‘ಪೀಟರ್’ಗೆ ವಿಜಯ್ ಸೇತುಪತಿ-ಡಾಲಿ ಧನಂಜಯ್ ಬೆಂಬಲ

|

Updated on: Sep 17, 2024 | 10:17 PM

‘ದೂರದರ್ಶನ’ ಸಿನಿಮಾ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಸುಖೇಶ್ ಶೆಟ್ಟಿ ಇದೀಗ ಹೊಸ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಸುಕೇಶ್​ರ ಹೊಸ ಸಿನಿಮಾಕ್ಕೆ ವಿಜಯ್ ಸೇತುಪತಿ, ಡಾಲಿ ಧನಂಜಯ್ ಬೆಂಬಲ ದೊರೆತಿದೆ.

ಪೀಟರ್ಗೆ ವಿಜಯ್ ಸೇತುಪತಿ-ಡಾಲಿ ಧನಂಜಯ್ ಬೆಂಬಲ
Follow us on

‘ದೂರದರ್ಶನ’ ಸಿನಿಮಾ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಸುಕೇಶ್ ಶೆಟ್ಟಿ ಇದೀಗ ಮತ್ತೊಂದು ಕತೆ ಹೊತ್ತು ಬರುತ್ತಿದ್ದಾರೆ. ‘ದೂರದರ್ಶನ’ ಸಿನಿಮಾ ಮೂಲಕ ಭಿನ್ನ ಕತೆ ಹೇಳಿದ್ದ ಸುಕೇಶ್ ಇದೀಗ ಮತ್ತೊಂದು ಭಿನ್ನ ಹಾಗೂ ಗಟ್ಟಿ ಕತೆಯೊಟ್ಟಿಗೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಸುಕೇಶ್​ ಶೆಟ್ಟಿಯವರ ಈ ಹೊಸ ಪ್ರಯತ್ನಕ್ಕೆ ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಮತ್ತು ಕನ್ನಡದ ಸ್ಟಾರ್ ಹೀರೋ ಡಾಲಿ ಧನಂಜಯ್ ಸಾಥ್ ನೀಡಿದ್ದಾರೆ. ಸುಕೇಶ್​ರ ಹೊಸ ಸಿನಿಮಾದ ಟೈಟಲ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

ಸುಕೇಶ್ ಶೆಟ್ಟಿ ಅವರ ಹೊಸ ಸಿನಿಮಾಕ್ಕೆ ‘ಪೀಟರ್’ ಎಂದು ಹೆಸರಿಡಲಾಗಿದೆ. ಪೀಟರ್ ಟೈಟಲ್ ನ್ನು ಕನ್ನಡ ಚಿತ್ರರಂಗದ ನಟರಾಕ್ಷಸ ಡಾಲಿ ಧನಂಜಯ್ ಹಾಗೂ ತಮಿಳಿನ ಸೂಪರ್ ಸ್ಟಾರ್ ವಿಜಯ್ ಸೇತುಪತಿ ರಿಲೀಸ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಪೀಟರ್ ಟೈಟಲ್ ಪೋಸ್ಟರ್ ನಲ್ಲಿ ರಾಯಲ್ ಚಂಡೆ ಹುಡುಗರು, ಜೆಸ್ಸಿ ವಾಪಸ್ ಬಂದಿದ್ದಾಳೆ ಎಂಬ ಬರಹಗಳು ಗಮನ ಸೆಳೆಯುತ್ತಿದೆ, ಜೊತೆಗೆ ಯಮಹಾ ಬೈಕ್, ಹಳೆಯ ಕಬ್ಬಿಣದ ಚೇರಿನ ಚಿತ್ರಗಳು ಇದ್ದು, ಪೋಸ್ಟರ್ ಕುತೂಹಲ ಕೆರಳಿಸುತ್ತಿದೆ.

