AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chaos movie: ‘ಖೆಯೊಸ್​’ ಚಿತ್ರದಲ್ಲಿ ಪುತ್ರ ಅಕ್ಷಿತ್ ಜತೆ ಮೊದಲ ಬಾರಿ ಬಣ್ಣ ಹಚ್ಚಿದ ನಟ ಶಶಿಕುಮಾರ್​; ಫೆ.17ಕ್ಕೆ ರಿಲೀಸ್​

Akshith Shashikumar | Chaos Kannada movie: ಅಕ್ಷಿತ್​ ಶಶಿಕುಮಾರ್​ ನಟನೆಯ ಎರಡನೇ ಚಿತ್ರ ‘ಖೆಯೊಸ್​’. ಈ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಶಶಿಕುಮಾರ್​ ಕೂಡ ಇದರಲ್ಲಿ ನಟಿಸಿದ್ದಾರೆ.

Chaos movie: ‘ಖೆಯೊಸ್​’ ಚಿತ್ರದಲ್ಲಿ ಪುತ್ರ ಅಕ್ಷಿತ್ ಜತೆ ಮೊದಲ ಬಾರಿ ಬಣ್ಣ ಹಚ್ಚಿದ ನಟ ಶಶಿಕುಮಾರ್​; ಫೆ.17ಕ್ಕೆ ರಿಲೀಸ್​
‘ಖೆಯೊಸ್’ ಟ್ರೇಲರ್​ ಬಿಡುಗಡೆ ಕಾರ್ಯಕ್ರಮ
ಮದನ್​ ಕುಮಾರ್​
|

Updated on:Feb 14, 2023 | 3:02 PM

Share

ಒಂದು ಕಾಲದ ಬಹುಬೇಡಿಕೆಯ ನಟ ‘ಸುಪ್ರೀಂ ಹೀರೋ’ ಶಶಿಕುಮಾರ್​ (Shashikumar) ಅವರು ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪವಾಗಿದೆ. ಈಗ ಅವರು ‘ಖೆಯೊಸ್​’ ಚಿತ್ರದಲ್ಲಿ ನಟಿಸಿದ್ದಾರೆ. ಇದು ಅವರ ಪುತ್ರ ಅಕ್ಷಿತ್​ ಶಶಿಕುಮಾರ್​ (Akshith Shashikumar) ಅಭಿನಯದ ಸಿನಿಮಾ ಎಂಬುದು ವಿಶೇಷ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಡಿಫರೆಂಟ್​ ಶೀರ್ಷಿಕೆಯ ಈ ಚಿತ್ರದ ವಿಶೇಷತೆ ಏನು ಎಂಬ ಬಗ್ಗೆ ಚಿತ್ರತಂಡದವರು ಮಾತನಾಡಿದ್ದಾರೆ. ಅಕ್ಷಿತ್​ ಮತ್ತು ಶಶಿಕುಮಾರ್​ ಅವರನ್ನು ಒಂದೇ ಸಿನಿಮಾದಲ್ಲಿ ನೋಡಲು ಅವರ ಫ್ಯಾನ್ಸ್​ ಕಾದಿದ್ದಾರೆ. ಪಾರುಲ್ ಅಗರವಾಲ್ ಹಾಗೂ ಹೇಮಚಂದ್ರ ರೆಡ್ಡಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ‘ಖೆಯೊಸ್​’ ಸಿನಿಮಾ (Chaos Kannada movie) ಫೆಬ್ರವರಿ 17ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಮನುಷ್ಯನ ಮನಸ್ಸಿನಲ್ಲಿ ಆಗುವ ಗೊಂದಲದ ಬಗ್ಗೆ ಹೇಳುವ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ ‘ಖೆಯೊಸ್’. ಅಕ್ಷಿತ್ ಶಶಿಕುಮಾರ್ ಅವರು ಹೀರೋ ಆಗಿ ನಟಿಸಿದ್ದು ಅವರಿಗೆ ಜೋಡಿಯಾಗಿ ಖ್ಯಾತ ನಟಿ ಅದಿತಿ ಪ್ರಭುದೇವ ಬಣ್ಣ ಹಚ್ಚಿದ್ದಾರೆ. ಇದೇ ಮೊದಲ ಬಾರಿಗೆ ಶಶಿಕುಮಾರ್ ಮತ್ತು ಅವರ ಪುತ್ರ ಅಕ್ಷಿತ್​ ಒಟ್ಟಾಗಿ ನಟಿಸಿರುವುದರಿಂದ ನಿರೀಕ್ಷೆ ಮೂಡಿಸಿದೆ.‌ ಈ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ನಡೆದಿದ್ದು, ಅದರಲ್ಲಿ ಶಶಿಕುಮಾರ್​ ಕೂಡ ಭಾಗಿ ಆಗಿದ್ದರು. ವಿಶೇಷ ಅತಿಥಿಗಳಾಗಿ ವಿನೋದ್ ಪ್ರಭಾಕರ್, ನಿರಂಜನ್ ಸುಧೀಂದ್ರ ಹಾಗೂ ಮಂಜು ಪಾವಗಡ ಆಗಮಿಸಿದ್ದರು.

