ಯಶ್ಗೆ ಯಾಕಿಷ್ಟು ಧೈರ್ಯ? ಅವರೇ ಹೇಳಿದ್ದ ಆ ಮಾತು ನೆನಪಿದೆಯೇ?
ಯಶ್ ಅವರು ‘ಕೆಜಿಎಫ್ 2’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಹೀರೋ ಎನಿಸಿಕೊಂಡಿದ್ದಾರೆ. ಅವರ ಹಳೆಯ ವಿಡಿಯೋ ಒಂದು ಈಗ ವೈರಲ್ ಆಗಿದೆ. ಅವರು ಚಾಲೆಂಜ್ ಸ್ವೀಕರಿಸಲು ಕಾರಣ ಏನು? ಈ ವಿಚಾರವನ್ನು ಸ್ವತಃ ಯಶ್ ಅವರೇ ರಿವೀಲ್ ಮಾಡಿದ್ದರು.
ರಾಕಿಂಗ್ ಸ್ಟಾರ್ ಯಶ್ ಅವರು ಬಹಳ ಕಷ್ಟದಿಂದ ಚಿತ್ರರಂಗ ಪ್ರವೇಶಿಸಿದರು. ಈಗ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ‘ಕೆಜಿಎಫ್ 2’ ಚಿತ್ರದಿಂದ ಅವರ ಖ್ಯಾತಿ ಸಾಕಷ್ಟು ಹೆಚ್ಚಾಯಿತು. ಯಶ್ ಅವರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಇರುತ್ತಾರೆ. ಕನ್ನಡ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಅವರು ಪ್ರಯತ್ನ ಮಾಡುತ್ತಿದ್ದಾರೆ. ಯಶ್ ಅವರಿಗೆ ಯಾಕೆ ಇಷ್ಟು ಧೈರ್ಯ? ಅವರು ಚಾಲೆಂಜ್ ಸ್ವೀಕರಿಸಲು ಕಾರಣ ಏನು? ಈ ವಿಚಾರವನ್ನು ಸ್ವತಃ ಯಶ್ ಅವರೇ ರಿವೀಲ್ ಮಾಡಿದ್ದರು.
ಯಶ್ ಅವರು ಧಾರಾವಾಹಿಗಳಲ್ಲಿ ನಟಿಸಿದ್ದರು. ಅವರು ‘ಸಿಲ್ಲಿ ಲಲ್ಲಿ’ ಧಾರಾವಾಹಿಯಲ್ಲಿ ಈ ಮೊದಲು ಕಾಣಿಸಿಕೊಂಡಿದ್ದರು. ಯಶ್ ಅವರಿಗೆ ದೊಡ್ಡ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿದ್ದು ‘ಕೆಜಿಎಫ್’ ಸಿನಿಮಾ. ‘ಕೆಜಿಎಫ್ 2’ ಚಿತ್ರದಿಂದ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆದರು. ದೇಶದ ಯಾವುದೇ ಮೂಲೆಗೆ ಹೋದರೂ ಯಶ್ ಅವರನ್ನು ಗುರುತು ಹಿಡಿಯಲಾಗುತ್ತದೆ. ಯಶ್ ಅವರಿಗೆ ಇಷ್ಟೊಂದು ಧೈರ್ಯ ಬಂದಿದ್ದು ಹೇಗೆ ಎಂಬ ಪ್ರಶ್ನೆ ಮೂಡೋದು ಸಹಜ. ಇದಕ್ಕೆ ಅವರೇ ಉತ್ತರ ನೀಡಿದ್ದರು.
‘ನನಗೆ ಯಾಕೆ ಧೈರ್ಯ ಬರುತ್ತದೆ ಎಂದು ಎಲ್ಲರೂ ಕೇಳುತ್ತಾರೆ. ಎಲ್ಲವೂ ಚೆನ್ನಾಗಿದೆ, ಆರಾಮಾಗಿ ಇದ್ಬಿಡು ಎಂದು ತುಂಬಾ ಜನ ಹೇಳುತ್ತಾರೆ. ನನಗೆ ಇದ್ದಿದ್ದು ಒಂದೇ ಒಂದು, ನಾವು ಬಂದಿರೋದು ತುಂಬಾ ಕಷ್ಟದಿಂದ. ನಾವು ಕಳೆದುಕೊಂಡರೂ ಅದು ನೋಡಿರದೇ ಇರೋ ಜೀವನ ಏನೂ ಅಲ್ಲ. ಸಿಲ್ವರ್ ಸ್ಪೂನ್ನಿಂದ ಬಂದು ಇದೆಲ್ಲ ಹೋಗಿಬಿಟ್ಟರೆ ಎನ್ನುವ ಭಯ ಇರುತ್ತದೆ. ಆದರೆ, ನಮಗೆ ಭಯ ಇಲ್ಲ. ಎಲ್ಲಿದ್ದರೂ ಚೆನ್ನಾಗಿರಬೇಕು, ಸರಿಯಾಗಿ ಬದುಕಬೇಕು’ ಎಂದಿದ್ದರು ಯಶ್.
View this post on Instagram
ಇದನ್ನೂ ಓದಿ: ಯಶ್ ನಟನೆಯ ‘ರಾಮಾಯಣ’ದ ಪೋಸ್ಟ್ ಪ್ರೊಡಕ್ಷನ್ಗೆ 600 ದಿನ; 2027ಕ್ಕೆ ಸಿನಿಮಾ ರಿಲೀಸ್?
ಯಶ್ ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರ 2025ರ ಏಪ್ರಿಲ್ನಲ್ಲಿ ರಿಲೀಸ್ ಆಗಲಿದೆ. ಆದರೆ, ಇನ್ನೂ ಸಿನಿಮಾದ ಶೂಟಿಂಗ್ ಆರಂಭ ಆಗಿಲ್ಲ. ಈ ಕಾರಣಕ್ಕೆ ಸಿನಿಮಾ ಸದ್ಯಕ್ಕಂತೂ ರಿಲೀಸ್ ಆಗೋದು ಅನುಮಾನ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಸ್ಪಷ್ಟನೆ ಸಿಕ್ಕಿಲ್ಲ. ಇನ್ನು, ರಾಮಾಯಣ ಚಿತ್ರದಲ್ಲೂ ಯಶ್ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಅವರು ನಿರ್ಮಾಪಕರೂ ಹೌದು. ಹಿಂದಿ ಸಿನಿಮಾ ಇದಾಗಿದ್ದು, ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಯಶ್ ಅವರು ಈ ಚಿತ್ರದಲ್ಲಿ ರಾವಣನ ಪಾತ್ರ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.