
ವಿಷ್ಣುವರ್ಧನ್ (Vishnuvardhan) ಅವರು ಇಂದು ನಮ್ಮ ಜೊತೆ ಇಲ್ಲದೆ ಇರಬಹುದು, ಆದರೆ, ಅವರ ನೆನಪುಗಳು ಸದಾ ನಮ್ಮ ಜೊತೆ ಇರುವಂಥದ್ದು. ಅವರು ಹಾಕಿಕೊಟ್ಟ ಮಾರ್ಗದರ್ಶನ ಕೂಡ ಅನೇಕರಿಗೆ ಮಾದರಿ ಆಗುವಂಥದ್ದು. ಈ ಮೊದಲು ವಿಷ್ಣುವರ್ಧನ್ ಬಗ್ಗೆ ಹಿರಿಯ ನಿರ್ದೇಶಕ ಹೆಚ್ ಆರ್. ಭಾರ್ಗವ ಅವರು ‘ಕಲಾ ಮಾಧ್ಯಮ’ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ್ದರು. ಈ ವೇಳೆ ಅವರು ವಿಷ್ಣು ಆಹಾರ ಕ್ರಮದ ಬಗ್ಗೆ ವಿವರಿಸಿದ್ದರು.
ಆರ್ ಭಾರ್ಗವ್ ಅವರು ವಿಷ್ಣುವರ್ಧನ್ ಜೊತೆ ಸಿನಿಮಾ ಮಾಡಿದ್ದಾರೆ. ಚಿತ್ರರಂಗದಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ. ವಿಷ್ಣು ಜೊತೆ ಅವರಿಗೆ ಸಾಕಷ್ಟು ಆಪ್ತತೆ ಇತ್ತು. ಅವರು ವಿಷ್ಣುನ ಹತ್ತಿರದಿಂದ ಬಲ್ಲವರಾಗಿದ್ದರು. ಹೀಗಾಗಿ, ಅವರ ಬಗ್ಗೆ ತಮಗೆ ತಿಳಿದ ವಿಚಾರ ಹೇಳಿಕೊಂಡಿದ್ದರು. ವಿಷ್ಣುವರ್ಧನ್ ಅವರು ಊಟದ ವಿಚಾರದಲ್ಲೂ ಸಖತ್ ಮೂಡಿ ಆಗಿದ್ದರು ಎಂಬ ವಿಚಾರವನ್ನು ಆರ್ ಭಾರ್ಗವ್ ವಿವರಿಸಿದ್ದರು.
‘ವಿಷ್ಣುವರ್ಧನ್ ಟಿಪಿಕಲ್ ವ್ಯಕ್ತಿ. ಒಮ್ಮೊಮ್ಮೆ ನಾನ್ ವೆಜ್ ತಿನ್ನಲ್ಲ, ಆರು ತಿಂಗಳು ಸ್ಮೋಕ್ ಮಾಡಲ್ಲ. ಅವನ ಮೂಡ್ ಹೇಳೋಕೆ ಆಗಲ್ಲ. ಯಾವಗಲೋ ಸಿಗರೇಟ್ ಸೇದುತ್ತಿರುತ್ತಿದ್ದ, ಇನ್ಯಾವಗಲೋ ಸಿಗರೇಟ್ ಬಿಟ್ಟಿರುತ್ತಿದ್ದ. ಕಾಫಿ ಪ್ರೇಮ. ಕಾಫಿ ಮೇಲೆ ಅಪಾರ ಪ್ರಿತಿ’ ಎಂದಿದ್ದರು ಭಾರ್ಗವ್.
‘ನಾವು ಸೆಟ್ನಲ್ಲಿ ಮೆಸ್ ನಡೆಸುತ್ತಿದ್ದೆವು. ಇದು ಹೊರಗಿನವರಿಗೆ ಅಲ್ಲ, ಸೆಟ್ನಲ್ಲಿ ಕೆಲಸ ಮಾಡುವವರಿಗೋಸ್ಕರ ಮಾಡಿದ ಮೆಸ್. ಅಲ್ಲಿ ಕಾಫಿ, ಊಟ, ಸ್ನ್ಯಾಕ್ಸ್ ಎಲ್ಲವೂ ರೆಡಿ ಆಗುತ್ತಿತ್ತು. ಕಾಫಿ-ಟೀ ಯಾವಾಗಲೂ ಸಿಗುತ್ತಿತ್ತು. ಊಟ ಆದ್ಮೇಲೆ ವಿಷ್ಣು 10 ನಿಮಿಷ ಕಣ್ಣು ಮುಚ್ಚುತ್ತಿದ್ದ. ಆ ಬಳಿಕ ಟೀ ಕುಡಿಯುತ್ತಿದ್ದ. ಅವನು ಕುಡಿಯೋದಲ್ಲದೆ, ನಮಗೂ ಅದೇ ಅಭ್ಯಾಸ ಬಂತು. ಟೀ ಕುಡಿದು ಮಾತನಾಡಿಕೊಳ್ಳುತ್ತಾ ಕೂರುತ್ತಿದ್ದೆವು’ ಎಂದಿದ್ದರು ಅವರು.
ಇದನ್ನೂ ಓದಿ: ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಜನ್ಮದಿನಾಚರಣೆಗೆ ಅವಕಾಶ ಇಲ್ಲ: ಹೈಕೋರ್ಟ್
‘ಅವರು ವೆಜಿಟೇರಿಯನ್ ಅಂತಿದ್ರು, ಒಮ್ಮೊಮ್ಮೆ ನಾನ್ ವೆಜ್ ತಿನ್ನುತ್ತಿದ್ದರು. ಕ್ರಿಕೆಟ್ ಮ್ಯಾಚ್ ಆದ್ರೆ ನಾವು ಇಂಡಿಯಾ ಪರ ಆಗಿದ್ರೆ ಅವನು ಪಾಕಿಸ್ತಾನದ ಪರ ಇರುತ್ತಿದ್ದ. ತುಂಬಾನೇ ವಿಚಿತ್ರ’ ಎಂದು ಅವರು ವಿವರಿಸಿದ್ದರು. ಸೆಪ್ಟೆಂಬರ್ 18 ವಿಷ್ಣುವರ್ಧನ್ ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.