ಯಶ್​ ನಟನೆಯ ‘ಕೆಜಿಎಫ್​ 2’ಗೆ ಹೆದರಿದ ಬಾಲಿವುಡ್​; ರಿಲೀಸ್​ ದಿನಾಂಕ ಮುಂದೂಡಿದ ಸ್ಟಾರ್​ ನಟ

| Updated By: ರಾಜೇಶ್ ದುಗ್ಗುಮನೆ

Updated on: Nov 20, 2021 | 7:11 PM

ಏಪ್ರಿಲ್​ 14ರಂದು ವರುಣ್​ ಧವನ್​ ಅಭಿನಯದ  ‘ಭೇಡಿಯಾ’ ಸಿನಿಮಾ ರಿಲೀಸ್​ ಆಗಬೇಕಿತ್ತು. ಆದರೆ, ಈಗ ಈ ಚಿತ್ರದ ರಿಲೀಸ್​ ದಿನಾಂಕವನ್ನು ಮುಂದೂಡಲು ಸಿನಿಮಾ ತಂಡ ನಿರ್ಧರಿಸಿದೆ ಎನ್ನಲಾಗುತ್ತಿದೆ.

ಯಶ್​ ನಟನೆಯ ‘ಕೆಜಿಎಫ್​ 2’ಗೆ ಹೆದರಿದ ಬಾಲಿವುಡ್​; ರಿಲೀಸ್​ ದಿನಾಂಕ ಮುಂದೂಡಿದ ಸ್ಟಾರ್​ ನಟ
‘ಕೆಜಿಎಫ್​ 2’ ಸಿನಿಮಾ ತಂಡ
Follow us on

ಯಶ್ (Yash)​ ನಟನೆಯ ‘ಕೆಜಿಎಫ್​ 2’ (KGF Chapter 2) ಸಿನಿಮಾ ಬಗ್ಗೆ ಇರುವ ನಿರೀಕ್ಷೆ ಸಣ್ಣಮಟ್ಟದಲ್ಲ. ಪ್ರಶಾಂತ್​ ನೀಲ್ (Prashanth Neel)​ ಕಸುಬುದಾರಿಕೆ ಏನು ಎಂಬುದು ‘ಕೆಜಿಎಫ್​’ ಮೂಲಕ ಪ್ರೇಕ್ಷಕರಿಗೆ ಗೊತ್ತಾಗಿದೆ. ಈ ಕಾರಣಕ್ಕೆ ‘ಕೆಜಿಎಫ್​ ಚಾಪ್ಟರ್​ 2’ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಂಜಯ್​ ದತ್​, ರವೀನಾ ಟಂಡನ್​ ನಟಿಸಿರುವುದರಿಂದ ಸಿನಿಮಾದ ಬಲ ಹೆಚ್ಚಿದೆ. ಈ ಎಲ್ಲಾ ಕಾರಣಕ್ಕೆ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್​ ಮಾಡೋಕೆ ಪ್ಲ್ಯಾನ್​ ಹಾಕಿಕೊಳ್ಳಲಾಗಿದೆ. ಏಪ್ರಿಲ್​ 14ರಂದು ಚಿತ್ರ ರಿಲೀಸ್​ ಆಗುತ್ತಿದೆ. ಈಗ ಬಾಲಿವುಡ್​ನ ಸ್ಟಾರ್​ ನಟನ ಸಿನಿಮಾವೊಂದು ಸದ್ದಿಲ್ಲದೆ ರಿಲೀಸ್ ದಿನಾಂಕ ಮುಂದೂಡಿದೆ.

