
ರಾಕಿಂಗ್ ಸ್ಟಾರ್ ಯಶ್ ಅವರ (Yash) ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬ್ರಿಟನ್ನಲ್ಲಿ 18+ ವಯಸ್ಕರ ಪ್ರಮಾಣಪತ್ರ ಪಡೆದುಕೊಂಡಿದೆ. ಅಲ್ಲಿನ ಬ್ರಿಟಿಷ್ ಬೋರ್ಡ್ ಆಫ್ ಫಿಲ್ಮ್ ಕ್ಲಾಸಿಫಿಕೇಶನ್ ಸಂಸ್ಥೆಯು ಚಿತ್ರಕ್ಕೆ ಈ ಪ್ರಮಾಣೀಕರಣ ನೀಡಿದೆ. ಭೀಕರ ಹಿಂಸಾಚಾರ, ತೀವ್ರ ಲೈಂಗಿಕ ದೃಶ್ಯಗಳು ಮತ್ತು ರಕ್ತದೋಕುಳಿ ತೀವ್ರತೆಯ ಆಧಾರದ ಮೇಲೆ ಗರಿಷ್ಠ ರೇಟಿಂಗ್ ನೀಡಲಾಗಿದ್ದು, ವಿಶ್ವದಾದ್ಯಂತ ಭಾರೀ ಕುತೂಹಲ ಮೂಡಿಸಿದೆ.
ಬ್ರಿಟನ್ ಮಂಡಳಿಯು ಹಿಂಸೆ ಹಾಗೂ ಸೆಕ್ಸ್ ವಿಭಾಗಗಳಲ್ಲಿ ಚಿತ್ರಕ್ಕೆ ಐದಕ್ಕೆ ಐದು ರೇಟಿಂಗ್ ನೀಡಿದೆ. ಭೀಕರ ರಕ್ತಪಾತ ಮತ್ತು ಕ್ರೂರ ಹೊಡೆದಾಟದ ದೃಶ್ಯಗಳು ಸಿನಿಮಾದಲ್ಲಿವೆ ಎಂದು ಎಚ್ಚರಿಸಿದೆ. ಬೆದರಿಕೆ, ಭಯ, ಮಾದಕವಸ್ತು ಮತ್ತು ಅಸಭ್ಯ ಭಾಷೆಯ ವಿಭಾಗಗಳಿಗೆ ನಾಲ್ಕು ಅಂಕ ನೀಡಲಾಗಿದೆ.
ಚಿತ್ರದ ಒಟ್ಟು ಅವಧಿ 191 ನಿಮಿಷ 41 ಸೆಕೆಂಡುಗಳು ಎಂದು ದಾಖಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಚಿತ್ರೀಕರಣಗೊಂಡಿದ್ದರೂ, ಮಂಡಳಿಯು ಇದನ್ನು ತಮಿಳು ಎಂದು ತಪ್ಪಾಗಿ ವರ್ಗೀಕರಿಸಿದೆ. ಗೋವಾದ ಡ್ರಗ್ ಮಾಫಿಯಾ ನಾಯಕನ ಪತನದ ಕಥೆಯನ್ನು ಇದು ಒಳಗೊಂಡಿದೆ.
ಚಿತ್ರದಲ್ಲಿ ಕುತ್ತಿಗೆ ಸೀಳುವುದು ಹಾಗೂ ಬೆಂಕಿ ಹಚ್ಚುವಂತಹ ದೃಶ್ಯಗಳಿವೆ. ಸ್ಟ್ರಿಪ್ ಕ್ಲಬ್ ಮತ್ತು ಪ್ರಣಯದ ಬೋಲ್ಡ್ ಸನ್ನಿವೇಶಗಳು ಕೂಡ ಇವೆ. ಇತ್ತೀಚಿನ ‘ಧುರಂಧರ್’ ಸರಣಿ ಚಿತ್ರಗಳಿಗಿಂತಲೂ ಹೆಚ್ಚಿನ ರೇಟಿಂಗ್ ಪಡೆದಿದೆ.
ಇದನ್ನೂ ಓದಿ: ವಿಶ್ವಾದ್ಯಂತ ಹವಾ ಸೃಷ್ಟಿಸಲು ‘ಟಾಕ್ಸಿಕ್’ ಇಂಗ್ಲಿಷ್ ಟ್ರೇಲರ್ ರಿಲೀಸ್: ವಿದೇಶದಲ್ಲೂ ಯಶ್ ಕ್ರೇಜ್
ಈ ಚಿತ್ರವನ್ನು ಗೀತು ಮೋಹನ್ದಾಸ್ ನಿರ್ದೇಶಿಸಿದ್ದಾರೆ. ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ತಾರಾಗಣದಲ್ಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಇದನ್ನು ಅದ್ದೂರಿಯಾಗಿ ನಿರ್ಮಿಸಿವೆ. ಈ ಹಿಂದೆ ರಣವೀರ್ ಸಿಂಗ್ ಚಿತ್ರದ ಜೊತೆಗಿನ ಪೈಪೋಟಿಯನ್ನು ತಪ್ಪಿಸಲಾಗಿತ್ತು. ಈಗ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.