ಯಶ್ ಅವರು ಶ್ರೀಮಂತ ಕುಟುಂಬ ಹಿನ್ನೆಲೆಯಿಂದ ಬಂದವರಲ್ಲ. ಅವರು ಸಾಕಷ್ಟು ಕಷ್ಟಗಳನ್ನು ನೋಡಿ ಆ ಬಳಿಕ ಚಿತ್ರರಂಗಕ್ಕೆ ಕಾಲಿಟ್ಟರು. ಯಶ್ ಅವರು ಕಾಲೇಜ್ನಲ್ಲಿ ಇರುವಾಗ ಎಲ್ಲಾ ಹುಡುಗರಂತೆ ತರಲೆಗಳನ್ನು ಮಾಡಿಕೊಂಡು ಬಂದವರು. ಈ ಬಗ್ಗೆ ಶೋ ಒಂದರಲ್ಲಿ ಯಶ್ ಹೇಳಿದ್ದರು. ಅಚ್ಚರಿಯ ವಿಚಾರ ಏನೆಂದರೆ ನಟಿ ನಿಧಿ ಸುಬ್ಬಯ್ಯ ಅವರ ಮನೆಯ ಗೇಟ್ಗೆ ಪಟಾಕಿ ಹಚ್ಚಿದ್ದರು. ಆಗಿನ್ನೂ ನಿಧಿ ಹೀರೋಯಿನ್ ಆಗಿರಲಿಲ್ಲ. ಈ ವಿಚಾರವನ್ನು ಈಗ ನೆನಪಿಸಿಕೊಳ್ಳೋಣ.
ಯಶ್ ಅವರು ಓದಿದ್ದು ಮೈಸೂರಿನಲ್ಲಿ. ಕಾಲೇಜ್ನಲ್ಲಿ ಇರುವಾಗ ಸಾಕಷ್ಟು ಫನ್ ಮೂಮೆಂಟ್ನ ಅವರು ಅನುಭವಿಸಿದ್ದಾರೆ. ಇದಕ್ಕಿಂತ ಮುಖ್ಯವಾಗಿ ಅವರು ಸಾಕಷ್ಟು ಫನ್ ಆ್ಯಕ್ಟಿವಿಟಿ ಕೂಡ ಮಾಡಿದ್ದರು ಎಂಬುದುನ್ನು ಇಲ್ಲಿ ಗಮನಿಸಬೇಕಾದ ವಿಚಾರ.
‘ಹುಡುಗಿ ಮನೆಗೆ ಪಟಾಕಿ ಹಚ್ಚಿದ್ದೆ. ಈ ಹುಡುಗಿ ಈಗ ನಟಿ. ಅವರು ಬೇರಾರೂ ಅಲ್ಲ ನಿಧಿ ಸುಬ್ಬಯ್ಯ. ಅವರು ನಮ್ಮ ಕಾಲೇಜ್ನಲ್ಲಿ ಓದಿದ್ದರು. ನನ್ನ ಫ್ರೆಂಡ್ ಲವ್ ಮಾಡ್ತಾ ಇದ್ದ. ಅವನಿಗೆ ನಾವು ಸಹಾಯ ಮಾಡುತ್ತಿದ್ದೆವು. ಆಗ ನಿಧಿ ಸುಬ್ಬಯ್ಯ ಈ ಹುಡುಗರು ಸರಿ ಇಲ್ಲ ಎಂದು ಫಿಟ್ಟಿಂಗ್ ಇಟ್ಟಿದ್ದರು. ಆಗ ನಾನು ಹಾಗೂ ನನ್ನ ಗೆಳೆಯರು ಹೋಗಿ ಅವರ ಮನೆಯ ಗೇಟ್ಗೆ ಪಟಾಕಿ ಹಚ್ಚಿದ್ದೆವು. ಬರುವಾಗ ಲೈಟ್ ಎಲ್ಲಾ ಆನ್ ಆಗಿತ್ತು. ಜಸ್ಟ್ ಮಿಸ್’ ಎಂದರು ಯಶ್.
‘ಸುಮಾರು ವರ್ಷ ಆದ ಬಳಿಕ ನಿಧಿ ಸಿಕ್ಕರು. ನೀವು ನನ್ನ ಕಾಲೇಜ್ ಅಲ್ಲಿ ಓದಿದ್ರಿ ಅಲ್ವಾ ಅಂತ ಕೇಳಿದ್ರು. ಸರಿಯಾಗಿ ನೆನಪು ಇಲ್ಲ ಎಂದರು. ಆಗ ನಾನು ಆ ಘಟನೆ ಹೇಳಿದೆ. ಇದು ನೆನಪಿರಬಹುದು ಇದೆಯಲ್ವ ಎಂದು ಕೇಳಿದೆ. ಅವರು ಹೌದು ಎಂದರು. ಅದನ್ನು ಮಾಡಿದ್ದು ನಾನೇ ಎಂದೆ’ ಎಂದು ಹಳೆಯ ಘಟನೆಯನ್ನು ಅವರು ಹೇಳಿದ್ದರು.
ಯಶ್ ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಏಪ್ರಿಲ್ನಲ್ಲಿ ರಿಲೀಸ್ ಆಗಬೇಕಿತ್ತು. ಆದರೆ, ಅದು ಸದ್ಯಕ್ಕಂತೂ ಸಾಧ್ಯ ಇಲ್ಲ ಎಂದು ಹೇಳಲಾಗುತ್ತಿದೆ. ಡಿಸೆಂಬರ್ನಲ್ಲಿ ಸಿನಿಮಾ ರಿಲೀಸ್ ಆಗೋ ಸಾಧ್ಯತೆ ಇದೆ. ನಿಧಿ ಸುಬ್ಬಯ್ಯ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಈ ಮೊದಲು ಬಿಗ್ ಬಾಸ್ಗೆ ಅವರು ಬಂದಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