Vidyabharan: ವೈಷ್ಣವಿ ಜತೆಗಿನ ಮದುವೆ ಮಾತುಕತೆ ಕ್ಯಾನ್ಸಲ್​ ಬಳಿಕ ಕಮಿಷನರ್​ಗೆ ದೂರು ನೀಡಿದ ವಿದ್ಯಾಭರಣ್​

| Updated By: ಮದನ್​ ಕುಮಾರ್​

Updated on: Nov 25, 2022 | 6:25 PM

Vaishnavi Gowda | Vidyabharan: ‘ನನಗೂ ಮತ್ತು ವೈಷ್ಣವಿ ಗೌಡ ಅವರಿಗೂ ಯಾವುದೇ ರೀತಿಯ ಎಂಗೇಜ್​ಮೆಂಟ್​ ಆಗಿಲ್ಲ. ಕೇವಲ ಮದುವೆ ಮಾತುಕತೆ ಸಮಾರಂಭ ಅಷ್ಟೇ ಆಗಿತ್ತು’ ಎಂದು ವಿದ್ಯಾಭರಣ್​ ಹೇಳಿದ್ದಾರೆ.

Vidyabharan: ವೈಷ್ಣವಿ ಜತೆಗಿನ ಮದುವೆ ಮಾತುಕತೆ ಕ್ಯಾನ್ಸಲ್​ ಬಳಿಕ ಕಮಿಷನರ್​ಗೆ ದೂರು ನೀಡಿದ ವಿದ್ಯಾಭರಣ್​
ವಿದ್ಯಾಭರಣ್
Follow us on

ಕಿರುತೆರೆ ನಟಿ ವೈಷ್ಣವಿ ಗೌಡ (Vaishnavi Gowda) ​ ಮತ್ತು ನಟ ವಿದ್ಯಾಭರಣ್​ ನಡುವೆ ಮದುವೆ ಮಾತುಕತೆ ನಡೆದಿತ್ತು. ಆದರೆ ಯುವತಿಯೊಬ್ಬರು ವಿದ್ಯಾಭರಣ್​ (Vidyabharan) ಮೇಲೆ ಒಂದಷ್ಟು ಆರೋಪಗಳನ್ನು ಮಾಡಿದ ಆಡಿಯೋ ಕ್ಲಿಪ್​ ವೈರಲ್​ ಆದ ಬಳಿಕ ಈ ಮದುವೆ ಮಾತುಕಥೆಯನ್ನು ಕೈ ಬಿಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್​ ಆಯುಕ್ತರಿಗೆ ವಿದ್ಯಾಭರಣ್​ ಅವರು ದೂರು ನೀಡಿದ್ದಾರೆ. ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ‘ಮುಂದಿನ ತನಿಖೆಗಾಗಿ ಸುಬ್ರಹ್ಮಣ್ಯಪುರ ಪೊಲೀಸ್​ ಠಾಣೆಗೆ ಕಮಿಷನರ್ ಆದೇಶ ನೀಡಿದ್ದಾರೆ’ ಎಂದು ವಿದ್ಯಾಭರಣ್​ ಹೇಳಿದ್ದಾರೆ.

ಪೊಲೀಸ್​ ವ್ಯವಸ್ಥೆ ಮೇಲೆ ನಂಬಿಕೆ ಇದೆ:

‘ನ್ಯಾಯ ಒದಗಿಸಿಕೊಡುತ್ತೇವೆ ಎಂದು ಕಮಿಷನರ್​ ಸರ್​ ಹೇಳಿದ್ದಾರೆ. ಪೊಲೀಸ್​ ವ್ಯವಸ್ಥೆ ಮೇಲೆ ನಮಗೆ ನಂಬಿಕೆ ಇದೆ. ಆಡಿಯೋದಲ್ಲಿ ಇರೋದೆಲ್ಲ ಸುಳ್ಳು ಅಂತ ನಾವು ಸಾಬೀತು ಮಾಡುತ್ತೇವೆ. ಅದರ ಹಿಂದೆ ಇರೋದು ಯಾರು ಎನ್ನೋದು ಪತ್ತೆ ಹಚ್ಚುತ್ತೇವೆ. ನನ್ನ ಮತ್ತು ಕುಟುಂಬಕ್ಕೆ ಧಕ್ಕೆ ತರುವ ಉದ್ದೇಶದಿಂದ ಆಡಿಯೋ ಹರಿಬಿಡಲಾಗಿದೆ. ಪೊಲೀಸ್​ ದೂರಿನಲ್ಲಿ ಸಂಪೂರ್ಣ ವಿವರ ನೀಡಿದ್ದೇವೆ. ಆಡಿಯೋ ಹಿಂದಿರೋದು ಯಾರು ಅನ್ನೋದು ಇನ್ನೆರಡು ದಿನಗಳಲ್ಲಿ ಗೊತ್ತಾಗಲಿದೆ’ ಎಂದು ವಿದ್ಯಾ ಭರಣ್​ ಹೇಳಿದ್ದಾರೆ.