‘ಪೀಟರ್’ ಸಿನಿಮಾ ಚೆಂಡೆ ಮೇಳದ ಕಥಾವಸ್ತುವನ್ನು ಒಳಗೊಂಡಿದೆ. ಕೇರಳದಲ್ಲಿ 300 ವರ್ಷಗಳಿಗೂ ಅಧಿಕ ಕಾಲದ ಇತಿಹಾಸ ಹೊಂದಿರುವ ಚೆಂಡೆ ಮೇಳವನ್ನು ಪೀಟರ್ ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತಿದೆ. ಯಕ್ಷಗಾನ, ಭೂತಕೋಲ, ದೇವರ ನರ್ತನದಲ್ಲಿ ಬಳಸುವ ಜಾನಪದೀಯ ವಾದ್ಯವಾಗಿರುವ ಚೆಂಡೆ ಮೇಳನ್ನು ಅದ್ಭುತವಾಗಿ ರೆಕಾರ್ಡ್​ ಮಾಡಿ ಚಿತ್ರಮಂದಿರದಲ್ಲಿ ಪ್ರೇಕ್ಷಕನಿಗೆ ಭಿನ್ನ ಅನುಭವ ಕೊಡಲು ಚಿತ್ರತಂಡ ಸಜ್ಜಾಗಿದೆ. ಈ ಸಿನಿಮಾ ಕ್ರೈಂ ಡ್ರಾಮಾ ಜಾನರ್​ನದ್ದಾಗಿರಲಿದೆ.

ಇದನ್ನೂ ಓದಿ:ಡಾಲಿ ಧನಂಜಯ್ ಮೊದಲ ಸಂಭಾವನೆ ಎಷ್ಟು? ಇಲ್ಲಿದೆ ವಿವರ..

ಚಿತ್ರದಲ್ಲಿ ರಾಜೇಶ್ ಧ್ರುವ, ರವೀಕ್ಷಾ ಶೆಟ್ಟಿ, ಜಾಹ್ನವಿ ರಾಯಲ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ ತಾರಾಬಳಗದಲ್ಲಿದ್ದಾರೆ. ಈಗಾಗಲೇ 29 ದಿನಗಳ ಚಿತ್ರೀಕರಣ ಮಾಡಲಾಗಿದೆ. ಮಡಿಕೇರಿ, ಭಾಗಮಂಡಲ ಇನ್ನಿತರೆ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹೊರಾಂಗಣದ ಜೊತೆಗೆ ಅದ್ಧೂರಿ ಸೆಟ್ ಹಾಕಿ‌ ಮಳೆಗಾಲದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಉಳಿದ ಚಿತ್ರೀಕರಣಕ್ಕೆ ನಾಯಕ ಮತ್ತು ಇನ್ನೆರಡು ಪಾತ್ರಧಾರಿಗಳು ದೇಹದ ತೂಕ ಕಡಿಮೆ ಮಾಡಿಕೊಳ್ಳೋ ತಯಾರಿಯಲ್ಲಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ಸೌಂಡ್ ಇಂಜಿನಿಯರ್ ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ವೃದ್ಧಿ ಸ್ಟುಡಿಯೊಸ್ ಬ್ಯಾನರ್ ನಡಿ ‘ಪೀಟರ್’ ಸಿನಿಮಾ ನಿರ್ಮಿಸಿದ್ದಾರೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ನವೀನ್ ಶೆಟ್ಟಿ ಸಂಕಲನ, ದೇವರಾಜ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಲವ್, ಆಕ್ಷನ್, ಎಮೋಷನ್, ಸೆಂಟಿಮೆಂಟ್ ಎಲ್ಲರದ‌ ಮಿಶ್ರಣ ಪೀಟರ್ ಸಿನಿಮಾದ ಮಗದಷ್ಟು ಅಪ್ ಡೇಟ್ ನ್ನು ಚಿತ್ರತಂಡ‌ ಶೀಘ್ರದಲ್ಲೇ ನೀಡಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