ಇಂದು ಬಿಡುಗಡೆ ಆಗುತ್ತಿರುವ ಪ್ರಮುಖ ಸಿನಿಮಾಗಳಿವು
Movie release this Friday: ಮತ್ತೊಂದು ಶುಕ್ರವಾರ ಬಂದಿದೆ. ಪ್ರತಿ ಶುಕ್ರವಾರದಂತೆ ಈ ಶುಕ್ರವಾರವೂ ಸಹ ಹಲವು ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿವೆ. ಈ ವಾರ ಯಾವ ಯಾವ ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತಿವೆ. ಅವುಗಳಲ್ಲಿ ಯಾವ ಸಿನಿಮಾ ವೀಕ್ಷಿಸುವುದು ನಿಮ್ಮ ಆಯ್ಕೆ ಆಗಬಹುದು? ಇಲ್ಲಿದೆ ಪೂರ್ಣ ಮಾಹಿತಿ...

ಮತ್ತೊಂದು ಶುಕ್ರವಾರ ಬಂದಿದೆ. ಚಿತ್ರಮಂದಿರಗಳು ಸಿಂಗಾರಗೊಂಡು ಹೊಸ ಸಿನಿಮಾಗಳನ್ನು ಸ್ವಾಗತಿಸಲು ರೆಡಿಯಾಗಿವೆ. ಶುಕ್ರವಾರದ ಬರುವಿಕೆಗಾಗಿ ಕಾದಿದ್ದ ಸಿನಿಮಾ ಪ್ರೇಮಿಗಳ ಮುಖದಲ್ಲಿ ನಗು ಮೂಡಿದೆ. ಅಸಲಿಗೆ ಈ ಶುಕ್ರವಾರ ಹೆಚ್ಚಿನ ಸಂಖ್ಯೆಯ ಸ್ಟಾರ್ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಆದರೆ ಭರವಸೆ ಮೂಡಿಸಿರುವ, ನಿರೀಕ್ಷೆ ಹುಟ್ಟಿಸಿರುವ ಕೆಲವು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿವೆ.
ವಿಷ್ಣುಪ್ರಿಯ
ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ಮಂಜು ಹಾಗೂ ಕಣ್ಸನ್ನೆ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಿರುವ ‘ವಿಷ್ಣುಪ್ರಿಯ’ ಸಿನಿಮಾ ಇಂದು ಬಿಡುಗಡೆ ಆಗಿದೆ. ಸರಳ ಪ್ರೇಮಕತೆಯ ಜೊತೆಗೆ ಆಕ್ಷನ್ ಅನ್ನು ಸಹ ಒಳಗೊಂಡಿರುವ ಈ ಸಿನಿಮಾವನ್ನು ವಿಕೆ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಕೆ ಮಂಜು, ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೈಲರ್ ಮತ್ತು ಹಾಡುಗಳು ಗಮನ ಸೆಳೆದಿವೆ.
ಬಿಡುಗಡೆ ಆಗುತ್ತಿರುವ ಕನ್ನಡ ಸಿನಿಮಾಗಳು
‘ಶಾನುಭೋಗರ ಮಗಳು’, ರಘು ಭಟ್, ಕಾವ್ಯಾ ಶೆಟ್ಟಿ, ವಿಜಯ್ ರಾಘವೇಂದ್ರ ನಟನೆಯ ‘ನಿಮಗೊಂದು ಸಿಹ ಸುದ್ದಿ’, ಅಂಜನ್ ನಾಗೇಂದ್ರ, ವಿನಯಾ ರೈ ಇನ್ನಿತರರು ನಟಿಸಿರುವ ‘ಎಲ್ಲೋ ಜೋಗಪ್ಪ ನಿನ್ ಅರಮನೆ’, ಸೋಮ ವಿಜಯ್, ತೇಜಸ್ವಿ ರೆಡ್ಡಿ ನಟನೆಯ ‘ನಂಗೂ ಲವ್ವಾಗಿದೆ’, ಯೂಟ್ಯೂಬ್ ಸ್ಟಾರ್ ಮಲ್ಲು ಜಮಖಂಡಿ ನಟನೆಯ ‘ವಿದ್ಯಾ ಗಣಪತಿ’, ‘ಒಲವಿನ ಪಯಣ’, ‘ಗಗನ ಕುಸುಮ’, ‘ನವಮಿ’ ಕನ್ನಡ ಸಿನಿಮಾಗಳು ಈ ವಾರ ಬಿಡುಗಡೆ ಆಗುತ್ತಿವೆ.
