ’ ವಿಶೇಷ ದಿನದಂದು ಮರು ಬಿಡುಗಡೆ ಆಗಲಿಕ್ಕಿದೆ.

‘ಎ’ ಆಯ್ತು ಈಗ ವಿಶೇಷ ದಿನದಂದು ‘ಉಪೇಂದ್ರ’ ಸಿನಿಮಾ ಮರು ಬಿಡುಗಡೆ
ಉಪೇಂದ್ರ
Follow us
|

Updated on: Sep 06, 2024 | 5:03 PM

ಕೆಲ ತಿಂಗಳ ಹಿಂದೆ ಉಪೇಂದ್ರ ನಟಿಸಿ ನಿರ್ದೇಶನ ಮಾಡಿದ್ದ ‘ಎ’ ಸಿನಿಮಾ ಮರು ಬಿಡುಗಡೆ ಆಗಿ ಕ್ರೇಜ್ ಹುಟ್ಟಿಸಿತ್ತು. ಉಪೇಂದ್ರ ಅಭಿಮಾನಿಗಳು, ಸಿನಿಮಾ ಪ್ರೇಮಿಗಳು, ಕನ್ನಡದ ‘ಕಲ್ಟ್’ ಸಿನಿಮಾಗಳಲ್ಲಿ ಒಂದು ಎನ್ನಬಹುದ ‘ಎ’ ಸಿನಿಮಾವನ್ನು ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ನೋಡಿ ಖುಷಿ ಪಟ್ಟಿದ್ದರು. ‘ಎ’ ಸಿನಿಮಾದ ಮರು ಬಿಡುಗಡೆಯ ಅಬ್ಬರ ಕಂಡು ಇನ್ನೂ ಕೆಲವು ಹಳೆ ಕನ್ನಡ ಸಿನಿಮಾಗಳನ್ನು ಬಿಡುಗಡೆ ಮಾಡಲಾಯ್ತಾದರೂ ಅವ್ಯಾವೂ ಅಂಥಹಾ ಒಳ್ಳೆಯ ಪ್ರದರ್ಶನ ಕಾಣಲಿಲ್ಲ. ಈಗ ಮತ್ತೊಮ್ಮೆ ಉಪೇಂದ್ರ ನಟಿಸಿ ನಿರ್ದೇಶಿಸಿರುವ ‘ಉಪೇಂದ್ರ’ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ.

ಇದೇ ತಿಂಗಳಿನ 18 ನಟ, ನಿರ್ದೇಶಕ ಉಪೇಂದ್ರ ಅವರ ಹುಟ್ಟುಹಬ್ಬ. ಅವರ ಜನ್ಮದಿನದ ವಿಶೇಷವಾಗಿ ‘ಉಪೇಂದ್ರ’ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. 1999 ರಲ್ಲಿ ಬಿಡುಗಡೆ ಆಗಿದ್ದು ಈ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತ್ತು. ವಿಚಿತ್ರ ಕತೆ, ನಿರೂಪಣಾ ಶೈಲಿ ಹೊಂದಿದ್ದ ‘ಉಪೇಂದ್ರ’ ಸಿನಿಮಾ ಯುವ ಪ್ರೇಕ್ಷಕರನ್ನು ಬಹುವಾಗಿ ಸೆಳೆದಿತ್ತು. ಅಲ್ಲದೆ ಭಿನ್ನ ರೀತಿಯ ಕತೆ ಹೇಳುವ ಉಪೇಂದ್ರ ಅವರ ಶೈಲಿ ಮೆಚ್ಚುಗೆಗೆ ಪಾತ್ರವಾಗಿತ್ತು.

ಇದನ್ನೂ ಓದಿ:ರಜನಿಕಾಂತ್​ ನಟನೆಯ ‘ಕೂಲಿ’ ಸಿನಿಮಾದಿಂದ ಉಪೇಂದ್ರ ಫಸ್ಟ್​ ಲುಕ್​ ಪೋಸ್ಟರ್ ಬಿಡುಗಡೆ

‘ಉಪೇಂದ್ರ’ ಸಿನಿಮಾನಲ್ಲಿ ನಾಯಕ ಉಪೇಂದ್ರ ನಾನು ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ರವೀನಾ ಟಂಡನ್, ಪ್ರೇಮಾ ಹಾಗೂ ದಾಮಿನಿ ನಾಯಕಿಯರಾಗಿ ನಟಿಸಿದ್ದರು. ವ್ಯಕ್ತಿಯೊಬ್ಬನ ಜೀವನದಲ್ಲಿ ಹಣ, ಜವಾಬ್ದಾರಿ ಹಾಗೂ ಪ್ರೀತಿ ಎಷ್ಟು ಮುಖ್ಯ ಹಾಗೂ ಅವುಗಳು ವಹಿಸುವ ಪಾತ್ರಗಳ ಬಗ್ಗೆ ಕತೆಯ ಮೂಲಕ ಉಪೇಂದ್ರ ಹೇಳಿದ್ದರು. ಮಾರಿಮುತ್ತು ವಿಲನ್ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾಕ್ಕೆ ಆಗಿನ ಕಾಲದಲ್ಲಿ ಕೆಲವರು ವಿರೋಧ ಸಹ ಮಾಡಿದ್ದರು. ಏನೇ ಆದರೂ ಈ ಸಿನಿಮಾ ಹಿಟ್ ಆಗಿದ್ದಲ್ಲದೆ ಆಗಿನ ಕಾಲಕ್ಕೆ ಸುಮಾರು 10 ಕೋಟಿ ಕಲೆಕ್ಷನ್ ಸಹ ಮಾಡಿತ್ತು.

ಇದೀಗ ‘ಉಪೇಂದ್ರ’ ಸಿನಿಮಾ ಬಿಡುಗಡೆ ಆಗಿ 25 ವರ್ಷಗಳಾಗಿದ್ದು, ಉಪೇಂದ್ರ ಜನ್ಮದಿನವೂ ಹತ್ತಿರ ಇರುವ ಕಾರಣ, ಇದೇ ದಿನ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾವನ್ನು ಶಿಲ್ಪಾ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು, ಗುರುಕಿರಣ್ ನಿರ್ದೇಶನ ಮಾಡಿದ್ದರು. ಉಪೇಂದ್ರ, ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ ಎರಡನೇ ಸಿನಿಮಾ ಇದಾಗಿತ್ತು. ಅಕ್ಟೋಬರ್ 22, 1999 ರಂದು ಈ ಸಿನಿಮಾ ಬಿಡುಗಡೆ ಆಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