Vikrant Rona Collection: ನಾಲ್ಕು ದಿನಕ್ಕೆ ‘ವಿಕ್ರಾಂತ್ ರೋಣ’ ಸಿನಿಮಾ ಕಲೆಕ್ಷನ್ ಎಷ್ಟು? ಇಲ್ಲಿದೆ ವಿವರ

| Updated By: ರಾಜೇಶ್ ದುಗ್ಗುಮನೆ

Updated on: Aug 01, 2022 | 4:25 PM

ಕಿಚ್ಚ ಸುದೀಪ್ ಅವರ ‘ವಿಕ್ರಾಂತ್ ರೋಣ’ ಸಿನಿಮಾ ಜುಲೈ 28ರಂದು ತೆರೆಗೆ ಬಂತು. ಮೊದಲ ವಾರದಲ್ಲೇ ಸಿನಿಮಾ 100 ಕೋಟಿ ರೂಪಾಯಿ ಬಾಚಿಕೊಂಡ ಬಗ್ಗೆ ವರದಿ ಆಗಿದೆ. ಈ ಮೂಲಕ ಸಿನಿಮಾ ಹೊಸ ದಾಖಲೆ ಬರೆದಿದೆ.

Vikrant Rona Collection: ನಾಲ್ಕು ದಿನಕ್ಕೆ ‘ವಿಕ್ರಾಂತ್ ರೋಣ’ ಸಿನಿಮಾ ಕಲೆಕ್ಷನ್ ಎಷ್ಟು? ಇಲ್ಲಿದೆ ವಿವರ
ಸುದೀಪ್
Follow us on

ಸುದೀಪ್ (Sudeep) ನಟನೆಯ ‘ವಿಕ್ರಾಂತ್ ರೋಣ’ (Vikrant Rona Movie Collection) ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಲಾಗಿತ್ತು. ಚಿತ್ರದ ಅದ್ದೂರಿ ಮೇಕಿಂಗ್, ಅನೂಪ್​ ಭಂಡಾರಿ ನಿರ್ದೇಶನ, ಚಿತ್ರದ ಸಂಗೀತ ಹಾಗೂ ಸಿನಿಮಾಟೋಗ್ರಫಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಸುದೀಪ್ ಅವರು ಈ ಚಿತ್ರಕ್ಕೆ ದೊಡ್ಡ ಪ್ಲಸ್​ ಪಾಯಿಂಟ್. ಈ ಕಾರಣಕ್ಕೆ ನಾಲ್ಕೇ ದಿನಕ್ಕೆ ಚಿತ್ರ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಇದು ಸುದೀಪ್ ಫ್ಯಾನ್ಸ್ ಖುಷಿಯನ್ನು ಹೆಚ್ಚಿಸಿದೆ. ಈ ಗೆಲುವನ್ನು ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಸದ್ಯ ಸಿಕ್ಕಿರುವುದು ಮೂಲಗಳ ಮಾಹಿತಿ ಅಷ್ಟೇ. ಖಚಿತ ಕಲೆಕ್ಷನ್​ ವರದಿಯನ್ನು ಚಿತ್ರತಂಡ ಇನ್ನಷ್ಟೇ ನೀಡಬೇಕಿದೆ.

ಕಿಚ್ಚ ಸುದೀಪ್ ಅವರ ‘ವಿಕ್ರಾಂತ್ ರೋಣ’ ಸಿನಿಮಾ ಜುಲೈ 28ರಂದು ತೆರೆಗೆ ಬಂತು. ವಿಶ್ವಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ಚಿತ್ರ ರಿಲೀಸ್ ಆಯಿತು. ನಾಲ್ಕು ದಿನಗಳ ಕಾಲ ಸಿನಿಮಾ ಅನೇಕ ಕಡೆಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಂಡಿದೆ. ಮೊದಲ ವಾರದಲ್ಲೇ ಸಿನಿಮಾ 100 ಕೋಟಿ ರೂಪಾಯಿ ಬಾಚಿಕೊಂಡ ಬಗ್ಗೆ ವರದಿ ಆಗಿದೆ. ಈ ಮೂಲಕ ಸಿನಿಮಾ ಹೊಸ ದಾಖಲೆ ಬರೆದಿದೆ.

