ಸಲ್ಮಾನ್ ಖಾನ್​ನ ಭೇಟಿಯಾದ್ರಾ ಯಶ್? ವೈರಲ್ ಫೋಟೋದ ಹಿಂದಿನ ಅಸಲಿಯತ್ತಿದು..

ಸದ್ದು ಗದ್ದಲ ಇಲ್ಲದೇ ‘ಟಾಕ್ಸಿಕ್’ ಸಿನಿಮಾದ ಕೆಲಸಗಳನ್ನು ಮಾಡಲಾಗುತ್ತಿದೆ. ‘ರಾಕಿಂಗ್​ ಸ್ಟಾರ್​’ ಯಶ್​ ಹಾಗೂ ನಿರ್ದೇಶಕಿ ಗೀತು ಮೋಹನ್​ದಾಸ್​ ಅವರ ಕಾಂಬಿನೇಷನ್​ನಲ್ಲಿ ಸಿದ್ಧವಾಗುತ್ತಿದೆ. ಈ ಮಧ್ಯೆ ಯಶ್ ಅವರು ಸಲ್ಮಾನ್ ಖಾನ್​ನ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

ಸಲ್ಮಾನ್ ಖಾನ್​ನ ಭೇಟಿಯಾದ್ರಾ ಯಶ್? ವೈರಲ್ ಫೋಟೋದ ಹಿಂದಿನ ಅಸಲಿಯತ್ತಿದು..
ಯಶ್

Updated on: Jul 30, 2024 | 8:39 AM

ನಟ ಯಶ್ ಅವರು ಇತ್ತೀಚೆಗೆ ಭರ್ಜರಿ ಸುದ್ದಿಯಲ್ಲಿ ಇದ್ದಾರೆ. ಅವರು ಲುಕ್ ಬದಲಾಯಿಸಿಕೊಂಡಿದ್ದು ಸಾಕಷ್ಟು ಚರ್ಚೆ ಆಗುತ್ತಿದೆ. ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿ ಈಗಾಗಲೇ ಎರಡು ವರ್ಷಗಳು ಕಳೆದಿವೆ. ಅಲ್ಲಿಂದ ಇಲ್ಲಿಯವರೆಗೆ ಅವರು ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿಲ್ಲ. ಹೀಗಿರುವಾಗಲೇ ಅವರ ಹೊಸ ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿ ಅವರು ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಶೇರಾ ಜೊತೆ ಪೋಸ್ ಕೊಟ್ಟಿದ್ದಾರೆ.

ಯಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಖ್ಯಾತಿ ಪಡೆದಿದ್ದಾರೆ. ಇತ್ತೀಚೆಗೆ ಅನಂತ್ ಅಂಬಾನಿ ಮನೆ ಮದುವೆಯಲ್ಲಿ ಯಶ್ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಉದ್ದ ಕೂದಲಿಗೆ ಕತ್ತರಿ ಹಾಕಿದ್ದು ಸ್ಪಷ್ಟವಾಗಿ ಕಾಣಿಸಿತ್ತು. ಇದು ‘ಟಾಕ್ಸಿಕ್’ ಸಿನಿಮಾ ಲುಕ್ ಎಂದು ಸ್ವತಃ ಹೇರ್​ ಸ್ಟೈಲಿಸ್ಟ್ ಖಚಿತಪಡಿಸಿದ್ದರು. ಈ ಮಧ್ಯೆ ಯಶ್ ಹಾಗೂ ಶೇರಾ ಪೋಸ್ ಕೊಟ್ಟಿರೋ ಫೋಟೋ ವೈರಲ್ ಆಗಿದೆ. ಈ ಫೋಟೋ ಹಂಚಿಕೊಂಡಿರೋ ಕೆಲವು ಫ್ಯಾನ್ಸ್, ‘ಗ್ಯಾಲಾಕ್ಸಿ ಅಪಾರ್ಟ್​ಮೆಂಟ್​ನಲ್ಲಿ ಸಲ್ಮಾನ್ ಖಾನ್​ನ ಭೇಟಿ ಮಾಡಿದ ಯಶ್’ ಎಂದು ಬರೆದುಕೊಂಡಿದ್ದರು.

ಯಶ್ ಅವರ ಡ್ರೆಸ್ ನೋಡಿದರೆ ಒಂದು ವಿಚಾರ ಇಲ್ಲಿ ಸ್ಪಷ್ಟವಾಗುತ್ತದೆ. ಅವರು ಹಾಕಿರೋ ಬಟ್ಟೆ ಅನಂತ್ ಅಂಬಾನಿ ಮದುವೆ ಸಂದರ್ಭದ್ದು. ಅವರು ಮದುವೆಗೆ ಇದೇ ಗೆಟಪ್​ನಲ್ಲಿ ಬಂದಿದ್ದರು. ಅನಂತ್ ಅಂಬಾನಿ ಮದುವೆ ಸಂದರ್ಭದಲ್ಲಿ ಯಶ್ ಹಾಗೂ ಶೇರಾ ಪೋಸ್ ಕೊಟ್ಟಿಕೊಂಡಿದ್ದರು ಎನ್ನಲಾಗಿದೆ. ಇದನ್ನು ತಪ್ಪಾಗಿ ಪೋಸ್ಟ್ ಮಾಡಲಾಗುತ್ತಿದೆ.

ಇದನ್ನೂ ಓದಿ: ‘ಟಾಕ್ಸಿಕ್​’ ಚಿತ್ರದ ರಿಲೀಸ್​ ದಿನಾಂಕ ಮುಂದಕ್ಕೆ? ಯಶ್​ ಸಿನಿಮಾ ತಡವಾಗುವ ಸೂಚನೆ 

ಇಷ್ಟೇ ಅಲ್ಲ, ಯಶ್ ಅವರ ಹೊಸ ಫೋಟೋ ಒಂದು ವೈರಲ್ ಆಗಿದೆ. ಇದರಲ್ಲಿ ಯಶ್ ಅವರ ಫಿಟ್ನೆಸ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಅವರು ಕಟ್ಟುಮಸ್ತಾದ ದೇಹ ಗಮನ ಸೆಳೆದಿದೆ. ಯಶ್ ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us