ಪೊಲೀಸರನ್ನೇ ಬಕ್ರಾ ಮಾಡಿದ್ರಾ ವಿನಯ್-ರಜತ್? ಫೈಬರ್ ಮಚ್ಚಿನ ಮೇಲೆ ಅನುಮಾನ
ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ಅವರು ಮಚ್ಚಿನೊಂದಿಗೆ ರೀಲ್ಸ್ ಮಾಡಿದ್ದಕ್ಕಾಗಿ ಅರೆಸ್ಟ್ ಆಗಿದ್ದಾರೆ. ಪೊಲೀಸರು ವಶಪಡಿಸಿಕೊಂಡ ಮಚ್ಚು ರಬ್ಬರ್ನಿಂದ ಮಾಡಿರುವುದು ಎಂದು ತಿಳಿದು ಬಂದಿದೆ. ಆದರೆ, ರೀಲ್ಸ್‌ನಲ್ಲಿರುವ ಮಚ್ಚು ನಿಜವಾದ ಮಚ್ಚಿನಂತೆ ಕಾಣುತ್ತದೆ ಎಂಬುದು ಪೊಲೀಸರ ಅನುಮಾನ.

ಬಿಗ್ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ (Vinay Gowda) ಹಾಗೂ ರಜತ್ ಅವರು ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಇವರನ್ನು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಅರೆಸ್ಟ್ ಮಾಡಲಾಗಿತ್ತು. ರಜತ್ ಹಾಗೂ ವಿನಯ್ ಪೊಲೀಸರಿಗೆ ಮಚ್ಚನ್ನು ನೀಡಿದ್ದು, ಇದು ರಬ್ಬರ್ ಮಚ್ಚು ಎಂಬುದು ತಿಳಿದು ಬಂದಿದೆ. ಆದರೆ, ಈಗ ಪೊಲೀಸರಿಗೆ ಈ ಬಗ್ಗೆ ಅನುಮಾನ ಬಂದಿದೆ. ವಿಡಿಯೋದಲ್ಲಿರುವ ಮಚ್ಚಿಗೂ, ಈ ಮಚ್ಚಿಗೂ ವ್ಯತ್ಯಾಸ ಕಂಡು ಬಂದಿದೆ ಎನ್ನಲಾಗಿದೆ. ಹೀಗಾಗಿ, ಇವರು ಪೊಲೀಸರನ್ನೇ ಬಕ್ರಾ ಮಾಡಿದರೇ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ರಜತ್ ಹಾಗೂ ವಿನಯ್ ಇತ್ತೀಚೆಗೆ ಲಾಂಗ್ ತೋರಿಸಿ ರೀಲ್ಸ್ ಮಾಡಿದ್ದರು. ಆ ಬಳಿಕ ಅವರನ್ನು ಬಂಧಿಸಲಾಯಿತು. ರಾತ್ರಿ ವೇಳೆಗೆ ಸ್ಟೇಷನ್ ಬೇಲ್ ನೀಡಿ ಅವರನ್ನು ಬಿಡುಗಡೆ ಮಾಡಲಾಗಿದೆ. ಈಗ ವಿಚಾರಣೆ ವೇಳೆ ಸಲ್ಲಿಕೆಯಾದ ಫೈಬರ್ ಮಚ್ಚಿನ ಮೇಲೆ ಅನುಮಾನ ಮೂಡಿದೆ. ಹೀಗಾಗಿ ವಿಡಿಯೋ ಮತ್ತು ವಶಕ್ಕೆ ಪಡೆದಿದ್ದ ಫೈಬರ್ ಮಚ್ಚಿನ ತಾಳೆ ನಡೆಯಲಿದೆ. ವಿಡಿಯೋದಲ್ಲಿ ಬಳಕೆಯಾದ ಮಚ್ಚು ಒರಿಜಿನಲ್ ಮಚ್ಚಿನ ರೀತಿಯೇ ಕಾಣಿಸುತ್ತಿದೆ. ಕೇಸ್ನಿಂದ ತಪ್ಪಿಸಿಕೊಳ್ಳಲು ರಜತ್, ವಿನಯ್ ಫೈಬರ್ ಮಚ್ಚು ತಂದು ಕೊಟ್ರಾ ಎಂಬ ಅನುಮಾನ ಮೂಡಿದೆ.
View this post on Instagram
ಪೊಲೀಸರ ಪ್ರಶ್ನೆಗೆ ಉತ್ತರ
ಬೆಂಗಳೂರಿನ ಬಸವೇಶ್ವರ ನಗರದ ಸಬ್ ಇನ್ಸ್ಪೆಕ್ಟರ್ ಅವರಿಂದ ಹಲವು ಗಂಟೆಗಳ ಕಾಲ ವಿನಯ್ ಹಾಗೂ ರಜತ್ ಅವರ ವಿಚಾರಣೆ ನಡೆದಿದೆ. ಲಾಂಗ್ ಬಳಸಿ ರೀಲ್ಸ್ ಸಂಬಂಧಿಸಿದಂತೆ ಪ್ರಶ್ನೆ ಮಾಡಲಾಗಿದೆ. ಸಮಾಜಕ್ಕೆ ಯಾವ ಸಂದೇಶ ನೀಡಲು ಈ ರೀತಿ ಮಾಡಿದ್ದಾಗಿ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗೆ ಉತ್ತರಿಸಿರೋ ವಿನಯ್ ಹಾಗೂ ರಜತ್, ‘ರಿಯಾಲಿಟಿ ಶೋ ಸಲುವಾಗಿ ರೀಲ್ಸ್ ಮಾಡಿದ್ದಾಗಿ’ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಮಧ್ಯರಾತ್ರಿ ಬಿಡುಗಡೆ ಆದ ವಿನಯ್, ರಜತ್; ಮಾರ್ಮಿಕ ಪೋಸ್ಟ್ ಹಾಕಿದ ಬಿಗ್ ಬಾಸ್ ‘ಆನೆ’
‘ನಾಗರಬಾವಿಯ ಅಕ್ಷಯ ಸ್ಟೂಡಿಯೋದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಕಾರ್ಯಕ್ರಮದಲ್ಲಿ ವಿನಯ್ ‘ಪುಷ್ಪ’ ಪಾತ್ರ ಹಾಗೂ ರಜತ್ ‘ದರ್ಶನ್’ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದರ ಪ್ರಮೋಷನ್ ಸಲುವಾಗಿ ರೀಲ್ಸ್ ಮಾಡಿ ಅಪ್ಲೋಡ್ ಮಾಡಿದ್ದೆವು’ ಎಂದು ಅವರು ಜಂಟಿ ಹೇಳಿಕೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:21 am, Tue, 25 March 25