Vasanthi Nalidaga: ಡಿಸೆಂಬರ್​ ತಿಂಗಳಲ್ಲಿ ಸಿನಿಮಾಗಳ ಭರಾಟೆ; ನಾಲ್ಕನೇ ವಾರದಲ್ಲೂ ‘ವಾಸಂತಿ ನಲಿದಾಗ’

| Updated By: ಮದನ್​ ಕುಮಾರ್​

Updated on: Dec 19, 2022 | 8:57 PM

ಹೊಸಬರ ಚಿತ್ರಕ್ಕೆ ಒಮ್ಮೆಲೇ ದೊಡ್ಡ ಓಪನಿಂಗ್​ ಸಿಗುವುದು ಕಷ್ಟ. ನಿಧಾನವಾಗಿ ಸೆಳೆಯುವ ಗುಣ ಇಂಥ ಸಿನಿಮಾಗಳಿಗೆ ಇರುತ್ತವೆ. ಆ ಭರವಸೆಯೊಂದಿಗೆ ನಾಲ್ಕನೇ ವಾರಕ್ಕೆ ‘ವಾಸಂತಿ ನಲಿದಾಗ’ ಕಾಲಿಟ್ಟಿದೆ.

Vasanthi Nalidaga: ಡಿಸೆಂಬರ್​ ತಿಂಗಳಲ್ಲಿ ಸಿನಿಮಾಗಳ ಭರಾಟೆ; ನಾಲ್ಕನೇ ವಾರದಲ್ಲೂ ‘ವಾಸಂತಿ ನಲಿದಾಗ’
‘ವಾಸಂತಿ ನಲಿದಾಗ’ ಸಿನಿಮಾ ಪೋಸ್ಟರ್​
Follow us on

ಚಿತ್ರರಂಗದಲ್ಲಿ ಡಿಸೆಂಬರ್​ ತಿಂಗಳು ಹಲವರ ಪಾಲಿಗೆ ಅದೃಷ್ಟ ತಂದುಕೊಟ್ಟಿದ್ದುಂಟು. ಅದೇ ಕಾರಣಕ್ಕೋ ಏನೋ ಹಲವಾರು ಸಿನಿಮಾಗಳು ಈ ತಿಂಗಳಲ್ಲೇ ತೆರೆಕಾಣಲು ಮುಗಿ ಬೀಳುತ್ತವೆ. ಅನೇಕ ಚಿತ್ರಗಳು ಒಮ್ಮೆಲೇ ರಿಲೀಸ್​ ಆದರೆ ಯಾವುದನ್ನು ನೋಡೋದು ಯಾವುದನ್ನು ಬಿಡೋದು ಎಂಬ ಪರಿಸ್ಥಿತಿ ಪ್ರೇಕ್ಷಕನದ್ದು. ಸಿನಿಮಾ ಚೆನ್ನಾಗಿದ್ದರೂ ಚಿತ್ರಮಂದಿರದಲ್ಲಿ ಅದನ್ನು ಉಳಿಸಿಕೊಳ್ಳಲು ಹೊಸಬರು ಸಖತ್​ ಕಷ್ಟಪಡಬೇಕಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಕನ್ನಡದ ‘ವಾಸಂತಿ ನಲಿದಾಗ’ (Vasanthi Nalidaga) ಸಿನಿಮಾ ಈಗ ನಾಲ್ಕನೇ ವಾರದಲ್ಲಿ ಪ್ರದರ್ಶನ ಮುಂದುವರಿಸಿದೆ. ಈ ಚಿತ್ರಕ್ಕೆ ಹೊಸ ನಟ ರೋಹಿತ್​ ಶ್ರೀಧರ್​ ಹೀರೋ. ಅವರ ಜೊತೆ ಸಾಧು ಕೋಕಿಲ (Sadhu Kokila), ಸುಧಾರಾಣಿ, ಸಾಯಿ ಕುಮಾರ್​ ಅವರಂತಹ ಅನುಭವಿ ಕಲಾವಿದರು ನಟಿಸಿದ್ದಾರೆ.

ಡಿಸೆಂಬರ್​ 2ರಂದು ತೆರೆಕಂಡ ‘ವಾಸಂತಿ ನಲಿದಾಗ’ ಚಿತ್ರ 2ನೇ ವೀಕೆಂಡ್​ನಲ್ಲೂ ತನ್ನ ಸ್ಥಾನ ಭದ್ರಪಡಿಸಿಕೊಂಡಿತು. ಆದರೆ ಮೂರನೇ ವಾರದಲ್ಲಿ ಈ ಚಿತ್ರಕ್ಕೆ ನಿಜಕ್ಕೂ ಸವಾಲು ಎದುರಾಯಿತು. ಯಾಕೆಂದರೆ ಈ ಡಿ.16ರಂದು ಬಿಡುಗಡೆ ಆದ ಹಾಲಿವುಡ್​ನ ದೈತ್ಯ ಸಿನಿಮಾ ‘ಅವತಾರ್​: ದಿ ವೇ ಆಫ್​ ವಾಟರ್​’ ಚಿತ್ರ ನೂರಾರು ಚಿತ್ರಮಂದಿಗಳನ್ನು ತನ್ನ ತೆಕ್ಕೆಗೆ ಪಡೆದುಕೊಂಡಿತು. ಅದರ ನಡುವೆಯೂ ಬೆಂಗಳೂರಿನ ಕೆಲವು ಥಿಯೇಟರ್​ಗಳಲ್ಲಿ ‘ವಾಸಂತಿ ನಲಿದಾಗ’ ಸಿನಿಮಾ ಪ್ರದರ್ಶನ ಮುಂದುವರಿಸಿದೆ.