ಇದನ್ನೂ ಓದಿ: Vinod Prabhakar: ಮಾಡರ್ನ್​ ಮಹಾಲಕ್ಷ್ಮಿಗೆ ಮಾಲಾಶ್ರೀ ಸಾತ್​; ‘ಲಂಕಾಸುರ’ ಚಿತ್ರದ ಹೊಸ ಹಾಡು ರಿಲೀಸ್​ ಮಾಡಿದ ಸ್ಟಾರ್​ ನಟಿ

ಇದನ್ನೂ ಓದಿ
Image
‘ಲಕ್ಕಿ ಮ್ಯಾನ್​​ ಸಿನಿಮಾವನ್ನು ಎಲ್ಲರೂ ತಬ್ಬಿಕೊಳ್ಳಿ,​ ಮತ್ತೆ ಬೇಕು ಅಂದ್ರೂ ಇದು ಸಿಗಲ್ಲ’; ಕಿಚ್ಚ ಸುದೀಪ್​
Image
ಮುಖ ತೋರಿಸದೇ ಫೇಮಸ್​ ಆದ ಭಾಸ್ಕರ್​; ಕಿಚ್ಚ ಸುದೀಪ್​ ಬದುಕಿನಲ್ಲೂ ಇದ್ದಾನೆ ಅಂಥ ಒಬ್ಬ ವ್ಯಕ್ತಿ
Image
‘ವಿಕ್ರಾಂತ್​ ರೋಣ’ ಸೂಪರ್​ ಹಿಟ್​; ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ‘ಕಬ್ಜ’ ಮೇಲೆ ಹೆಚ್ಚಿತು ನಿರೀಕ್ಷೆ
Image
Vikrant Rona: ದೆಹಲಿಯಲ್ಲಿ ವೀರೇಂದ್ರ ಹೆಗ್ಗಡೆ ಭೇಟಿ ಮಾಡಿದ ಕಿಚ್ಚ ಸುದೀಪ್​; ಇಲ್ಲಿವೆ ಫೋಟೋಗಳು

ವೃತ್ತಿಯಲ್ಲಿ ವೈದ್ಯರಾಗಿರುವ ಡಾಕ್ಟರ್​ ಜಿ.ವಿ. ಪ್ರಸಾದ್ ಅವರು ‘ಖೆಯೊಸ್​’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಆ ಕಾರಣದಿಂದ ವೈದ್ಯಕೀಯ ಕಾಲೇಜಿನಲ್ಲಿ ನಡೆಯುವ ಕಥೆಯನ್ನೇ ಇಟ್ಟುಕೊಂಡು ಅವರು ಈ ಸಿನಿಮಾ ಮಾಡಿದ್ದಾರೆ. ಅಕ್ಷಿತ್ ಶಶಿಕುಮಾರ್ ಹಾಗೂ ಅದಿತಿ ಪ್ರಭುದೇವ ಅವರು ಈ ಸಿನಿಮಾದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಕ್ಷಿತ್​ ಶಶಿಕುಮಾರ್​ ನಟನೆಯ ಎರಡನೇ ಚಿತ್ರ ಇದು. ‘ನಾನು ಅಪ್ಪನ ನೆರಳಿನಲ್ಲಿ ಅರಳಿದರೂ ಕೂಡ ಬೆಳೆಯಲು ಬೇರೆ ಆಶ್ರಯ ಬೇಕಾಗುತ್ತದೆ. ಈ ವಿಷಯದಲ್ಲಿ ಸ್ನೇಹಿತರು ಅತ್ಯಂತ ಸಹಕಾರ ನೀಡುತ್ತಿದ್ದಾರೆ’ ಎಂದಿದ್ದಾರೆ ಅಕ್ಷಿತ್​. ‘ಖೆಯೊಸ್’ ಟ್ರೇಲರ್​​ ಬಿಡುಗಡೆ ಬಳಿಕ ಮಾತನಾಡಿದ ಶಶಿಕುಮಾರ್ ಅವರು ಇಡೀ ತಂಡದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಅದೇ ವೇದಿಕೆಯಲ್ಲಿ ಡ್ಯಾನ್ಸ್​ ಮಾಡುವ ಮೂಲಕ ಅವರು ಎಲ್ಲರ ಗಮನ ಸೆಳೆದರು. ವಿನೋದ್ ಪ್ರಭಾಕರ್ ಕೂಡ ‘ಖೆಯೊಸ್’ ತಂಡಕ್ಕೆ ಶುಭ ಕೋರಿದರು. ವಿಜಯ್​ ಹರಿತ್ಸ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:02 pm, Tue, 14 February 23

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?