ಸಿದ್ಧಗೊಳ್ಳಲಿದೆ ವಾದಿರಾಜ ಸ್ವಾಮಿ ಬಯೋಪಿಕ್; ತೆರೆಮೇಲೆ 15ನೇ ಶತಮಾನದ ಕಥೆ

ವಾದಿರಾಜ ಸ್ವಾಮಿಗಳು 15ನೇ ಶತಮಾನದಲ್ಲಿ ಬದುಕಿದ್ದರು. 120 ವರ್ಷಗಳ ಕಾಲ ಅವರು ಜೀವಿಸಿದ್ದರು. ಈ ಕಾಲಘಟ್ಟವನ್ನು ತೆರೆಮೇಲೆ ತರೋದು ಒಂದು ಚಾಲೆಂಜ್​. ಹೀಗಾಗಿ ಹಯವದನ ಅವರಿಗೆ ಹೆಚ್ಚಿನ ಕಾಲಾವಕಾಶದ ಅಗತ್ಯ ಇದೆ. ‘

ಸಿದ್ಧಗೊಳ್ಳಲಿದೆ ವಾದಿರಾಜ ಸ್ವಾಮಿ ಬಯೋಪಿಕ್; ತೆರೆಮೇಲೆ 15ನೇ ಶತಮಾನದ ಕಥೆ
ಶ್ರೀ ವಾದಿರಾಜ ಗುರುಸಾರ್ವಭೌಮ ಅವರ ಸಿನಿಮಾ ಘೋಷಣೆಗೆ ಕರೆದ ಸುದ್ದಿಗೋಷ್ಠಿ ಸಂದರ್ಭದ ಫೋಟೋ
Follow us
ರಾಜೇಶ್ ದುಗ್ಗುಮನೆ
|

Updated on:Feb 04, 2023 | 12:25 PM

ಇತ್ತೀಚೆಗೆ ಅನೇಕ ಬಯೋಪಿಕ್​ಗಳು (Biopic) ಸೆಟ್ಟೇರುತ್ತಿವೆ. ಹಲವು ಬಯೋಪಿಕ್​ಗಳು ಯಶಸ್ಸು ಕಂಡಿವೆ. ಖ್ಯಾತ ನಾಮರ ಜೀವನವನ್ನು ದೊಡ್ಡ ಪರದೆಮೇಲೆ ತಂದರೆ ಅದನ್ನು ಜನರು ಕಣ್ತುಂಬಿಕೊಳ್ಳುತ್ತಾರೆ. ಈಗ ಸೋದೆ ಶ್ರೀ ವಾದಿರಾಜ ಗುರುಸಾರ್ವಭೌಮರ ಕಥೆ ಸಿನಿಮಾ ಆಗಲಿದೆ. ಈ ಚಿತ್ರವನ್ನು ಹಯವದನ (Hayavadana) ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮಾಡೋದು ದೊಡ್ಡ ಚಾಲೆಂಜ್ ಅನ್ನೋದು ನಿರ್ದೇಶಕರ ಮಾತು.

ವಾದಿರಾಜ ಗುರುಗಳ ಜಯಂತಿಯಂದು ಕುಂದಾಪುರದಲ್ಲಿರುವ ಹೂವಿನಕೆರೆಯ ವಾದಿರಾಜ ಸ್ವಾಮಿಗಳ ಮಠದಲ್ಲಿ ಸಿನಿಮಾ ಘೋಷಣೆ ಆಗಿದೆ. ‘ಎಲ್ಲೋ ಜೋಗಪ್ಪ ನಿನ್ನರಮನೆ’ ಸಿನಿಮಾ ನಿರ್ದೇಶಕ ಹಯವದನ ಈ ಬಯೋಪಿಕ್ ನಿರ್ದೇಶನ ಮಾಡುತ್ತಿದ್ದಾರೆ. ವಾದಿರಾಜ ಸ್ವಾಮಿಗಳ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರ ಆಶೀರ್ವಾದೊಂದಿಗೆ ಸಿನಿಮಾ ಸೆಟ್ಟೇರಿದೆ ಅನ್ನೋದು ವಿಶೇಷ.

ಈ ರೀತಿಯ ಸಿನಿಮಾ ಮಾಡುವಾಗ ಅಧ್ಯಯನ ತುಂಬಾನೇ ಮುಖ್ಯವಾಗುತ್ತದೆ. ಅಂಕಿ ಅಂಶಗಳು ಕೊಂಚ ಹೆಚ್ಚು ಕಡಿಮೆ ಆದರೂ ತೊಂದರೆ ಆಗುತ್ತದೆ. ಹೀಗಾಗಿ ಹಯವದನ ಸಾಕಷ್ಟು ರಿಸರ್ಚ್ ವರ್ಕ್ ನಡೆಸುತ್ತಿದ್ದಾರೆ. ಸದ್ಯ ವಾದಿರಾಜ ಗುರುಸಾರ್ವಭೌಮರ ಪಾತ್ರವನ್ನು ಯಾರು ಮಾಡುತ್ತಾರೆ ಅನ್ನೋದು ಇನ್ನೂ ಫೈನಲ್ ಆಗಿಲ್ಲ. ಇತರ ಪಾತ್ರಗಳ ಆಯ್ಕೆ ಇನ್ನಷ್ಟೇ ಆಗಬೇಕಿದೆ. ವಿಕ್ರಮ್ ಹತ್ವಾರ್, ಹಯವದನ ಸ್ಕ್ರಿಪ್ಟ್ ಕೆಲಸ ನಡೆಸುತ್ತಿದ್ದಾರೆ. ಇದನ್ನು ಪೂರ್ಣಗೊಳಿಸಲು 4-5 ತಿಂಗಳು ಹಿಡಿಯಲಿದೆ.

