Yash: ಯಶ್ ಕಾಣೆಯಾಗಿದ್ದಾರೆ ಹುಡುಕಿಕೊಟ್ಟವರಿಗೆ ಬಹುಮಾನ

|

Updated on: Jul 25, 2023 | 5:31 PM

Yash: ನಟ ಯಶ್ ಕಾಣೆಯಾಗಿದ್ದಾರೆ, ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನವನ್ನೂ ನೀಡಲಾಗುತ್ತದೆ!

Yash: ಯಶ್ ಕಾಣೆಯಾಗಿದ್ದಾರೆ ಹುಡುಕಿಕೊಟ್ಟವರಿಗೆ ಬಹುಮಾನ
ಯಶ್-ಸಿನಿಮಾ
Follow us on

ನಟ ಯಶ್ (Yash) ಕಾಣೆಯಾಗಿದ್ದಾರೆ, ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ಕೊಡಲಾಗುವುದು! ಹೀಗೊಂದು ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ. ಯಶ್​ರನ್ನು ದೊಡ್ಡ ತೆರೆಯ ಮೇಲೆ ನೋಡುವ ಆಸೆಯಿಟ್ಟುಕೊಂಡು ವರ್ಷಗಳಿಂದ ಕಾಯುತ್ತಿರುವ ಅವರ ಅಭಿಮಾನಿಗಳೇ ಕೆಲವರು ಹೀಗೋಂದು ಪೋಸ್ಟರ್ ಅನ್ನು ಹರಿಯಬಿಟ್ಟಿದ್ದು, ‘ಯಶ್ ಕಾಣೆಯಾಗಿದ್ದಾರೆ’ ಪೋಸ್ಟರ್ ಈಗ ವೈರಲ್ ಆಗಿದೆ.

ಯಶ್​ರ ಹೊಸ ಸಿನಿಮಾದ ಅಪ್​ಡೇಟ್​ಗೆ ಕಾದು ಸುಸ್ತಾಗಿರುವ ಅವರ ಅಭಿಮಾನಿಗಳೇ ಈ ಪೋಸ್ಟರ್ ಅನ್ನು ವೈರಲ್ ಮಾಡುತ್ತಿದ್ದು, ಪೋಸ್ಟರ್​ನಲ್ಲಿ, ”ನಮ್ಮ ರಾಕಿಂಗ್ ಸ್ಟಾರ್ ಯಶ್ ಕನ್ನಡ ಚಿತ್ರರಂಗದ ಹೆಮ್ಮೆಯ ನಟ. ‘ಕೆಜಿಎಫ್ 2’ ಸಿನಿಮಾದ ಯಶಸ್ಸಿನ ಬಳಿಕ ಹೊಸ ಸಿನಿಮಾ ಘೋಷಣೆ ಮಾಡುತ್ತೀನಿ ಎಂದಿದ್ದರು ಆದರೆ ಘೋಷಣೆ ಮಾಡದೆ ಅಭಿಮಾನಿಗಳಲ್ಲಿ ನಿರಾಸೆ ಉಂಟು ಮಾಡಿದ್ದಾರೆ. ಕೂಡಲೇ ಅವರನ್ನು ಯಾರಾದರೂ ಸಂಪರ್ಕಿಸಿ ಬರೀ ಸಿನಿಮಾ ಅನೌನ್ಸ್ ಮಾಡೋಕೆ ಎರಡು ವರ್ಷ ತಗೊಂಡ್ರೆ ಹೇಗೆ ಸರ್, ಫ್ಯಾನ್ಸ್​ನ ಎಮೋಷನ್ ಜೊತೆ ಆಟ ಆಡ್ತಾ ಇದ್ದೀರ ಎಂದು ತಿಳಿಸಿ ಹೇಳಿ ಎಂದು ಬರೆದುಕೊಂಡಿದ್ದಾರೆ.

