ಬೆಂಗಳೂರು: ತಮ್ಮ ಫ್ಯಾನ್ಸ್ಗಳಿಗೆ ನಟ ಕಿಚ್ಚ ಸುದೀಪ್ ಸಿಹಿ ಸುದ್ದಿ ನೀಡಿದ್ದಾರೆ. ಕೊರೊನಾ ಸಮಸ್ಯೆಯ ನಡುವೆಯೂ ವಿಕ್ರಾಂತ್ ರೋಣ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಮಾಡಲಾಗಿದೆ. ಆಗಸ್ಟ್ 19ಕ್ಕೆ ವಿಕ್ರಾಂತ್ ರೋಣ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಕೊರೊನಾ, ಲಾಕ್ ಡೌನ್, ಕರ್ಫ್ಯೂ, 50% ಆಕ್ಯೂಪೆನ್ಸಿ ಆತಂಕದ ನಡುವೆಯೂ ಕಿಚ್ಚ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ವಿಚಾರವನ್ನ ನಟ ಕಿಚ್ಚ ಸುದೀಪ್ ತಮ್ಮ ಟ್ವಿಟರ್ ಖಾತೆಯ ಮೂಲಕ ತಿಳಿಸಿದ್ದಾರೆ.
ದೊಡ್ಡ ಬಜೆಟ್ನಲ್ಲಿ ಸಿದ್ಧವಾದ ಪುನೀತ್ ನಟನೆಯ ಯುವರತ್ನ ಸಿನಿಮಾ ಏಪ್ರಿಲ್ 01ರಂದು ರಿಲೀಸ್ ಆಗಿತ್ತು. ಬಳಿಕ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಆಸನ ಮಿತಿ ಹೇರಿದ್ದರಿಂದ ಸಿನಿಮಾ ರಿಲೀಸ್ ಆದ ಒಂದೇ ವಾರಕ್ಕೆ ಚಿತ್ರ ಒಟಿಟಿ ಹಾದಿ ಹಿಡಿದಿತ್ತು. ಸಾಲುಸಾಲು ತೊಂದರೆ ಎದುರಿಸಿತ್ತು. ಈ ಬಗ್ಗೆ ನಟ ಪುನೀತ್ ಸರ್ಕಾರದ ವಿರುದ್ಧ ಬೇಸರ ಹೊರ ಹಾಕಿದ್ದರು. ಸದ್ಯ ರಾಜ್ಯದಲ್ಲಿ ಕೊರೊನಾ ಸಂಖ್ಯೆ ಏರುತ್ತಿದೆ.
ಹೀಗಾಗಿ ಸರ್ಕಾರ ಟರ್ಫ್ ರೂಲ್ಸ್ಗಳನ್ನು ಜಾರಿ ಮಾಡುತ್ತಿದೆ. ಈ ಮಧ್ಯೆ ಕಿಚ್ಚ ಸುದೀಪ್ ತಮ್ಮ ವಿಕ್ರಾಂತ್ ರೋಣ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ.
After enjoying the process of preparations and it’s making,,, its now time for a new excitement.
We the team of #VikrantRona is all excited and happy to mark August 19th 2021 for its theatrical release.
?? pic.twitter.com/V7Rm5bWv17— Kichcha Sudeepa (@KicchaSudeep) April 15, 2021
ಇನ್ನು ದುಬೈನ ಪ್ರತಿಷ್ಠಿತ ಬುರ್ಜ್ ಖಲೀಫಾ ಕಟ್ಟಡದ ಮೇಲೆ ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಪೋಸ್ಟರ್ನ ಲಾಂಚ್ ಮಾಡಲಾಗಿತ್ತು. ವಿಕ್ರಾಂತ್ ರೋಣನಿಗೆ ನಿರ್ದೇಶಕ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳಿದ್ದಾರೆ.
ವಿಕ್ರಾಂತ್ ರೋಣ 3ಡಿ ವರ್ಷನ್
ಆ ಖುಷಿಯ ನಡುವೆಯೇ ಚಿತ್ರ 3ಡಿ ವರ್ಷನ್ನಲ್ಲಿ ತೆರೆಕಾಣಲಿದೆ. ಕನ್ನಡದಲ್ಲಿ 3ಡಿ ಚಿತ್ರಗಳು ತೆರೆಕಂಡಿರುವುದು ಬೆರಳೆಣಿಕೆಯಷ್ಟು ಮಾತ್ರ ಆಗಿರುವುದರಿಂದ ಇಲ್ಲಿನ ಪ್ರೇಕ್ಷಕರು ಸಹಜವಾಗಿಯೇ ವಿಕ್ರಾಂತ್ ರೋಣ ಬಿಡುಗಡೆಯನ್ನು ಸಂಭ್ರಮಿಸಲಿದ್ದಾರೆ.
ಇದನ್ನೂ ಓದಿ: ದುಬೈನ ಬುರ್ಜ್ ಖಲೀಫಾದ ಮೇಲೆ.. ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಟೈಟಲ್ ಪೋಸ್ಟರ್ ಲಾಂಚ್!
(Vikrant Rona Releasing on August 19th Announced By Kichcha Sudeep)
Published On - 1:05 pm, Thu, 15 April 21