AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದಲ್ಲಿ ಹನುಮಾನ್​ ಚಾಲೀಸ; ಭಕ್ತಿ-ಭಾವದಿಂದ ಹಾಡಿದ ಖ್ಯಾತ ಗಾಯಕ ವಿಜಯ್​ ಪ್ರಕಾಶ್

‘ನಾನು ಕನ್ನಡದ ಹನುಮಾನ್​ ಚಾಲೀಸ ಹಾಡಿದ್ದೇನೆ. ಏನೇ ತಪ್ಪುಗಳು ಇದ್ದರೂ ದಯವಿಟ್ಟು ಕ್ಷಮಿಸಿ. ಇದೊಂದು ಬಹಳ ಭಕ್ತಿಯಿಂದ ಮಾಡಿದ ಪ್ರಯತ್ನ. ಆ ದೇವರ ಎಲ್ಲರಿಗೂ ಒಳ್ಳೆಯದು ಮಾಡಲಿ ಅಂತ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ ವಿಜಯ್​ ಪ್ರಕಾಶ್​. ‘ಶ್ರೀಲಕ್ಷ್ಮಿ ವೆಂಕಟೇಶ್ವರ’ ಯೂಟ್ಯೂಬ್​ ಚಾನೆಲ್​ನಲ್ಲಿ ಇದು ಬಿಡುಗಡೆ ಆಗಿದೆ.

ಕನ್ನಡದಲ್ಲಿ ಹನುಮಾನ್​ ಚಾಲೀಸ; ಭಕ್ತಿ-ಭಾವದಿಂದ ಹಾಡಿದ ಖ್ಯಾತ ಗಾಯಕ ವಿಜಯ್​ ಪ್ರಕಾಶ್
ಕನ್ನಡದಲ್ಲಿ ಹನುಮಾನ್​ ಚಾಲೀಸ ಬಿಡುಗಡೆ
ಮದನ್​ ಕುಮಾರ್​
|

Updated on: Jan 09, 2024 | 12:35 PM

Share

ಆಂಜನೇಯನ ಕುರಿತು ಈಗಾಗಲೇ ಅನೇಕ ಕೃತಿಗಳು, ಹಾಡುಗಳು, ಭಕ್ತಿಗೀತೆಗಳು ರಚನೆ ಆಗಿವೆ. ಹನುಮ ಭಕ್ತರ ಮನದಲ್ಲಿ ಆ ಗೀತೆಗಳು ವಿಶೇಷ ಸ್ಥಾನ ಪಡೆದುಕೊಂಡಿವೆ. ಆದರೆ ಈಗ ಮೊಟ್ಟ ಮೊದಲ ಬಾರಿಗೆ ಹನುಮಾನ್ ಚಾಲೀಸವನ್ನು (Hanuman Chalisa) ಕನ್ನಡಕ್ಕೆ ಭಾಷಾಂತರ ಮಾಡಿ, ಸಂಗೀತ ನೀಡಿ ಬಿಡುಗಡೆ ಮಾಡಿರುವುದು ವಿಶೇಷ. ಹನುಮನ ಭಕ್ತರಾದ ವೆಂಕಟೇಶ್ ಉತ್ತರಹಳ್ಳಿ ಕುಟುಂಬದವರು ಇದರ ನಿರ್ಮಾಣ ಮಾಡಿದ್ದಾರೆ. ಕಾಂತರಾಜ್​ ಹೆಗಡೆ ಅವರು ಭಾಷಾಂತರ ಮಾಡಿದ್ದಾರೆ. ಭಾರಿ ಕಾಳಜಿ, ಶ್ರದ್ಧೆ ವಹಿಸಿ ಈ ಕಾರ್ಯ ಮಾಡಿರುವುದಾಗಿ ತಂಡದವರು ತಿಳಿಸಿದ್ದಾರೆ. ಇದಕ್ಕೆ ಖ್ಯಾತ ಗಾಯಕ ವಿಜಯ್​ ಪ್ರಕಾಶ್​ (Vijay Prakash) ಧ್ವನಿ ನೀಡಿದ್ದಾರೆ.