ಇದನ್ನೂ ಓದಿ: Avatar 2: 1650 ರೂ. ದಾಟಿದ ‘ಅವತಾರ್​ 2’ ಟಿಕೆಟ್​ ಬೆಲೆ; ಆದ್ರೂ ಮುಗಿಬಿದ್ದು ಬುಕ್​ ಮಾಡುತ್ತಿರುವ ಪ್ರೇಕ್ಷಕರು

ಇದನ್ನೂ ಓದಿ
Avatar The Way of Water: ‘ಕೆಜಿಎಫ್​ 2’ ವರ್ಸಸ್​ ‘ಅವತಾರ್​ 2’: ಮೊದಲ ದಿನದ ಟಿಕೆಟ್​ ಬುಕಿಂಗ್​ನಲ್ಲಿ ಯಶ್​ ಚಿತ್ರದ್ದೇ ಮೇಲುಗೈ
Avatar 2: ‘ಅವತಾರ್​: ದಿ ವೇ ಆಫ್​ ವಾಟರ್​’ ಚಿತ್ರ ಅದ್ದೂರಿ ರಿಲೀಸ್​; ಆದರೆ ಮೊದಲ ದಿನವೇ ಪೈರಸಿ ಕಾಟ
Avatar 2: 1650 ರೂ. ದಾಟಿದ ‘ಅವತಾರ್​ 2’ ಟಿಕೆಟ್​ ಬೆಲೆ; ಆದ್ರೂ ಮುಗಿಬಿದ್ದು ಬುಕ್​ ಮಾಡುತ್ತಿರುವ ಪ್ರೇಕ್ಷಕರು
‘ಅವತಾರ್​’ ಸರಣಿ ಚಿತ್ರಗಳ ಬಜೆಟ್ ಎಷ್ಟು ಸಾವಿರ ಕೋಟಿ ರೂಪಾಯಿ? ಸೀಕ್ವೆಲ್ ಕೈ ಬಿಡುವ ಆಲೋಚನೆಯಲ್ಲಿ ನಿರ್ದೇಶಕ  

ಹೊಸಬರ ಚಿತ್ರಕ್ಕೆ ಸಡನ್​ ಆಗಿ ದೊಡ್ಡ ಓಪನಿಂಗ್​ ಸಿಗುವುದು ಕಷ್ಟ. ನಿಧಾನವಾಗಿ ಸೆಳೆಯುವ ಗುಣ ಇಂಥ ಸಿನಿಮಾಗಳಿಗೆ ಇರುತ್ತವೆ. ಆ ಭರವಸೆಯೊಂದಿಗೆ ನಾಲ್ಕನೇ ವಾರಕ್ಕೆ ‘ವಾಸಂತಿ ನಲಿದಾಗ’ ಕಾಲಿಟ್ಟಿದೆ. ಈ ಸಿನಿಮಾದಲ್ಲಿನ ಒಂದಷ್ಟು ಅಂಶಗಳು ಪ್ರೇಕ್ಷಕರಿಗೆ ಇಷ್ಟ ಆಗುತ್ತಿವೆ. ಪಕ್ಕಾ ಕಾಲೇಜು ಕಹಾನಿಯನ್ನು ಇಟ್ಟುಕೊಂಡು ಈ ಸಿನಿಮಾ ಮೂಡಿಬಂದಿದೆ. ವಿದ್ಯಾರ್ಥಿ ಜೀವನದಲ್ಲಿ ಎದುರಾಗುವ ಮೊದಲ ಕ್ರಶ್​, ಮೊದಲ ಪ್ರೀತಿ, ಎಕ್ಸಾಂ ಟೆನ್ಷನ್​, ತರಲೆ-ತಮಾಷೆ ಸೇರಿದಂತೆ ಹತ್ತಾರು ವಿಚಾರಗಳು ಈ ಸಿನಿಮಾದಲ್ಲಿ ಮನರಂಜನೆ ನೀಡುತ್ತಿವೆ.

ಇದನ್ನೂ ಓದಿ: Avatar 2: ‘ಅವತಾರ್​: ದಿ ವೇ ಆಫ್​ ವಾಟರ್​’ ಚಿತ್ರ ಅದ್ದೂರಿ ರಿಲೀಸ್​; ಆದರೆ ಮೊದಲ ದಿನವೇ ಪೈರಸಿ ಕಾಟ

‘ವಾಸಂತಿ ನಲಿದಾಗ’ ಸಿನಿಮಾದಲ್ಲಿ ಹೊಸಬರು ಮತ್ತು ಹಳಬರ ಸಂಗಮ ಆಗಿದೆ. ಹೊಸ ಪ್ರತಿಭೆ ರೋಹಿತ್​ ಶ್ರೀಧರ್​ ಮುಖ್ಯ ಪಾತ್ರದಲ್ಲಿ ನಟಿಸಿದ್ದರೆ, ಅವರ ಜೊತೆ ಸಾಧು ಕೋಕಿಲ, ಸುಧಾರಾಣಿ, ಸಾಯಿ ಕುಮಾರ್​ ಅವರಂತಹ ಅನುಭವಿ ಕಲಾವಿದರು ಸಾಥ್ ನೀಡಿದ್ದಾರೆ.

ಭಾವನಾ ಶ್ರೀನಿವಾಸ್​, ಜೀವಿತಾ ವಸಿಷ್ಠ, ರಾಘು ರಾಮನಕೊಪ್ಪ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಜೇನುಗೂಡು ಕೆ.ಎನ್​. ಶ್ರೀಧರ್​ ಬಂಡವಾಳ ಹೂಡಿದ್ದಾರೆ. ರವೀಂದ್ರ ವಂಶಿ ನಿರ್ದೇಶನ, ಶ್ರೀಗುರು ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.