‘ವಿಕ್ರಾಂತ್ ರೋಣ’ ಚಿತ್ರ ಜುಲೈ 28ರಂದು 35 ಕೋಟಿ ರೂಪಾಯಿ ಬಾಚಿತು. ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿದ ಸಿನಿಮಾ ಎರಡನೇ ದಿನ ಅಂದರೆ ಜುಲೈ 29ರಂದು 22 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಶನಿವಾರ (ಜುಲೈ 30) ಹಾಗೂ ಭಾನುವಾರ (ಜುಲೈ 31) ಈ ಸಿನಿಮಾಗೆ ದೊಡ್ಡ ಮಟ್ಟದ ಗಳಿಕೆ ಆಗಿದೆ. ಈ ಮೂಲಕ ಚಿತ್ರ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿ ರೂಪಾಯಿ ಗಡಿ ದಾಟಿದೆ. ಈ ಚಿತ್ರದಿಂದ ಸುದೀಪ್ ಗೆದ್ದು ಬೀಗಿದ್ದಾರೆ.

ಇದನ್ನೂ ಓದಿ
Prashanth Neel: ಕಿಚ್ಚ ಸುದೀಪ್​, ‘ವಿಕ್ರಾಂತ್ ರೋಣ’ ತಂಡಕ್ಕೆ ವಿಶ್ ಮಾಡಿದ ‘ಕೆಜಿಎಫ್​ 2’ ನಿರ್ದೇಶಕ ಪ್ರಶಾಂತ್​ ನೀಲ್​
Vikrant Rona Twitter Review: ‘ಇದು ಬೆಸ್ಟ್​​ 3ಡಿ ಅನುಭವ’: ವಿಕ್ರಾಂತ್​ ರೋಣ ನೋಡಿ ಮೆಚ್ಚಿದ ಫ್ಯಾನ್ಸ್​
Vikrant Rona: ತ್ರಿನೇತ್ರ ಚಿತ್ರಮಂದಿರದಲ್ಲಿ 3ಡಿ ಸಮಸ್ಯೆ; ‘ವಿಕ್ರಾಂತ್​ ರೋಣ’ ನೋಡಲು ಬಂದ ಫ್ಯಾನ್ಸ್​ ಆಕ್ರೋಶ
Priya Sudeep: ಅಭಿಮಾನಿಗಳ ಜತೆ ಕುಳಿತು ‘ವಿಕ್ರಾಂತ್​ ರೋಣ’ ಫಸ್ಟ್​ ಶೋ ನೋಡಿದ ಸುದೀಪ್​ ಪತ್ನಿ ಪ್ರಿಯಾ

ಇದನ್ನೂ ಓದಿ: ‘ವಿಕ್ರಾಂತ್ ರೋಣ’ ಸಿನಿಮಾ ಬಗ್ಗೆ ಅಪಪ್ರಚಾರ; ಗರಂ ಆದ ಜಾಕ್ ಮಂಜು

‘ವಿಕ್ರಾಂತ್ ರೋಣ’ ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಈ ಚಿತ್ರಕ್ಕೆ ಅವರು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಸಿನಿಮಾ 3ಡಿಯಲ್ಲಿ ಮೂಡಿ ಬಂದಿರುವುದು ವಿಶೇಷ. ಈ ಚಿತ್ರಕ್ಕೆ ‘ರಂಗಿತರಂಗ’ ಖ್ಯಾತಿಯ ಅನೂಪ್ ಭಂಡಾರಿ ಅವರು ನಿರ್ದೇಶನ ಮಾಡಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ಅವರ ಅತಿಥಿ ಪಾತ್ರದಿಂದ ಚಿತ್ರದ ಮೆರುಗು ಹೆಚ್ಚಿದೆ.