ವಿಜಯ್ ಪ್ರಕಾಶ್ ಧ್ವನಿಯಲ್ಲಿ ಬಂದ ಹಳೆಯ ಜಾಹೀರಾತಿ​ಗೆ ಈಗಲೂ ಬೇಡಿಕೆ

ವಿಜಯ್ ಪ್ರಕಾಶ್ ಅವರು ಗಾಯಕನಾಗಿ ಮೊದಲು ಬಣ್ಣದ ಬದುಕಿಗೆ ಕಾಲಿಟ್ಟಿರಲಿಲ್ಲ. ಅವರು ಮೊದಲು ಗಮನ ಸೆಳೆದಿದ್ದು ಜಿಂಗಲ್ಸ್​ಗಳಿಂದ. ಅಂದರೆ, ಜಾಹೀರಾತುಗಳಿಗೆ ಅವರು ಧ್ವನಿ ಆಗುತ್ತಿದ್ದರು. ಅವರು ತಮ್ಮ ವೃತ್ತಿ ಜೀವನದಲ್ಲಿ 3000 ಸಾವಿರಕ್ಕೂ ಅಧಿಕ ಜಿಂಗಲ್ಸ್​ನ ಹಾಡಿದ್ದಾರೆ.

ವಿಜಯ್ ಪ್ರಕಾಶ್ ಧ್ವನಿಯಲ್ಲಿ ಬಂದ ಹಳೆಯ ಜಾಹೀರಾತಿ​ಗೆ ಈಗಲೂ ಬೇಡಿಕೆ
ವಿಜಯ್ ಪ್ರಕಾಶ್ ಧ್ವನಿಯಲ್ಲಿ ಬಂದ ಹಳೆಯ ಜಾಹೀರಾತಿ​ಗೆ ಈಗಲೂ ಬೇಡಿಕೆ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Nov 25, 2024 | 9:09 AM

ವಿಜಯ್ ಪ್ರಕಾಶ್ ಅವರು ಗಾಯಕನಾಗಿ ಎಲ್ಲರಿಗೂ ಇಷ್ಟ. ಹಲವು ಸೂಪರ್ ಹಿಟ್ ಗೀತೆಗಳನ್ನು ಅವರು ನೀಡಿದ್ದಾರೆ. ಅವರು ಹಾಡಿರುವ ಅನೇಕ ಹಾಡುಗಳು ಈಗಲೂ ಜನರಿಗೆ ಫೇವರಿಟ್. ಅವರು ಆಗಾಗ ಕಾನ್ಸರ್ಟ್​ಗಳನ್ನು ಕೂಡ ಮಾಡುತ್ತಾರೆ. ಇದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ವಿಶೇಷ ಎಂದರೆ ವಿಜಯ್ ಪ್ರಕಾಶ್ ಅವರು 90ರ ದಶಕದಲ್ಲಿ ಧ್ವನಿ ನೀಡಿದ್ದ ಜಾಹೀರಾತೊಂದು ಈಗಲೂ ಪ್ರಸಾರ ಕಾಣುತ್ತಿದೆ ಎಂಬ ವಿಚಾರ ನಿಮಗೆ ಗೊತ್ತೇ? ಆ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ ಕೇಳಿ.

ವಿಜಯ್ ಪ್ರಕಾಶ್ ಅವರು ಗಾಯಕನಾಗಿ ಮೊದಲು ಬಣ್ಣದ ಬದುಕಿಗೆ ಕಾಲಿಟ್ಟಿರಲಿಲ್ಲ. ಅವರು ಮೊದಲು ಗಮನ ಸೆಳೆದಿದ್ದು ಜಿಂಗಲ್ಸ್​ಗಳಿಂದ. ಅಂದರೆ, ಜಾಹೀರಾತುಗಳಿಗೆ ಅವರು ಧ್ವನಿ ಆಗುತ್ತಿದ್ದರು. ಅವರು ತಮ್ಮ ವೃತ್ತಿ ಜೀವನದಲ್ಲಿ 3000 ಸಾವಿರಕ್ಕೂ ಅಧಿಕ ಜಿಂಗಲ್ಸ್​ನ ಹಾಡಿದ್ದಾರೆ. ಅದರಲ್ಲೂ ಒಂದು ವಿಶೇಷ ಜಿಂಗಲ್ಸ್ ಎಲ್ಲರ ನೆನಪಿನಲ್ಲಿ ಇರುವಂಥದ್ದು.

