ಮಗಳು ಏನು ನಿರ್ಧಾರ ತೆಗೆದುಕೊಳ್ಳುತ್ತಾಳೋ ಅದನ್ನು ನಾವು ಒಪ್ಪುತ್ತೇವೆ ಎಂದ ವೈಷ್ಣವಿ ಪಾಲಕರು
ಇಂದು (ನವೆಂಬರ್ 26) ನಡೆದ ಸುದ್ದಿಗೋಷ್ಠಿಯಲ್ಲಿ ವೈಷ್ಣವಿ ಪಾಲಕರಾದ ರವಿಕುಮಾರ್ ಹಾಗೂ ಭಾನು ರವಿಕುಮಾರ್ ಅವರು ಕೆಲ ಮಾಹಿತಿ ಹಂಚಿಕೊಂಡಿದ್ದಾರೆ.
ನಟಿ ವೈಷ್ಣವಿ ಗೌಡ (Vaishnavi Gowda) ಹಾಗೂ ನಟ, ಉದ್ಯಮಿ ವಿದ್ಯಾಭರಣ್ ಮದುವೆ ಮಾತುಕತೆ ವಿಚಾರ ಸಾಕಷ್ಟು ಚರ್ಚೆ ಆಗಿತ್ತು. ಇವರಿಬ್ಬರು ಹಾರ ಹಾಕಿ ನಿಂತಿದ್ದರಿಂದ ವೈಷ್ಣವಿ ಎಂಗೇಜ್ಮೆಂಟ್ ನಡೆದಿದೆ ಎನ್ನಲಾಗಿತ್ತು. ಆದರೆ, ಇದು ಕೇವಲ ಮದುವೆ ಮಾತುಕತೆ ಎಂಬ ಸ್ಪಷ್ಟನೆ ಸಿಕ್ಕಿತ್ತು. ಹೀಗಿರುವಾಗಲೇ ವಿದ್ಯಾಭರಣ್ ಅವರಿಗೆ ಸಂಬಂಧಿಸಿದ ಆಡಿಯೋ ವೈರಲ್ ಆಗಿತ್ತು. ಈ ಎಲ್ಲ ಬೆಳವಣಿಗೆಗಳಿಂದ ಮದುವೆ ಮಾತುಕತೆ ರದ್ದು ಮಾಡಿಕೊಳ್ಳುವ ನಿರ್ಧರಕ್ಕೆ ವೈಷ್ಣವಿ ಕುಟುಂಬ ಬಂದಿದೆ. ವೈಷ್ಣವಿ ಕೂಡ ತಾವು ಈ ಸಂಬಂಧವನ್ನು ರದ್ದು ಮಾಡಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು. ಇಂದು (ನವೆಂಬರ್ 26) ನಡೆದ ಸುದ್ದಿಗೋಷ್ಠಿಯಲ್ಲಿ ವೈಷ್ಣವಿ ಪಾಲಕರಾದ ರವಿಕುಮಾರ್ ಹಾಗೂ ಭಾನು ರವಿಕುಮಾರ್ (Bhanu Ravikumar) ಅವರು ಕೆಲ ಮಾಹಿತಿ ಹಂಚಿಕೊಂಡಿದ್ದಾರೆ.
ಭೇಟಿ ಬಗ್ಗೆ ಮಾಹಿತಿ
ವಿದ್ಯಾಭರಣ್ ಭೇಟಿ ನಡೆದಿದ್ದು ಹೇಗೆ ಎಂಬ ಬಗ್ಗೆ ಭಾನು ರವಿಕುಮಾರ್ ಅವರು ಮಾಹಿತಿ ನೀಡಿದ್ದಾರೆ. ‘ಚಾಕೋಲೇಟ್ ಹೆಸರಿನ ಸಿನಿಮಾದಲ್ಲಿ ವಿದ್ಯಾಭರಣ್ ನಟಿಸುತ್ತಿದ್ದರು. ವೈಷ್ಣವಿ ಗೌಡ ಕೂಡ ಇದ್ದರು. 9 ದಿನ ಶೂಟಿಂಗ್ ನಡೆದಿತ್ತು. ನಂತರ ಸಿನಿಮಾ ಅರ್ಧಕ್ಕೆ ನಿಂತಿತು. ನಂತರ ಕಾಂಟ್ಯಾಕ್ಟ್ ತಪ್ಪಿತ್ತು. ಬಿಗ್ ಬಾಸ್ನಿಂದ ಹೊರ ಬಂದ ನಂತರದಲ್ಲಿ ಅವರ ಕುಟುಂಬದವರು ವಿಷ್ ಮಾಡಿದರು. ಅಲ್ಲಿಂದ ಮತ್ತೆ ಫ್ರೆಂಡ್ಶಿಪ್ ಬೆಳೆಯಿತು’ ಎಂದು ಮಾತು ಆರಂಭಿಸಿದ್ದಾರೆ.
