ಟಿಕೆಟ್ ಬುಕಿಂಗ್ ಆರಂಭಕ್ಕೂ ಮೊದಲೇ ‘ಟಾಕ್ಸಿಕ್’ ಹವಾ ಹೇಗಿದೆ ನೋಡಿ

ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಸೃಷ್ಟಿ ಮಾಡಿರುವ ಕ್ರೇಜ್ ಅಷ್ಟಿಷ್ಟಲ್ಲ. ಮೊದಲ ದಿನವೇ ಈ ಚಿತ್ರವನ್ನು ನೋಡಲು ಯಶ್ ಅಭಿಮಾನಿಗಳು ಕಾಯುತ್ತಿದ್ದಾರೆ. 11 ಲಕ್ಷಕ್ಕೂ ಅಧಿಕ ಜನರು ‘ಬುಕ್ ಮೈ ಶೋ’ನಲ್ಲಿ ಈ ಸಿನಿಮಾಗೆ ಆಸಕ್ತಿ ತೋರಿಸಿದ್ದಾರೆ. ದಾಖಲೆ ಪ್ರಮಾಣದಲ್ಲಿ ಅಡ್ವಾನ್ಸ್ ಬುಕಿಂಗ್ ಆಗುವ ನಿರೀಕ್ಷೆ ಇದೆ.

ಟಿಕೆಟ್ ಬುಕಿಂಗ್ ಆರಂಭಕ್ಕೂ ಮೊದಲೇ ‘ಟಾಕ್ಸಿಕ್’ ಹವಾ ಹೇಗಿದೆ ನೋಡಿ
Yash

Updated on: Aug 20, 2026 | 7:38 PM

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಲು ರೆಡಿಯಾಗಿದೆ. ಬುಕ್ ಮೈ ಶೋನಲ್ಲಿ ಟಿಕೆಟ್ ಬುಕಿಂಗ್ (Toxic Movie Ticket Booking) ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆಗಸ್ಟ್ 21ರಿಂದ ಆನ್​ಲೈನ್​ನಲ್ಲಿ ‘ಟಾಕ್ಸಿಕ್’ ಟಿಕೆಟ್​ಗಳು ಲಭ್ಯವಾಗಲಿವೆ. ಅದಕ್ಕೂ ಮುನ್ನವೇ ಜನರು ಈ ಸಿನಿಮಾಗೆ ತೀವ್ರ ಆಸಕ್ತಿ ತೋರಿಸಿದ್ದಾರೆ. ‘ಬುಕ್ ಮೈ ಶೋ’ನಲ್ಲಿ 11 ಲಕ್ಷಕ್ಕೂ ಅಧಿಕ ಜನರು ‘ಇಂಟರೆಸ್ಟೆಡ್’ ಬಟನ್ ಕ್ಲಿಕ್ ಮಾಡಿದ್ದಾರೆ. ಅಂದರೆ, ಒಂದು ಮಿಲಿಯನ್​ಗಿಂತಲೂ ಅಧಿಕ ಜನರು ‘ಟಾಕ್ಸಿಕ್’ (Toxic) ನೋಡಲು ಕಾದಿದ್ದಾರೆ. ಸಿನಿಮಾ ಮೇಲೆ ಜನರಿಗೆ ಎಷ್ಟು ಕ್ರೇಜ್ ಇದೆ ಎಂಬುದಕ್ಕೆ ಈ ಸಂಖ್ಯೆಯೇ ಸಾಕ್ಷಿಯಾಗಿದೆ.

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಟಾಕ್ಸಿಕ್’ ಚಿತ್ರಕ್ಕೆ ಅಗ್ರಸ್ಥಾನ ಇದೆ. ಟ್ರೇಲರ್ ಬಿಡುಗಡೆ ಆದ ಬಳಿಕ ಈ ಸಿನಿಮಾ ಮೇಲಿನ ಕ್ರೇಜ್ ಇನ್ನಷ್ಟು ಜಾಸ್ತಿ ಆಗಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ಈ ಚಿತ್ರ ವಿಶ್ವಾದ್ಯಂತ ಬಿಡುಗಡೆ ಆಗುತ್ತಿದೆ. ಮೊದಲ ದಿನವೇ ದಾಖಲೆ ಪ್ರಮಾಣದ ಬುಕಿಂಗ್ ಆಗುವ ನಿರೀಕ್ಷೆ ಇದೆ.

‘ಟಾಕ್ಸಿಕ್’ ಸಿನಿಮಾ ಮೇಲೆ ಈ ಪರಿ ನಿರೀಕ್ಷೆ ಮೂಡಲು ಪಾತ್ರವರ್ಗ ಕೂಡ ಕಾರಣ ಆಗಿದೆ. ‘ಕೆಜಿಎಫ್: ಚಾಪ್ಟರ್ 2’ ಬಳಿಕ ಯಶ್ ನಟಿಸಿದ ಸಿನಿಮಾ ಇದಾಗಿರುವುದರಿಂದ ಜನರು ಕಾತರದಿಂದ ಕಾಯುತ್ತಿದ್ದಾರೆ. ಬಾಲಿವುಡ್ ನಟಿಯರಾದ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ ಕೂಡ ಇದ್ದಾರೆ. ‘ಕಾಂತಾರ’ ಯಶಸ್ಸಿನ ಬಳಿಕ ರುಕ್ಮಿಣಿ ವಸಂತ್ ಅವರು ‘ಟಾಕ್ಸಿಕ್’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ಈ ಎಲ್ಲ ಕಲಾವಿದರ ಅಭಿಮಾನಿಗಳು ‘ಟಾಕ್ಸಿಕ್’ ಸಿನಿಮಾವನ್ನು ನೋಡಲು ಉತ್ಸುಕರಾಗಿದ್ದಾರೆ. ನೂರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಚಿತ್ರ ಸಿದ್ಧವಾಗಿದೆ. ಸಿನಿಮಾದ ತಾಂತ್ರಿಕ ಗುಣಮಟ್ಟ ಯಾವ ರೀತಿ ಇದೆ ಎಂಬುದು ಈಗಾಗಲೇ ಟ್ರೇಲರ್ ಮೂಲಕ ಗೊತ್ತಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಧೂಳೆಬ್ಬಿಸುವುದು ಖಚಿತ. ಅಲ್ಲದೇ ವಿದೇಶದಲ್ಲಿ ಕೂಡ ‘ಟಾಕ್ಸಿಕ್’ ಅದ್ದೂರಿಯಾಗಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಬ್ರಿಟನ್‌ನಲ್ಲಿ ಟಾಕ್ಸಿಕ್; ನೋಡುವವರಿಗೆ ದೊಡ್ಡ ಎಚ್ಚರಿಕೆ ಕೊಟ್ಟ ಸೆನ್ಸಾರ್ ಮಂಡಳಿ

ಆಗಸ್ಟ್ 26ರಂದು ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಇಂಗ್ಲಿಷ್ ಭಾಷೆಯಲ್ಲಿ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗಲಿದೆ. ಯಶ್ ಅವರು ಹಲವು ಗೆಟಪ್​ನಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ. ಗೀತು ಮೋಹನ್​ದಾಸ್ ಅವರು ಈ ಚಿತ್ರವನ್ನು ಯಾವ ರೀತಿ ಕಟ್ಟಿಕೊಟ್ಟಿದ್ದಾರೆ ಎಂಬುದನ್ನು ನೋಡುವ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us