ಡ್ರ್ಯಾಗನ್
ತಮಿಳಿನ ‘ಡ್ರ್ಯಾಗನ್’ ಸಿನಿಮಾ ಸಹ ಬಹಳ ನಿರೀಕ್ಷೆ ಮೂಡಿಸಿದೆ. ಪ್ರದೀಪ್ ರಂಗನಾಥನ್, ಆಶಿಕಿ ರಂಗನಾಥನ್, ಕಾವ್ಯಾ ಲೋಹರ್ ನಟಿಸಿರುವ ಈ ಸಿನಿಮಾ ಟ್ರೈಲರ್ನಿಂದಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಕಾಲೇಜು ಯುವಕನೊಬ್ಬನ ಪ್ರೇಮ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ನಿರ್ದೇಶನ ಮಾಡಿರುವುದು ಅಶ್ವತ್ಥ್ ಮಾರಿಮುತ್ತು, ಸಿನಿಮಾ ನಿರ್ಮಾಣ ಮಾಡಿರುವುದು ಕಲಾಪತಿ ಎಸ್ ಅಗೋರಂ.
ರಾಮಮ್ ರಾಘವಂ
ತೆಲುಗಿನ ಹಾಸ್ಯ ನಟ ಧನರಾಜ್ ಹಾಗೂ ಸಮುದ್ರಕಣಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ರಾಮಮ್ ರಾಘವಂ’ ತೆಲುಗು ಸಿನಿಮಾ ಇಂದು ಬಿಡುಗಡೆ ಆಗುತ್ತಿವೆ. ಥ್ರಿಲ್ಲರ್ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಅನ್ನು ಸ್ವತಃ ಧನರಾಜ್ ನಿರ್ದೇಶನ ಮಾಡಿದ್ದಾರೆ. ತೆಲುಗಿನ ಇನ್ನಿತರೆ ಸಿನಿಮಾಗಳಾದ ‘ಬಾಪು’, ‘ಡೆವಿಲ್ಸ್ ಚೇರ್’ ಸಹ ಇಂದು ಬಿಡುಗಡೆ ಆಗುತ್ತಿವೆ.
ನಿಲವುಕು ಎನ್ಮೇಲ್ ಎನ್ನಡಿ ಕೋಪಂ
ಸ್ಟಾರ್ ನಟ ಧನುಶ್ ನಿರ್ದೇಶನ ಮಾಡಿರುವ ಯೂಥ್ಫುಲ್ ಲವ್ ಸ್ಟೋರಿ ‘ನಿಲವುಕು ಎನ್ಮೇಲ್ ಎನ್ನಡಿ ಕೋಪಂ’ ತಮಿಳು ಸಿನಿಮಾ ಇಂದು ಬಿಡುಗಡೆ ಆಗಿದೆ. ಕುಂಬಳಂಗಿ ನೈಟ್ಸ್ನ ಬಾಲನಟ ಮ್ಯಾಥಿವ್ ಥಾಮಸ್ ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಹಲವು ಪ್ರತಿಭಾವಂತ ನಟ-ನಟಿಯರು ಸಿನಿಮಾದಲ್ಲಿದ್ದಾರೆ. ಸಿನಿಮಾ ತಮಿಳು ಹಾಗೂ ತೆಲುಗಿನಲ್ಲಿ ಬಿಡುಗಡೆ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:34 am, Fri, 21 February 25