‘ಆಗ ಮದುವೆ ಮಾತುಕತೆ ಶುರುವಾಯಿತು. ಜಾತಕ ಕೂಡ ಹೊಂದಾಣಿಕೆ ಆಯಿತು. ಆದರೆ ವೈಷ್ಣವಿ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಿದ್ದರಿಂದ ಅವಳು ಒಪ್ಪಿಗೆ ನೀಡಿರಲಿಲ್ಲ. ದಸರಾ ಮರುದಿನ ವಿದ್ಯಾಭರಣ್ ಕುಟುಂಬದವರು ಮತ್ತೆ ಕರೆ ಮಾಡಿ ಭೇಟಿ ಮಾಡೋಣ, ಮತ್ತೆ ಮುಂದೂಡುವುದು ಬೇಡ ಎಂದರು. ಆಗ ವೈಷ್ಣವಿ ಕೂಡ ಒಪ್ಪಿಗೆ ಕೊಟ್ಟಳು. ನವೆಂಬರ್ 11ರಂದು ಭೇಟಿ ಮಾಡಿದೆವು. ಆಗ ತೆಗೆದ ಫೋಟೋ ಅದು. ಅದು ಮಾತುಕತೆ ಫೋಟೋ ಆಗಿತ್ತು’ ಎಂದಿದ್ದಾರೆ ಭಾನು ರವಿಕುಮಾರ್.
ಇದನ್ನೂ ಓದಿ: ವಿದ್ಯಾಭರಣ್ ಜತೆಗಿನ ಮದುವೆ ಮಾತುಕತೆ ಕ್ಯಾನ್ಸಲ್; ಬೇಸರ ತೋಡಿಕೊಂಡ ವೈಷ್ಣವಿ ಗೌಡ
ಮಗಳಿಗೆ ಬಿಟ್ಟ ನಿರ್ಧಾರ
ಯುವತಿಯೊಬ್ಬಳು ವಿದ್ಯಾಭರಣ್ ಬಗ್ಗೆ ಆರೋಪ ಮಾಡಿದ್ದಾರೆ. ಹುಡುಗ ಸರಿ ಇಲ್ಲ ಎಂದು ಹೇಳಿದ್ದರು. ಈ ವಿಚಾರವಾಗಿ ಭಾನು ಅವರು ಮಾತನಾಡಿದ್ದಾರೆ. ‘ಹುಡುಗ ನಮ್ಮ ಜತೆ ಚೆನ್ನಾಗೇ ಇದ್ದ. ಆರೋಪ ಮಾಡಿದ ಹುಡುಗಿಗೆ ಕಾಳಜಿ ಇದ್ದಿದ್ದರೆ ನೇರವಾಗಿ ನನ್ನ ಬಳಿಯೇ ಹೇಳುತ್ತಿದ್ದಳು. ಈಗ ನಿರ್ಧಾರವನ್ನು ಮಗಳಿಗೆ ಬಿಡುತ್ತೇವೆ. ಅವಳು ಏನು ನಿರ್ಧಾರ ತೆಗೆದುಕೊಳ್ಳುತ್ತಾಳೋ ಅದನ್ನು ಬೆಂಬಲಿಸುತ್ತೇವೆ’ ಎಂದಿದ್ದಾರೆ ಭಾನು.
ಇನ್ನಷ್ಟು ಸಿನಿಮಾ ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