ಸೆಂಟರ್ ಫ್ರೆಶ್​ನ ಜಾಹೀರಾತು ಈಗಲೂ ಪ್ರಸಾರ ಕಾಣುತ್ತದೆ. ಓರ್ವ ತಬಲಾ ಬಾರಿಸಿದರೆ, ಮತ್ತೋರ್ವ ಹಾಡುತ್ತಾನೆ. ಈ ಹಾಡನ್ನು ಹಾಡಿದ್ದು ವಿಜಯ್ ಪ್ರಕಾಶ್ ಅನ್ನೋದು ಅನೇಕರಿಗೆ ಗೊತ್ತಿಲ್ಲ. ಈ ಬಗ್ಗೆ ಇತ್ತೀಚೆಗೆ ವಿಜಯ್ ಪ್ರಕಾಶ್ ಹೇಳಿದ್ದಾರೆ.

‘ಯೇ ದಿಲ್ ಮಾಂಗೆ ಮೋರ್ ನಾನೇ ಹಾಡಿದ್ದು. 1999 ಅಲ್ಲಿ ಬಂದಿತ್ತು. ಸೆಂಟರ್​ಫ್ರೆಶ್​ ದು ಮಗಮಸ.. ಇದನ್ನು ನಾನೇ ಹಾಡಿದ್ದು. 3000 ಜಾಹೀರಾತು ಜಿಂಗಲ್ಸ್​ನ ನಾನು ಮಾಡಿದ್ದೇನೆ. ಐಸಿಐಸಿಐ ಜಾಹೀರಾತನ್ನು ನಾನೇ ಮಾಡಿದ್ದೆ. ಮೆಕ್​ಡೊನಾಲ್ಡ್ಸ್ ಮೊದಲು ಬಂದಾಗ ನಾನೇ ಮಾಡಿದ್ದು. ಡಾಮಿನೋಸ್ ಪಿಜ್ಜಾ ನಾನೇ ಮಾಡಿದ್ದು. ಐಸಿಐಸಿಐ ಬ್ಯಾಂಕ್​ನ ಹಂ ಹೇ ನಾ ಹಾಡಿದ್ದೇನೆ’ ಎಂದು ಹೇಳಿದ್ದರು ವಿಜಯ್ ಪ್ರಕಾಶ್.

ಇದನ್ನೂ ಓದಿ:  ಕನ್ನಡದಲ್ಲಿ ಹನುಮಾನ್​ ಚಾಲೀಸ; ಭಕ್ತಿ-ಭಾವದಿಂದ ಹಾಡಿದ ಖ್ಯಾತ ಗಾಯಕ ವಿಜಯ್​ ಪ್ರಕಾಶ್

ವಿಜಯ್ ಪ್ರಕಾಶ್ ಅವರು ಕನ್ನಡದಲ್ಲಿ ಹಲವು ಹಾಡುಗಳನ್ನು ಹೇಳಿದ್ದಾರೆ. ಹಲವು ಹಾಡುಗಳು ಸೂಪರ್ ಹಿಟ್ ಆಗಿವೆ. ‘ಬೊಂಬೆ ಹೇಳುತೈತೆ’ ಹಾಡನ್ನು ವಿಜಯ್ ಪ್ರಕಾಶ್ ಅವರೇ ಹಾಡಿದ್ದರು. ಅವರ ಧ್ವನಿಗೆ ಮರಳುಗಾದವರೇ ಇಲ್ಲ ಎಂದರೂ ತಪ್ಪಾಗಲಾರದು. ಅವರಿಗೆ ಕನ್ನಡದಲ್ಲಿ ಸಖತ್ ಬೇಡಿಕೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:08 am, Mon, 25 November 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