ಮಧ್ಯರಾತ್ರಿ ಬಿಡುಗಡೆ ಆದ ವಿನಯ್​, ರಜತ್​; ಮಾರ್ಮಿಕ ಪೋಸ್ಟ್ ಹಾಕಿದ ಬಿಗ್ ಬಾಸ್ ‘ಆನೆ’

| Updated By: ರಾಜೇಶ್ ದುಗ್ಗುಮನೆ

Updated on: Mar 25, 2025 | 7:35 AM

ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ಕಿಶನ್ ಅವರು ಮಚ್ಚಿನೊಂದಿಗೆ ರೀಲ್ಸ್ ಮಾಡಿದ್ದಕ್ಕಾಗಿ ಬಂಧಿಸಲ್ಪಟ್ಟರು. ಮಾರ್ಚ್ 24 ರಂದು ಬಂಧಿಸಲ್ಪಟ್ಟ ಅವರು, ನೋಟೀಸ್ ನೀಡಿದ ಬಳಿಕ ಅದೇ ದಿನ ರಾತ್ರಿ ಬಿಡುಗಡೆಯಾದರು. ಆದರೆ, ಅವರು ಮತ್ತೆ ವಿಚಾರಣೆಗೆ ಹಾಜರಾಗಬೇಕಾಗಿದೆ.

ಮಧ್ಯರಾತ್ರಿ ಬಿಡುಗಡೆ ಆದ ವಿನಯ್​, ರಜತ್​; ಮಾರ್ಮಿಕ ಪೋಸ್ಟ್ ಹಾಕಿದ ಬಿಗ್ ಬಾಸ್ ‘ಆನೆ’
ಬಿಗ್ ಬಾಸ್ ಮಾಜಿ ಸ್ಪರ್ಧಿಗಳು
Follow us on

ಬಿಗ್​ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ (Vinay Gowda) ಹಾಗೂ ರಜತ್ ಕಿಶನ್ ಅವರು ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಮಾರ್ಚ್​ 24ರ ಬೆಳಿಗ್ಗೆ ಅರೆಸ್ಟ್ ಆಗಿದ್ದ ಅವರು ಅದೇ ದಿನ ರಾತ್ರಿ ಬಿಡುಗಡೆ ಹೊಂದಿದ್ದಾರೆ. ನೋಟಿಸ್ ನೀಡಿ ಅವರನ್ನು ಬಿಡುಗಡೆ ಮಾಡಲಾಗಿದೆ. ಅವರು ಜೈಲಿನಿಂದ ರಿಲೀಸ್ ಆದರೂ ಅವರಿಗೆ ತಲೆನೋವು ಮುಗಿದಿಲ್ಲ. ಅವರು ಈಗ ಮತ್ತೆ ವಿಚಾರಣೆಗೆ ಹಾಜರಿ ಹಾಕಬೇಕಿದೆ. ಈ ಮಧ್ಯೆ ವಿನಯ್ ಗೌಡ ಅವರು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ‘ಹೊಸ ದಿನ ಹೊಸ ಆರಂಭ’ ಎಂದು ಬರೆದುಕೊಂಡಿದ್ದಾರೆ.

ಏನಿದು ಪ್ರಕರಣ?

ವಿನಯ್ ಗೌಡ ಹಾಗೂ ರಜತ್ ಅವರು ‘ಬಾಯ್ಸ್ vs ಗರ್ಲ್ಸ್’ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಇವರು ಶೋ ಪೂರ್ಣಗೊಂಡ ಬಳಿಕ ಮಚ್ ಅನ್ನು ತೆಗೆದುಕೊಂಡು ರೀಲ್ಸ್ ಮಾಡಿದ್ದಾರೆ. ಇದರಲ್ಲಿ ಇಬ್ಬರೂ ಮಚ್ಚು ಹಿಡಿದು ಝಳಪಿಸಿದ್ದಾರೆ. ಇದು ಸೆಟ್ ಪ್ರಾಪರ್ಟಿ ಎಂದು ಕ್ಯಾಪ್ಶನ್​ನಲ್ಲಿ ಬರೆಯಲಾಗಿದೆಯಾದರೂ ಅಲ್ಲಿ ಬಳಕೆ ಆಗಿರೋದು ನಿಜವಾದ ಮಚ್ಚು ಎನ್ನುವ ಆರೋಪ ಇತ್ತು. ಈ ಕಾರಣದಿಂದಲೇ ವಿನಯ್ ಹಾಗೂ ರಜತ್ ಅವರನ್ನು ಬಂಧಿಸಿ ವಿಚಾರಣೆ ಮಾಡಲಾಗಿದೆ.

ಇದನ್ನೂ ಓದಿ
ದಳಪತಿ ವಿಜಯ್​ಗೆ ಸಂದೇಶ ಕೊಟ್ಟ ಪವನ್ ಕಲ್ಯಾಣ್; ಹೇಳಿದ ಕಿವಿಮಾತೇನು?
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ರಶ್ಮಿಕಾ ಅಪ್ಪನಿಗೆ ಇಲ್ಲದೆ ತೊಂದರೆ ನಿಮಗೇಕೆ; ಸಲ್ಮಾನ್ ಖಾನ್ ನೇರ ಪ್ರಶ್ನೆ
ಮನದ ಕಡಲು ಇವೆಂಟ್​ಗೆ ಬಂದ ಯಶ್, ಬಾಚಿ ತಬ್ಬಿದ ಮುರಳಿ ಮಾಸ್ಟರ್

ನೋಟಿಸ್ ನೀಡಿ ರಿಲೀಸ್

ತಡರಾತ್ರಿ ವಿನಯ್ ಹಾಗೂ ರಜತ್​ಗೆ ನೋಟಿಸ್ ಕೊಟ್ಟು ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗಿದೆ. ಇಂದು (ಮಾರ್ಚ್ 25) ನಾಳೆ ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ಇದರಿಂದ ಅವರಿಗೆ ತಲೆಬಿಸಿ ಜೋರಾಗಿದೆ.

ಇದನ್ನೂ ಓದಿ: ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ

ಫೈಬರ್ ಮಚ್ಚು?

ಸೆಟ್ ಪ್ರಾಪರ್ಟಿ ಎಂದು ರಜತ್ ಹಾಗೂ ವಿನಯ್ ಅವರು ಈ ಮೊದಲೇ ಹೇಳಿದ್ದರು. ಆದರೆ, ಇದನ್ನು ಪೊಲೀಸರು ನಂಬಿಲ್ಲ. ಆ ಬಳಿಕ ಅವರನ್ನು ಬಂಧಿಸಲಾಯಿತು. ಈಗ ಮಚ್ಚನ್ನು ಪೊಲೀಸರಿಗೆ ನೀಡಲಾಗಿದೆ.  ಈಗ ಮಚ್ಚು ಪರಿಶೀಲಿಸಿದ ಬಳಿಕ ಅದನ್ನು ಫೈಬರ್ ಮಚ್ಚು ಎಂದು ಪೊಲೀಸರು ಒಪ್ಪಿಕೊಂಡಿದ್ದಾರೆ ಎಂದು ವರದಿ ಆಗಿದೆ. ಇನ್ನು, ಮಚ್ಚು ಪರಿಶೀಲನೆಗೆ ಮಧ್ಯರಾತ್ರಿವರೆಗು ಸಮಯ ಬೇಕಿತ್ತಾ ಎಂಬ ಪ್ರಶ್ನೆಯೂ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:33 am, Tue, 25 March 25