ದೇಶದಲ್ಲಿ ಈಗ ರಾಮಾಂಜನೇಯರ ಬಗ್ಗೆ ಮಾತುಗಳು ಹೆಚ್ಚಾಗಿವೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭ ಆಗಿದೆ. ಈ ಸಮಯಲ್ಲಿ ಹನುಮಾನ್ ಚಾಲಿಸವನ್ನು ಕನ್ನಡಕ್ಕೆ ಭಾಷಾಂತರಿಸಿ, ವಿಶೇಷ ಪ್ರಯತ್ನ ಮಾಡಲಾಗಿದೆ. ಕನ್ನಡದಲ್ಲಿ ಹನುಮಾನ್​ ಚಾಲೀಸ ಹಾಡಿದಕ್ಕೆ ವಿಜಯ್​ ಪ್ರಕಾಶ್​ ಅವರಿಗೆ ಖುಷಿ ಆಗಿದೆ. ಬಹಳ ಭಕ್ತಿ-ಭಾವದಿಂದ ಅವರು ಇದನ್ನು ಹಾಡಿದ್ದಾರೆ.

Video: ಶಸ್ತ್ರಚಿಕಿತ್ಸೆ ವೇಳೆ ಪಿಯಾನೋ ಮೂಲಕ ಹನುಮಾನ್ ಚಾಲೀಸಾ ನುಡಿಸಿದ ಯುವಕ

‘ಶ್ರೀಲಕ್ಷ್ಮಿ ವೆಂಕಟೇಶ್ವರ’ ಯೂಟ್ಯೂಬ್​ ಚಾನೆಲ್​ನಲ್ಲಿ ಕನ್ನಡದ ಹನುಮಾನ್​ ಚಾಲೀಸ ಬಿಡುಗಡೆ ಆಗಿದೆ. ಕನ್ನಡದ ಹಲವು ಚಿತ್ರಗಳಿಗೆ ಸಂಗೀತ ನೀಡಿರುವ ಲೋಕಿ ತವಸ್ಯ ಅವರು ಇದಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ವೆಂಕಟೇಶ್​ ಉತ್ತರಹಳ್ಳಿ ಕುಟುಂಬದವರು ಹನುಮನ ಭಕ್ತರು. ಕನ್ನಡದಲ್ಲಿ ಹನುಮಾನ್​ ಚಾಲೀಸ ಮಾಡಬೇಕು ಎಂಬುದು ಅವರ ಮಹದಾಸೆ ಆಗಿತ್ತು. ಅದೀಗ ನೆರವೇರಿದೆ’ ಎಂದು ವಿಜಯ್​ ಪ್ರಕಾಶ್​ ಹೇಳಿದ್ದಾರೆ.

‘ನಾನು ಕನ್ನಡದ ಹನುಮಾನ್​ ಚಾಲೀಸ ಹಾಡಿದ್ದೇನೆ. ಏನೇ ತಪ್ಪುಗಳು ಇದ್ದರೂ ದಯವಿಟ್ಟು ಕ್ಷಮಿಸಿ. ಇದೊಂದು ಬಹಳ ಭಕ್ತಿಯಿಂದ ಮಾಡಿದ ಪ್ರಯತ್ನ. ಆ ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ ಅಂತ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ ವಿಜಯ್​ ಪ್ರಕಾಶ್​. ಹನುಮನ ಭಕ್ತರಿಗೆ ಕನ್ನಡದ ಹನುಮಾನ್​ ಚಾಲೀಸ ಮೆಚ್ಚುಗೆ ಆಗಲಿದೆ ಎಂಬ ಭರವಸೆಯಲ್ಲಿ ಈ ಪ್ರಯತ್ನ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