ಇದನ್ನೂ ಓದಿ
ಮದುವೆ ಮಾತುಕತೆ ಕ್ಯಾನ್ಸಲ್ ಆಗಿದ್ದೇಕೆ? ಮಾಹಿತಿ ನೀಡಿದ ನಟಿ ವೈಷ್ಣವಿ ಗೌಡ ತಂದೆ
Vaishnavi Gowda: ವಿದ್ಯಾಭರಣ್ ಜತೆಗಿನ ಮದುವೆ ಮಾತುಕತೆ ಕ್ಯಾನ್ಸಲ್; ಬೇಸರ ತೋಡಿಕೊಂಡ ವೈಷ್ಣವಿ ಗೌಡ
‘ವೈಷ್ಣವಿ ಜತೆ ಮಾತನಾಡಿಲ್ಲ, ಇನ್ನೂ ನಿಶ್ಚಿತಾರ್ಥ ನಡೆದಿಲ್ಲ’; ಉದ್ಯಮಿ ವಿದ್ಯಾಭರಣ್ ಸ್ಪಷ್ಟನೆ
ಆರ್​ಸಿಬಿ ಮಾಸ್ಕ್​ ಧರಿಸಿ ಮಿಂಚಿದ ವೈಷ್ಣವಿ ಗೌಡ; ಈ ಸಲ ಕಪ್​ ನಮ್ಮದೇ ಎಂದ ಸನ್ನಿಧಿ

ಶಂಕರ್​ ಬಿದರಿ ಫೋಟೋದಲ್ಲಿ ಇದ್ದಿದ್ದು ಯಾಕೆ?

ವೈಷ್ಣವಿ ಗೌಡ ಮತ್ತು ವಿದ್ಯಾಭರಣ್​ ಮದುವೆ ಮಾತುಕತೆ ವೇಳೆ ನಿವೃತ್ತಿ ಪೊಲೀಸ್​ ಅಧಿಕಾರಿ ಶಂಕರ್​ ಬಿದರಿ ಅವರು ಇದ್ದರು. ಆ ಫೋಟೋ ವೈರಲ್​ ಆಗಿತ್ತು. ಅವರ ಉಪಸ್ಥಿತಿ ಬಗ್ಗೆ ವಿದ್ಯಾಭರಣ್​ ಮಾತನಾಡಿದ್ದಾರೆ. ‘ಶಂಕರ್​ ಬಿದರಿ ಅವರು ನಮ್ಮ ಫ್ಯಾಮಿಲಿ ಫ್ರೆಂಡ್​. ನಮಗೆ ಅವರು ಸಾಕಷ್ಟು ಮಾರ್ಗದರ್ಶನ ನೀಡಿದ್ದಾರೆ. ನಮ್ಮ ಕುಟುಂಬದ ಎಲ್ಲ ಕಾರ್ಯಕ್ರಮಗಳಲ್ಲೂ ಅವರು ಇರುತ್ತಾರೆ’ ಎಂದಿದ್ದಾರೆ ವಿದ್ಯಾಭರಣ್​.

ಎಂಗೇಜ್​ಮೆಂಟ್​ ಆಗಿಲ್ಲ:

‘ನನಗೂ ಮತ್ತು ವೈಷ್ಣವಿ ಗೌಡ ಅವರಿಗೂ ಯಾವುದೇ ರೀತಿಯ ಎಂಗೇಜ್​ಮೆಂಟ್​ ಆಗಿಲ್ಲ. ಅದೊಂದು ಮದುವೆ ಮಾತುಕಥೆ ಸಮಾರಂಭ ಅಷ್ಟೇ. ನಮ್ಮ ಕಡೆ ಅದನ್ನು ವೀಳ್ಯದೆಲೆ ಶಾಸ್ತ್ರ ಎನ್ನುತ್ತೇವೆ. ನಮ್ಮಿಬ್ಬರ ಮನೆ ದೇವರು ಒಂದೇ ಆಗಿರುವುದರಿಂದ ಕಾರ್ತಿಕ ಮಾಸದಲ್ಲಿ ಏನಾದರೂ ಶುಭ ಕಾರ್ಯ ಮಾಡಬೇಕು ಎಂಬ ಉದ್ದೇಶ ನಮ್ಮ ಕುಟುಂಬದವರಿಗೆ ಇತ್ತು. ಅದಕ್ಕಾಗಿ ಅಂದು ಹಾರ ಬದಲಾಯಿಸಿಕೊಂಡಿದ್ದೆವು’ ಎಂದು ವಿದ್ಯಾಭರಣ್​ ಸ್ಪಷ್ಟನೆ ನೀಡಿದ್ದಾರೆ.

2016ರಲ್ಲಿ ‘ಚಾಕ್ಲೆಟ್​ ಬಾಯ್​’ ಸಿನಿಮಾ ಶೂಟಿಂಗ್​ ಮಾಡುವಾಗ ವೈಷ್ಣವಿ ಮತ್ತು ವಿದ್ಯಾಭರಣ್​ ನಡುವೆ ಪರಿಚಯ ಬೆಳೆದಿತ್ತು. ‘ನಾವಿಬ್ಬರೂ ಫ್ಯಾಮಿಲಿ ಫ್ರೆಂಡ್ಸ್​ ಆಗಿದ್ವಿ. ಫೋನ್​ ಸಂಪರ್ಕ ಇರಲಿಲ್ಲ’ ಎಂದು ವಿದ್ಯಾಭರಣ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:25 pm, Fri, 25 November 22