ಆಮಿರ್​ ಖಾನ್​ ನಟನೆಯ ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರ ಕ್ರಿಸ್​ಮಸ್​ ನಿಮಿತ್ತ ಡಿಸೆಂಬರ್ ತಿಂಗಳಲ್ಲೇ ತೆರೆಗೆ ಬರಬೇಕಿತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಚಿತ್ರವನ್ನು ಫೆಬ್ರವರಿ ತಿಂಗಳಲ್ಲಿ ತೆರೆಗೆ ತರೋಕೆ ಪ್ಲ್ಯಾನ್​ ನಡೆದಿತ್ತು. ಅದು ಕೈಗೂಡಿಲ್ಲ. ಈಗ ಏಪ್ರಿಲ್​ 14ರಂದು ಆಮಿರ್​ ಖಾನ್​ ಸಿನಿಮಾ ರಿಲೀಸ್​ ಆಗುತ್ತಿದೆ. ಇದೇ ದಿನ ವರುಣ್​ ಧವನ್​ ಅಭಿನಯದ  ‘ಭೇಡಿಯಾ’ ಸಿನಿಮಾ ರಿಲೀಸ್​ ಆಗಬೇಕಿತ್ತು. ಆದರೆ, ಈಗ ಈ ಚಿತ್ರದ ರಿಲೀಸ್​ ದಿನಾಂಕವನ್ನು ಮುಂದೂಡಲು ಸಿನಿಮಾ ತಂಡ ನಿರ್ಧರಿಸಿದೆ ಎನ್ನಲಾಗುತ್ತಿದೆ.

‘ಕೆಜಿಎಫ್​’ ಬಾಲಿವುಡ್​ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ಈ ಕಾರಣಕ್ಕೆ ‘ಕೆಜಿಎಫ್​ 2’ ಗೆ ದೊಡ್ಡ ಓಪನಿಂಗ್​ ಸಿಗುವ ಸಾಧ್ಯತೆ ಇದೆ. ಈ ಮೊದಲಿನಿಂದಲೂ ‘ಭೇಡಿಯಾ’ ಚಿತ್ರತಂಡ ಯಶ್​ ಸಿನಿಮಾ ಎದುರು ಬರಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿ ಇತ್ತು ಎನ್ನಲಾಗಿದೆ. ಈಗ ಆಮಿರ್​ ಖಾನ್​ ಚಿತ್ರ ಕೂಡ ಅದೇ ದಿನ ಬರುತ್ತಿರುವುದಕ್ಕೆ ರಿಲೀಸ್​ ದಿನಾಂಕ ಮುಂದೂಡುವ ನಿರ್ಧಾರಕ್ಕೆ ಬಂದಿದೆ ಎಂಬುದನ್ನು ಖಚಿತಪಡಿಸಿವೆ ಬಾಲಿವುಡ್​ ಮೂಲಗಳು.

‘ಕೆಜಿಎಫ್​ 2’ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಅದರ ಬಗ್ಗೆ ನಿರೀಕ್ಷೆ ಹುಟ್ಟೋಕೆ ಹಲವು ಕಾರಣಗಳಿವೆ. ರೇಸ್​ನಲ್ಲಿ ಆಮಿರ್​ ಖಾನ್​ ಸಿನಿಮಾವನ್ನು ‘ಕೆಜಿಎಫ್​ 2’ ಹಿಂದಿಕ್ಕಬಹುದು ಎಂಬ ಮಾತು ಪ್ರೇಕ್ಷಕರ ವಲಯದಲ್ಲಿ ಕೇಳಿ ಬರುತ್ತಿದೆ. ಈ ಎಲ್ಲಾ ಕಾರಣಕ್ಕೆ ‘ಭೇಡಿಯಾ’ ಚಿತ್ರ ಹಿಂದೆ ಸರಿದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಕೆಜಿಎಫ್​ 2’ ರಿಲೀಸ್​ಗೂ ಮುನ್ನ ಓಟಿಟಿಗೆ ಬರ್ತಾರೆ ರವೀನಾ ಟಂಡನ್​; ಡಿ.10ಕ್ಕಾಗಿ ಅಭಿಮಾನಿಗಳ ಕಾತರ

ಯಶ್​ ನಟನೆಯ ‘ಕೆಜಿಎಫ್​ 2’ಗೆ ಸೆಡ್ಡು ಹೊಡೆಯಲಿದೆ ಸ್ಟಾರ್​ ನಟನ ಸಿನಿಮಾ; ಗೆಲ್ಲೋದು ಯಾರು ನೀವೇ ಹೇಳಿ

Published On - 7:09 pm, Sat, 20 November 21