ವಾದಿರಾಜ ಸ್ವಾಮಿಗಳು 15ನೇ ಶತಮಾನದಲ್ಲಿ ಬದುಕಿದ್ದರು. 120 ವರ್ಷಗಳ ಕಾಲ ಅವರು ಜೀವಿಸಿದ್ದರು. ಈ ಕಾಲಘಟ್ಟವನ್ನು ತೆರೆಮೇಲೆ ತರೋದು ಒಂದು ಚಾಲೆಂಜ್​. ಹೀಗಾಗಿ ಹಯವದನ ಅವರಿಗೆ ಹೆಚ್ಚಿನ ಕಾಲಾವಕಾಶದ ಅಗತ್ಯ ಇದೆ. ‘ಸಮಾಜಕ್ಕೆ ಭಕ್ತಿ ಬಗ್ಗೆ, ಸಮಾಜ ಸೇವೆ ಬಗ್ಗೆ, ಮಾನವೀಯತೆ ಬಗ್ಗೆ ಸ್ವಾಮಿಗಳು ಹೇಳಿದ್ದಾರೆ. ಸಮಾಜ ಸುಧಾರಣೆ ಮಾಡಿದ್ದಾರೆ. 15ನೇ ಶತಮಾನದಲ್ಲಿ ಕನ್ನಡದಲ್ಲಿ ಕೀರ್ತನೆಗಳನ್ನು ನೀಡಿದ್ದಾರೆ. ಸಮಾಜಕ್ಕೆ ಅವರ ಕೊಡುಗೆ ತುಂಬಾ ಇದೆ. ಭಕ್ತಿ ಮತ್ತು ಗೌರವದಿಂದ ಅವರ ಕಥೆಯನ್ನು ಸಿನಿಮಾ ಮಾಡುತ್ತಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ಈ ಮೊದಲು ವಾದಿರಾಜ ಸ್ವಾಮಿಗಳ ಧಾರಾವಾಹಿ ಹಾಗೂ ಸಿನಿಮಾ ಮಾಡಲು ಅನೇಕರು ಪ್ಲ್ಯಾನ್ ರೂಪಿಸಿದ್ದರು. ಆದರೆ, ಇದಕ್ಕೆ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರವರು ಒಪ್ಪಿರಲಿಲ್ಲ. ಸೂಕ್ತ ವ್ಯಕ್ತಿ ಸಿನಿಮಾ ಮಾಡಲು ಬರಲಿ ಎಂದು ಅವರು ಕಾಯುತ್ತಿದ್ದರು. ಆಗ ಹಯವದನ ಅವರು ಆಗಮಿಸಿ ಸಿನಿಮಾ ಮಾಡುವ ಆಲೋಚನೆ ತಿಳಿಸಿದರು. ಅವರು ವಾದಿರಾಜ ಭಕ್ತರು ಕೂಡ ಹೌದು. ಈ ಕಾರಣಕ್ಕೆ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರವರು ಬಯೋಪಿಕ್ ಮಾಡೋಕೆ ಒಪ್ಪಿಗೆ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥರವರು, ‘ವಾದಿರಾಜ ಗುರುಗಳು 15,16ನೇ ಶತಮಾನದಲ್ಲಿ ಜೀವಿಸಿದ್ದರು. ಅವರು 113 ವರ್ಷ ಸನ್ಯಾಸ ಜೀವನ ನಡೆಸಿದ್ದಾರೆ. ಅವರ 120 ವರ್ಷಗಳ ಜೀವನವನ್ನು ಒಂದು ಸಿನಿಮಾದಲ್ಲಿ ತೋರಿಸೋದು ಕಷ್ಟಸಾಧ್ಯ. ಇದನ್ನು ಹಯವದನ ಅವರು ಮಾಡುತ್ತಾರೆ ಅನ್ನೋ ನಂಬಿಕೆ ಇದೆ’ ಎಂದಿದ್ದಾರೆ.

ಚಿತ್ರಕ್ಕೆ ಶೀರ್ಷಿಕೆ ಇನ್ನೂ ಫೈನಲ್ ಆಗಿಲ್ಲ. ತಾಂತ್ರಿಕ ವರ್ಗದ ಆಯ್ಕೆ ಕೂಡ ಬಾಕಿ ಇದೆ. ಇವುಗಳ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ. ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ಸ್ ಹಾಗೂ ಕೃಷ್ಣಛಾಯ ಚಿತ್ರ ಬ್ಯಾನರ್ ನಡಿ ಪವನ್ ಸಿಮಿಕೇರಿ ಮತ್ತು ಸಿಂಧು ಹಯವದನ ಹಾಗೂ ಸ್ನೇಹಿತರು ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ. ಐದು ತಿಂಗಳ ಬಳಿಕ ಸಿನಿಮಾ ಶೂಟಿಂಗ್ ಆರಂಭ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:22 pm, Sat, 4 February 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