Yash Birthday: ಬರ್ತ್​ಡೇಗೂ ಮೊದಲು ಅಭಿಮಾನಿಗಳ ಭೇಟಿ ಮಾಡಿದ ಯಶ್; ಇದಕ್ಕಿದೆ ಕಾರಣ

ಕುಟುಂಬದ ಜತೆ ಸಮಯ ಕಳೆಯಬೇಕು ಎಂದು ಕೆಲವೊಮ್ಮೆ ಹೀರೋಗಳು ಪ್ಲ್ಯಾನ್ ಮಾಡಿಕೊಳ್ಳುತ್ತಾರೆ. ಯಶ್ ಕೂಡ ಇದೇ ಪ್ಲ್ಯಾನ್​​ನಲ್ಲಿದ್ದಾರೆ.

Yash Birthday: ಬರ್ತ್​ಡೇಗೂ ಮೊದಲು ಅಭಿಮಾನಿಗಳ ಭೇಟಿ ಮಾಡಿದ ಯಶ್; ಇದಕ್ಕಿದೆ ಕಾರಣ
ಯಶ್
Edited By:

Updated on: Jan 06, 2023 | 1:57 PM

ನಟ ಯಶ್ (Yash) ಅವರು ಜನವರಿ 5ರಂದು ಬರೆದ ಲೆಟರ್ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಫ್ಯಾನ್ಸ್​ ಜತೆ ಬರ್ತ್​​ಡೇ ಆಚರಿಸಿಕೊಳ್ಳಲು ಸಾಧ್ಯವಿಲ್ಲ ಎಂಂಬುದು ಅವರು ಬರೆದ ಪತ್ರದ ಮುಖ್ಯಾಂಶ. ಇದಕ್ಕೆ ಅವರು ಸ್ಪಷ್ಟ ಕಾರಣ ನೀಡಿರಲಿಲ್ಲ. ಯಶ್ ಅವರು ಈ ಬಾರಿ ದುಬೈನಲ್ಲಿ ಹುಟ್ಟುಹಬ್ಬ (Yash Birthday) ಆಚರಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಅವರಿಗೆ ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ, ಅಭಿಮಾನಿಗಳಿಗೆ ಯಶ್ ನಿರಾಸೆ ಮಾಡಿಲ್ಲ.

ಸ್ಟಾರ್ ನಟರ ಬರ್ತ್​ಡೇ ಎಂದರೆ ಫ್ಯಾನ್ಸ್​​ಗೆ ಹಬ್ಬ ಇದ್ದಂತೆ. ನೆಚ್ಚಿನ ನಟನ ಜನ್ಮದಿನದಂದು ಅವರ ಮನೆ ಎದುರು ಅಭಿಮಾನಿಗಳು ಜಮಾಯಿಸುತ್ತಾರೆ. ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಹೀರೋಗಳೂ ಅಷ್ಟೇ ಪ್ರೀತಿ ತೋರುತ್ತಾರೆ. ಅಭಿಮಾನಿಗಳ ಜತೆಗೂಡಿ ಸಂಭ್ರಮಾಚರಣೆಯಲ್ಲಿ ಭಾಗಿ ಆಗುತ್ತಾರೆ. ಆದರೆ, ಕೆಲವು ಸಂದರ್ಭಗಳಲ್ಲಿ ಇದು ಸಾಧ್ಯವಾಗುವುದಿಲ್ಲ. ಕುಟುಂಬದ ಜತೆ ಸಮಯ ಕಳೆಯಬೇಕು ಎಂದು ಕೆಲವೊಮ್ಮೆ ಹೀರೋಗಳು ಪ್ಲ್ಯಾನ್ ಮಾಡಿಕೊಳ್ಳುತ್ತಾರೆ. ಯಶ್ ಕೂಡ ಇದೇ ಪ್ಲ್ಯಾನ್​​ನಲ್ಲಿದ್ದಾರೆ.

ಯಶ್ ಈ ಬಾರಿ ದುಬೈನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಅವರು ಪತ್ನಿ ರಾಧಿಕಾ ಪಂಡಿತ್, ಮಕ್ಕಳ ಜತೆ ಇಂದು ದುಬೈಗೆ ಹಾರಿದ್ದಾರೆ. ಹುಟ್ಟುಹಬ್ಬದ ದಿನ ಭೇಟಿ ಸಾಧ್ಯವಿಲ್ಲ ಎಂದು ಹೇಳಿದ್ದಕ್ಕೆ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದರು. ಈ ಕಾರಣಕ್ಕೆ ಇಂದು (ಜನವರಿ 6) ತಮ್ಮ ಗಾಲ್ಫ್​ ರಸ್ತೆಯಲ್ಲಿರುವ ಮನೆಯ ಬಳಿ ಅಭಿಮಾನಿಗಳನ್ನು ಯಶ್​ ಭೇಟಿ ಮಾಡಿದ್ದಾರೆ. ಯಶ್ ಅವರನ್ನು ಭೇಟಿ ಮಾಡಲು ಉದ್ದನೆಯ ಕ್ಯೂ ಇತ್ತು. ಫ್ಯಾನ್ಸ್ ಭೇಟಿ ಬಳಿಕ ಯಶ್ ದುಬೈಗೆ ಹೊರಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ
ಬಾಲ್ಯ ಸ್ನೇಹಿತನ ಮದುವೆಗೆ ಪತ್ನಿ ಸಮೇತ ಬಂದು ಹರಸಿದ ಯಶ್​; ಸಲಾಂ ರಾಕಿ ಭಾಯ್​ ಎಂದ ಫ್ಯಾನ್ಸ್​
ಗೋವಾ ಸಿಎಂ ಪ್ರಮೋದ್​ ಸಾವಂತ್​ ಭೇಟಿ ಮಾಡಿದ ಯಶ್​-ರಾಧಿಕಾ ಪಂಡಿತ್​; ಮುಂದಿನ ಸಿನಿಮಾ ಬಗ್ಗೆ​ ಕುತೂಹಲ
‘ಕೆಜಿಎಫ್​ 2’ ಹಿಟ್​ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್​ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್​ ಏನಂದ್ರು?
‘ಕೆಜಿಎಫ್​ 2’ಗೆ ಕೆಟ್ಟ ವಿಮರ್ಶೆ ಮಾಡಿ, ಯಶ್​ ಬಗ್ಗೆ ವ್ಯಂಗ್ಯದ ಮಾತಾಡಿದ ‘ದೇಶದ್ರೋಹಿ’ ನಟ:​ ಸಿಡಿದೆದ್ದ ಫ್ಯಾನ್ಸ್​

ಇದನ್ನೂ ಓದಿ: Yash Birthday: ‘ಕ್ಷಮಿಸಿ, ಹುಟ್ಟುಹಬ್ಬಕ್ಕೆ ನಿಮ್ಮ ಜತೆ ಇರಲು ಆಗುತ್ತಿಲ್ಲ’: ಅಭಿಮಾನಿಗಳಿಗೆ ಯಶ್​ ಪತ್ರ

‘ಕೆಜಿಎಫ್ 2’ ಬಳಿಕ ಯಶ್ ಅವರ ಯಾವ ಹೊಸ ಚಿತ್ರವೂ ಘೋಷಣೆ ಆಗಿಲ್ಲ. ಅವರ ಮುಂದಿನ ಪ್ರಾಜೆಕ್ಟ್ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಜನವರಿ 8ರಂದು ಹೊಸ ಸಿನಿಮಾ ಘೋಷಣೆ ಆಗುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