AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day 2023: ಸ್ಯಾಂಡಲ್​ವುಡ್​ನಲ್ಲಿ ಪ್ರೇಮಕಥೆ; ಪ್ರೀತಿಸಿ ಮದುವೆ ಆದ ಸೆಲೆಬ್ರಿಟಿಗಳಿವರು

ಸ್ಯಾಂಡಲ್​ವುಡ್​ನಲ್ಲಿ ಅನೇಕರು ಪ್ರೀತಿಸಿ ಮದುವೆ ಆಗಿದ್ದಾರೆ. ಪ್ರೇಮದ ಪಾತ್ರ ಮಾಡುತ್ತಲೇ ಸಪ್ತಪದಿ ತುಳಿದ ಸ್ಯಾಂಡಲ್​ವುಡ್​ ಜೋಡಿಗಳ ಪಟ್ಟಿ ಇಲ್ಲಿದೆ.

Valentine’s Day 2023: ಸ್ಯಾಂಡಲ್​ವುಡ್​ನಲ್ಲಿ ಪ್ರೇಮಕಥೆ; ಪ್ರೀತಿಸಿ ಮದುವೆ ಆದ ಸೆಲೆಬ್ರಿಟಿಗಳಿವರು
ಸ್ಯಾಂಡಲ್​ವುಡ್​ನಲ್ಲಿ ಪ್ರೇಮಕಥೆ
ರಾಜೇಶ್ ದುಗ್ಗುಮನೆ
|

Updated on:Feb 14, 2023 | 2:33 PM

Share

Valentine’s Day 2023: ಬಣ್ಣ ಹಚ್ಚಿ ನಟಿಸುವಾಗ ಅನೇಕರಿಗೆ ಪ್ರೀತಿ ಹುಟ್ಟಿಕೊಂಡಿದ್ದಿದೆ. ತಾವು ಮಾಡುತ್ತಿರುವುದು ನಟನೆ ಎಂಬುದನ್ನು ಮರೆತು ಒಬ್ಬರಿಗೊಬ್ಬರು ಹತ್ತಿರ ಆದವರು ಅನೇಕರಿದ್ದಾರೆ. ಸೆಟ್​ನಲ್ಲಿ ಉಂಟಾಗುವ ಗೆಳೆತನ ಪ್ರೀತಿಗೆ ತಿರುಗಿ ನಂತರ ಹಸೆಮಣೆವರೆಗೂ ಕರೆದುಕೊಂಡು ಹೋದ ಉದಾಹರಣೆ ಸಾಕಷ್ಟಿದೆ. ಸ್ಯಾಂಡಲ್​ವುಡ್​ನಲ್ಲಿ (Sandalwood) ಅನೇಕರು ಪ್ರೀತಿಸಿ ಮದುವೆ ಆಗಿದ್ದಾರೆ. ಪ್ರೇಮದ ಪಾತ್ರ ಮಾಡುತ್ತಲೇ ಸಪ್ತಪದಿ ತುಳಿದ ಸ್ಯಾಂಡಲ್​ವುಡ್​ ಜೋಡಿಗಳ ಪಟ್ಟಿ ಇಲ್ಲಿದೆ.

ಯಶ್​-ರಾಧಿಕಾ:

ಯಶ್​ ಹಾಗೂ ರಾಧಿಕಾ ಪಂಡಿತ್​ ಸ್ಯಾಂಡಲ್​ವುಡ್​ನ ತುಂಬಾನೇ ಖ್ಯಾತಿ ಪಡೆದಿರುವ ಸೆಲೆಬ್ರಿಟಿಗಳು. ಇಬ್ಬರೂ ಕಿರುತೆರೆಯಲ್ಲಿ ಒಟ್ಟಾಗಿ ನಟಿಸಿದ ಧಾರಾವಾಹಿ ‘ನಂದಗೋಕುಲ’. ನಂತರ, ಇಬ್ಬರೂ ‘ಮೊಗ್ಗಿನ ಮನಸು’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅದನ್ನು ಸಾರ್ವಜನಿಕವಾಗಿ ಹೇಳಿಕೊಂಡಿರಲಿಲ್ಲ. ನಂತರ ಈ ಜೋಡಿ 2016ರಲ್ಲಿ ಮದುವೆ ಆಯಿತು. ಇವರಿಗೆ ಆಯ್ರಾ ಹಾಗೂ ಯಥರ್ವ್​ ಹೆಸರಿನ ಮಕ್ಕಳಿದ್ದಾರೆ.

ಐಂದ್ರಿತಾ-ದಿಗಂತ್​:

ಐಂದ್ರಿತಾ ರೇ ಹಾಗೂ ದಿಗಂತ್​ ಮದುವೆ ಆಗಿ ಕೆಲ ವರ್ಷಗಳು ಕಳೆದಿವೆ. ಇವರದ್ದು ಲವ್​ ಮ್ಯಾರೇಜ್​. ಐಂದ್ರಿತಾ ಸಂದರ್ಶನ ನೋಡಿದ್ದ ದಿಗಂತ್​, ಈ ಹುಡುಗಿ ತುಂಬಾನೇ ಕ್ಯೂಟ್​ ಆಗಿದ್ದಾರೆ ಎಂದುಕೊಂಡಿದ್ದರು. ಅಚ್ಚರಿ ಎಂಬಂತೆ, ‘ಮನಸಾರೆ’ ಸಿನಿಮಾದಲ್ಲಿ ಐಂದ್ರಿತಾ ಜತೆ ತೆರೆ ಹಂಚಿಕೊಳ್ಳುವ ಅವಕಾಶ ದಿಗಂತ್​ಗೆ ಸಿಕ್ಕಿತ್ತು. ಈ ಸಿನಿಮಾ ಶೂಟಿಂಗ್​ ವೇಳೆ ದಿಗಂತ್​ ಅನಾರೋಗ್ಯಕ್ಕೆ ಒಳಗಾದಾಗ ಐಂದ್ರಿತಾ ಹಣ್ಣನ್ನು ಕಳುಹಿಸಿದ್ದರು ಎನ್ನಲಾಗಿದೆ. ಇಬ್ಬರ ನಡುವೆ ಪ್ರೀತಿ ಮೊಳೆಯಲು ಇಷ್ಟು ಸಾಕಿತ್ತು.

