ಪುತ್ಥಳಿ ತೆರವು ವಿಚಾರ: ಸರ್ಕಾರದ ನಿರ್ಲಕ್ಷ್ಯತನ ಕೂಡ ಇದರಲ್ಲಿದೆ ಎಂದ ವಿಷ್ಣುವರ್ಧನ್​ ಅಳಿಯ ಅನಿರುದ್ಧ್​​

ನೆಚ್ಚಿನ ನಟರ ಅಭಿಮಾನಿಗಳು ಸಂಘಟನೆ ಕಟ್ಟಿಕೊಂಡು ಆಯಾ ಏರಿಯಾದಲ್ಲಿ ಪುತ್ಥಳಿಗಳನ್ನು ನಿರ್ಮಿಸಿದ್ದಾರೆ. ಆದರೆ, ಇದರಲ್ಲಿ ಬಹುತೇಕರು ಬಿಬಿಎಂಪಿಯಿಂದ ಒಪ್ಪಿಗೆ ಪಡೆದಿಲ್ಲ.

ಪುತ್ಥಳಿ ತೆರವು ವಿಚಾರ: ಸರ್ಕಾರದ ನಿರ್ಲಕ್ಷ್ಯತನ ಕೂಡ ಇದರಲ್ಲಿದೆ ಎಂದ  ವಿಷ್ಣುವರ್ಧನ್​ ಅಳಿಯ ಅನಿರುದ್ಧ್​​
ನಟ ಅನಿರುದ್ಧ
Edited By:

Updated on: Sep 01, 2021 | 7:52 PM

ಅನುಮತಿ ಪಡೆಯದೇ ಬೆಂಗಳೂರಿನಲ್ಲಿ ಅಭಿಮಾನಿಗಳು ನಿರ್ಮಿಸಿದ ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್ ಸೇರಿದಂತೆ ಮಹಾನ್ ನಾಯಕರ ಪುತ್ಥಳಿಗಳನ್ನು ಶೀಘ್ರದಲ್ಲೇ ತೆರವು ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಈ ನಿರ್ಧಾರಕ್ಕೆ ಅನೇಕ ಅಭಿಮಾನಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ವಿಷ್ಣುವರ್ಧನ್​ ಅಳಿಯ ಅನಿರುದ್ಧ್​​ ಪ್ರತಿಕ್ರಿಯಿಸಿದ್ದು, ಸರ್ಕಾರದ ನಿರ್ಲಕ್ಷ್ಯತನ ಕೂಡ ಇದರಲ್ಲಿದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಅನಧಿಕೃತ ಪುತ್ಥಳಿಗಳ ತೆರವು ವಿಚಾರದ ಬಗ್ಗೆ ಮಾತನಾಡಿದ ಅನಿರುದ್ಧ್​, ‘ಇಷ್ಟು ವರ್ಷ ಬಿಟ್ಟು ಈಗ ಪುತ್ಥಳಿ ತೆರವು ಮಾಡುತ್ತಿರುವುದು ಕಷ್ಟಕರ ಸಂಗತಿ. ಅನಧಿಕೃತವಾಗಿ ಪುತ್ಥಳಿ ನಿರ್ಮಾಣ ಮಾಡಿದ್ದು ತಪ್ಪಿರಬಹುದು. ಆದರೆ ನಿರ್ಮಾಣ ಸಮಯದಲ್ಲೇ ಈ ಬಗ್ಗೆ ಯೋಚಿಸಬೇಕಿತ್ತು. ಆ ಜವಾಬ್ದಾರಿ ಸರ್ಕಾರದ ಮೇಲಿತ್ತು. ಈಗಲೂ ನಗರದಲ್ಲಿರುವ ಪುತ್ಥಳಿಗಳನ್ನು ತೆರವು ಮಾಡದೆ, ಸೂಕ್ತ ಸ್ಥಳದಲ್ಲಿ ಪ್ರತಿಮೆ ಸ್ಥಾಪನೆಗೆ ಅವಕಾಶ ಕೊಡಬಹುದು. ನನಗೆ ಸರ್ಕಾರದ ಮೇಲೆ ಭರವಸೆ ಇದೆ’ ಎಂದಿದ್ದಾರೆ ಅವರು.

ಏನಿದು ಪ್ರಕರಣ?

ನೆಚ್ಚಿನ ನಟರ ಅಭಿಮಾನಿಗಳು ಸಂಘಟನೆ ಕಟ್ಟಿಕೊಂಡು ಆಯಾ ಏರಿಯಾದಲ್ಲಿ ಪುತ್ಥಳಿಗಳನ್ನು ನಿರ್ಮಿಸಿದ್ದಾರೆ. ಆದರೆ, ಇದರಲ್ಲಿ ಬಹುತೇಕರು ಬಿಬಿಎಂಪಿಯಿಂದ ಒಪ್ಪಿಗೆ ಪಡೆದಿಲ್ಲ. ಈ ಕಾರಣಕ್ಕೆ ಪುತ್ಥಳಿಯ ತೆರವು ಕಾರ್ಯಾಚರಣೆಗೆ ಬಿಬಿಎಂಪಿ ಮುಂದಾಗಿದೆ. ರಾಜ್​ಕುಮಾರ್, ಶಂಕರ್ ನಾಗ್, ವಿಷ್ಣು ವರ್ಧನ್, ಬಸವಣ್ಣ ಹೀಗೆ ಅನೇಕರ ಪುತ್ಥಳಿ ಸ್ಥಾಪನೆಗೊಂಡಿದೆ. ಇವರ ಅಭಿಮಾನಿಗಳು ಬಿಬಿಎಂಪಿಯಿಂದ‌ ಅನುಮತಿ ಪಡೆದಿಲ್ಲ ಎಂಬುದು ಗೊತ್ತಾಗಿದೆ. ಆದಷ್ಟು ಬೇಗ ತೆರವು ಕಾರ್ಯಾಚರಣೆ ನಡೆಯಲಿದೆ. ಈಗಾಗಲೇ ಈ ಬಗ್ಗೆ ಬಿಬಿಎಂಪಿ ಸರ್ವೆ ಕಾರ್ಯ ಶುರುಮಾಡಿದೆ. ಸರ್ವೆಯಲ್ಲಿ ಅನೇಕ ಪುತ್ಥಳಿಗಳನ್ನು ಗುರುತಿಸಲಾಗಿದೆ.

ಇದನ್ನೂ ಓದಿ: ಮನೆಯಲ್ಲಿದ್ದರೂ ಸುಮ್ಮನೆ ಕೂತಿಲ್ಲ ‘ಜೊತೆ ಜೊತೆಯಲಿ’ ಅನಿರುದ್ಧ್​​; ಸಂಕಷ್ಟದ ಸಮಯದಲ್ಲಿ ಅಳಿಲು ಸೇವೆ

ಬೆಂಗಳೂರಿನಲ್ಲಿ ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್ ಸೇರಿದಂತೆ ಮಹಾನ್ ನಾಯಕರ ಪುತ್ಥಳಿಗಳು ಶೀಘ್ರದಲ್ಲೇ ತೆರವು

Published On - 5:44 pm, Wed, 1 September 21