”ಎಲ್ಲರೂ ಅವರವರ ಹೀರೋಗಳ ಸಿನಿಮಾ ಅಪ್​ಡೇಟ್​ಗಳನ್ನು ತಗೊಂಡು ಎಂಜಾಯ್ ಮಾಡ್ತಾ ಇದ್ದಾರೆ. ಆದರೆ ನೀವು ಮಾತ್ರ ಇನ್ನೂ ಸಿನಿಮಾ ಅನೌನ್ಸ್ ಮಾಡಿಲ್ಲ. ಸಣ್ಣ ಸುಳಿವು ಸಹ ಕೊಟ್ಟಿಲ್ಲ. ತುಂಬಾ ಬೇಜಾರ್ ಆಗುತ್ತೆ ಬಾಸ್” ಎಂದು ಪೋಸ್ಟರ್​ನಲ್ಲಿ ಬರೆಯಲಾಗಿದೆ. ಯಾರೋ ಬಹಳ ನೊಂದ ಅಭಿಮಾನಿಯೇ ಈ ಪೋಸ್ಟರ್ ಸೃಷ್ಟಿಸಿ ಹರಿಬಿಟ್ಟಿದ್ದಾನೆ ಎಂಬುದು ಖಾಯಂ.

ಇದನ್ನೂ ಓದಿ:Yash: ಯಶ್​ ನಟನೆಯ ಸಿನಿಮಾಗಳನ್ನು ನೋಡಿ ‘ಜವಾನ್​’ ಚಿತ್ರಕ್ಕಾಗಿ ತಯಾರಿ ಮಾಡಿಕೊಂಡಿದ್ದ ಶಾರುಖ್​ ಖಾನ್​

‘ಕೆಜಿಎಫ್ 2’ ಸಿನಿಮಾ ಬಿಡುಗಡೆ ಆಗಿ ಒಂದು ವರ್ಷದ ಮೇಲಾಯ್ತು. ಯಶ್ ಇನ್ನೂ ಯಾವುದೇ ಸಿನಿಮಾ ಘೋಷಣೆ ಮಾಡಿಲ್ಲ. 2016 ರಲ್ಲಿ ಬಿಡುಗಡೆ ಆಗಿದ್ದ ಸಂತೂ ಸ್ಟ್ರೈಟ್ ಫಾರ್ವರ್ಡ್ ಸಿನಿಮಾದ ಬಳಿಕ ಈ ಏಳು ವರ್ಷಗಳಲ್ಲಿ ಯಶ್ ನಟಿಸಿರುವುದು ಕೇವಲ ಎರಡು ಸಿನಿಮಾದಲ್ಲಿ ಮಾತ್ರ ಅದುವೇ ‘ಕೆಜಿಎಫ್ 1 ಹಾಗೂ ಕೆಜಿಎಫ್ 2. ಅದಾದ ಬಳಿಕ ಯಾವುದೇ ಸಿನಿಮಾದ ಘೋಷಣೆ ಮಾಡಿಲ್ಲ ಯಶ್. ಹಾಗಾಗಿ ಸಹಜವಾಗಿಯೇ ಯಶ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಯಶ್, ತಮ್ಮ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ ಎಂಬುದು ಖಾತ್ರಿ. ಇತ್ತೀಚೆಗೆ ಮಲೇಷ್ಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಯಶ್ ಈ ಬಗ್ಗೆ ಮಾತನಾಡಿದ್ದರು. ನಾನೇನೊ ಬಹಳ ದೊಡ್ಡ ಸಿನಿಮಾ ಮಾಡುತ್ತಿಲ್ಲ ಆದರೆ ಒಳ್ಳೆಯ ಸಿನಿಮಾ ಕೊಡುವ ಪ್ರಯತ್ನದಲ್ಲಿದ್ದೀನಿ, ಆದಷ್ಟು ಬೇಗ ಸಿನಿಮಾ ಘೋಷಣೆ ಮಾಡುತ್ತೇನೆ ಎಂದಿದ್ದರು. ಕೆಲವು ಮೂಲಗಳ ಪ್ರಕಾರ, ಯಶ್​ರ ಮುಂದಿನ ಸಿನಿಮಾಕ್ಕೆ ಕತೆ ಲಾಕ್ ಆಗಿದ್ದು ಲೊಕೇಶನ್ ಹುಡುಕಾಟವೂ ಬಹುತೇಕ ಅಂತ್ಯವಾಗಿದೆಯಂತೆ.

ಯಶ್​ರ ಮುಂದಿನ ಸಿನಿಮಾವನ್ನು ಮಹಿಳೆಯೊಬ್ಬರು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ. ಸಿನಿಮಾವನ್ನು ಶ್ರೀಲಂಕಾ ಸೇರಿದಂತೆ ವಿವಿಧ ದೇಶಳಗಳಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಸಿನಿಮಾಕ್ಕೆ ವಿದೇಶಿ ಆಕ್ಷನ್ ಕೊರಿಯೋಗ್ರಾಫರ್​ಗಳು ಕೆಲಸ ಮಾಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