ಅಂಬರೀಷ್​-ಸುಮಲತಾ:

ಇವರ ಪ್ರೇಮಕತೆ ನಡೆದಿದ್ದು 90ರ ದಶಕದಲ್ಲಿ. ಇಬ್ಬರೂ ಅಂದಿನ ಕಾಲದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಪ್​ನಲ್ಲಿದ್ದವರು. 1984ರಲ್ಲಿ ಮೊಟ್ಟ ಮೊದಲ ಬಾರಿಗೆ ಸುಮಲತಾ, ಅಂಬರೀಷ್​ ಅವರನ್ನು ನೋಡಿದ್ದು. ಅದೂ ಕಾರ್ಯಕ್ರಮವೊಂದರಲ್ಲಿ. ನಂತರ ‘ಆಹುತಿ’ ಸಿನಿಮಾದ ಸೆಟ್​ನಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಮೊದಲ ಬಾರಿಗೆ ಭೇಟಿ ಮಾಡಿದ್ದರು. ಅಲ್ಲಿಂದ ಆರಂಭವಾದ ಪರಿಚಯ ಮದುವೆಗೆ ತಂದು ನಿಲ್ಲಿಸಿತ್ತು.

ಪ್ರಜ್ವಲ್​ ದೇವರಾಜ್​-ರಾಗಿಣಿ:

ಪ್ರಜ್ವಲ್​ ದೇವರಾಜ್​-ರಾಗಿಣಿ ಅವರದ್ದು ಇಂದು ನಿನ್ನೆಯ ಪ್ರೀತಿಯಲ್ಲ. ಪ್ರಜ್ವಲ್ ದೇವರಾಜ್ 9ನೇ ಕ್ಲಾಸ್​​ನಲ್ಲಿದ್ದಾಗ ಅವರು ರಾಗಿಣಿ ಚಂದ್ರನ್ ಮೊದಲ ಬಾರಿಗೆ ನೋಡಿದ್ದರು. ಆಗ ರಾಗಿಣಿ ಚಂದ್ರನ್ 6ನೇ ಕ್ಲಾಸ್​​ನಲ್ಲಿದ್ದರು. ನಂತರ ಡ್ಯಾನ್ಸ್​ ಕ್ಲಾಸ್​ನಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಲು ಆರಂಭಿಸಿದ್ದರು. ಇವರ ಪ್ರೀತಿಗೆ ಮನೆಯಲ್ಲೂ ಒಪ್ಪಿಗೆ ಸಿಕ್ಕಿತ್ತು. ನಂತರ ಮದುವೆ ಆದರು.

ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್​:

ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗರಾಜ್​ ‘ಲವ್‌ ಬರ್ಡ್ಸ್​’ ಸಿನಿಮಾ ರಿಲೀಸ್​ಗಾಗಿ ಕಾಯುತ್ತಿದ್ದಾರೆ. 2015ರಲ್ಲಿ ತೆರೆಕಂಡ ‘ಚಾರ್ಲಿ’ ಚಿತ್ರದಲ್ಲಿ ಇವರಿಬ್ಬರೂ ಒಟ್ಟಿಗೆ ನಟಿಸಿದ್ದರು. ‘ಚಾರ್ಲಿ’ ಚಿತ್ರದ ಶೂಟಿಂಗ್‌ ಮುಗಿಯುತ್ತಾ ಬಂದಿತ್ತು. ಈ ವೇಳೆ ಒಂದು ದಿನ ಮಿಲನಾ ಅವರನ್ನು ಕಾರಿನಲ್ಲಿ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗಿದ್ದ ಕೃಷ್ಣ ಮದುವೆಗೆ ನೇರವಾಗಿ ಪ್ರಪೋಸ್‌ ಮಾಡಿದ್ದರು. ಮಿಲನಾ ಕೂಡ ಇವರ ಪ್ರಪೋಸ್​ ಒಪ್ಪಿಕೊಂಡರು.

ಮೇಘನಾ ರಾಜ್​- ಚಿರು ಸರ್ಜಾ:

‘ಪೈರಸಿ ಮುಕ್ತ ಕನ್ನಡ ಚಲನಚಿತ್ರ’ ಹೆಸರಿನ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ಮೊಟ್ಟ ಮೊದಲ ಬಾರಿಗೆ ಮೇಘನಾ ರಾಜ್​-ಚಿರಂಜೀವಿ ಸರ್ಜಾ ಭೇಟಿ ಆಗಿದ್ದರು. ನಂತರ ಮೇಘನಾಗೆ ಮೆಸೇಜ್​ ಮಾಡಿ ಚಿರು ಮಾತು ಆರಂಭಿಸಿದ್ದರು. ದ್ವಾರಕೀಶ್ ನಿರ್ಮಾಣದ ‘ಆಟಗಾರ’ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಇಬ್ಬರು ಒಟ್ಟಿಗೆ ನಟಿಸಿದ್ದರು. ಗೆಳೆತನದ ಮೂಲಕ ಆರಂಭವಾದ ಇವರ ಸಂಬಂಧ ನಂತರ ಪ್ರೇಮದ ಹಾದಿ ತುಳಿದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:55 am, Tue, 14 February 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್