ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಊರ್ವಶಿ ಪುತ್ರಿ ತೇಜಾಲಕ್ಷ್ಮಿ; ತೆರೆಮೇಲೆ ಒಂದಾದ ಅಮ್ಮ-ಮಗಳು

'ಶ್ರಾವಣ ಬಂತು' ಖ್ಯಾತಿಯ ಹಿರಿಯ ನಟಿ ಊರ್ವಶಿ ಅವರ ಪುತ್ರಿ ತೇಜಾ ಲಕ್ಷ್ಮಿ 'ಬುಲ್ಲಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ. ಭುವನ್ ಪೊನ್ನಣ್ಣ ನಾಯಕರಾಗಿರುವ ಈ ಚಿತ್ರದಲ್ಲಿ ಊರ್ವಶಿ ಹಾಗೂ ಅವರ ಮಗಳು ಮೊದಲ ಬಾರಿಗೆ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಊರ್ವಶಿ ಪುತ್ರಿ ತೇಜಾಲಕ್ಷ್ಮಿ; ತೆರೆಮೇಲೆ ಒಂದಾದ ಅಮ್ಮ-ಮಗಳು
ಊರ್ವಶಿ ಹಾಗೂ ಅವರ ಮಗಳು ತೇಜಾಲಕ್ಷ್ಮಿ

Updated on: Jul 30, 2026 | 12:15 PM

ಮುಖ್ಯಾಂಶಗಳು

  • ಚಂದನವನಕ್ಕೆ ಬಂದ ಊರ್ವಶಿ ಮಗಳು
  • ಓಂ ಪ್ರಕಾಶ್ ರಾವ್ ನಿರ್ದೇಶನದ 'ಬುಲ್ಲಿ' ಚಿತ್ರಕ್ಕೆ ತೇಜಾ ಲಕ್ಷ್ಮಿ ನಾಯಕಿ
  • ಐಟಿ ಉದ್ಯೋಗ ಬಿಟ್ಟು ಬಣ್ಣದ ಲೋಕಕ್ಕೆ ಬಂದ ಸ್ಟಾರ್ ಕಿಡ್ 

ಕನ್ನಡ ಚಿತ್ರರಂಗದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದವರು ನಟಿ ಊರ್ವಶಿ (Urvashi). 1984ರಲ್ಲಿ ಬಂದ ರಾಜ್​​ಕುಮಾರ್ ನಟನೆಯ ‘ಶ್ರಾವಣಬಂತು’ ಸಿನಿಮಾ ಮೂಲಕ ಅವರು ಕನ್ನಡಕ್ಕೆ ಕಾಲಿಟ್ಟರು. ಆ ಬಳಿಕ ಸಾಲು ಸಾಲು ಕನ್ನಡ ಸಿನಿಮಾ ಮಾಡಿದರು. ‘ಹಬ್ಬ’, ‘ರಾಮ ಶ್ಯಾಮ ಭಾಮ’ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಊರ್ವಶಿ ಮತ್ತೊಮ್ಮೆ ಚಂದನವನಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಬಾರಿ ಅವರು ತಮ್ಮ ಮಗಳನ್ನು ಕೂಡ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದು ವಿಶೇಷ.

ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದ, ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ ‘ಬುಲ್ಲಿ’ ಸಿನಿಮಾ ಮೂಲಕ ಊರ್ವಶಿ ಅವರ ಪುತ್ರಿ ತೇಜಾಲಕ್ಷ್ಮಿ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ತಾಯಿ-ಮಗಳ ಮೊದಲ ಆನ್‌ಸ್ಕ್ರೀನ್ ಜುಗಲ್‌ಬಂದಿ

ನಟಿ ಊರ್ವಶಿ ಅವರು ಹಲವು ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದಾರೆ. ಇದು ಅವರ 729ನೇ ಸಿನಿಮಾ! ಇದರಲ್ಲಿ ಅವರು ನಾಯಕ ಭುವನ್ ಪೊನ್ನಣ್ಣ ಅವರ ತಾಯಿ ಯಶೋದಮ್ಮ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲೇ ಓದಿ ಬೆಳೆದು, ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ತೇಜಾಲಕ್ಷ್ಮಿ ಈಗಾಗಲೇ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ತಾಯಿ-ಮಗಳು ಇಬ್ಬರೂ ಒಟ್ಟಾಗಿ ತೆರೇ ಮೇಲೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ಅದೂ ಕೂಡ ಕನ್ನಡ ಚಿತ್ರದ ಮೂಲಕ ಈ ಜೋಡಿ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.

ಇದನ್ನೂ ಓದಿ: ‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ

ರಾಜ್​​ಕುಮಾರ್ ನೆನೆದ ಊರ್ವಶಿ

ತಮ್ಮ ಹೊಸ ಚಿತ್ರದ ಕುರಿತು ಮಾತನಾಡಿರುವ ನಟಿ ಊರ್ವಶಿ, ‘ನನಗೆ ಕನ್ನಡ ಚಿತ್ರರಂಗ ಹಾಗೂ ಇಲ್ಲಿನ ಪ್ರೇಕ್ಷಕರ ಜೊತೆಗೆ ಒಳ್ಳೆಯ ಬಾಂಧವ್ಯವಿದೆ. ಡಾ. ರಾಜ್‌ಕುಮಾರ್ ಅವರಂತಹ ಮಹಾನ್ ನಟರೊಂದಿಗೆ ನಟಿಸಿದ ಹೆಮ್ಮೆ ನನಗಿದೆ. ಹಲವು ವರ್ಷಗಳ ನಂತರ ಒಳ್ಳೆಯ ಕಥೆ ಸಿಕ್ಕಿದ್ದರಿಂದ ‘ಬುಲ್ಲಿ’ ಚಿತ್ರದ ಮೂಲಕ ಮರಳಿ ಬಂದಿದ್ದೇನೆ. ಈ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದರೆ ದೊಡ್ಡ ನಷ್ಟವಾಗುತ್ತಿತ್ತು ಅನಿಸುತ್ತಿದೆ. ನನ್ನ ಮಗಳಿಗೂ ಕನ್ನಡದಲ್ಲೇ ಮೊದಲ ಬಾರಿಗೆ ನನ್ನೊಂದಿಗೆ ನಟಿಸುವ ಅವಕಾಶ ಸಿಕ್ಕಿರುವುದು ಅತ್ಯಂತ ಸಂತೋಷ ತಂದಿದೆ’ ಎಂದು ಹಂಚಿಕೊಂಡಿದ್ದಾರೆ. ಈಗಾಗಲೇ ಚಿತ್ರದ 18 ದಿನಗಳ ಶೂಟಿಂಗ್ ಮುಕ್ತಾಯಗೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us