ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರಕ್ಕೆ ಯಶ್ (Yash) ನಿರ್ಮಾಪಕನಾಗಿರೋದು ಗೊತ್ತಿರುವ ವಿಚಾರವೇ. ರಾಮನಾಗಿ ರಣಬೀರ್ ಕಪೂರ್ ಕಾಣಿಸಿಕೊಂಡರೆ, ಯಶ್ ಅವರು ರಾವಣನ ಪಾತ್ರ ಮಾಡಲಿದ್ದಾರೆ. ಅವರು ಈ ಪಾತ್ರವನ್ನು ಒಪ್ಪಿಕೊಳ್ಳುವುದರ ಜೊತೆಗೆ ನಿರ್ಮಾಪಕನೂ ಆಗಿರುವುದರಿಂದ ಅವರಿಗೆ ಲಾಭದಲ್ಲಿ ಪಾಲು ಸಿಗಲಿದೆ. ಈ ಚಿತ್ರದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗದೆ ಇದ್ದರೂ ಒಂದಷ್ಟು ವಿಚಾರಗಳು ಜೋರಾಗಿ ಚರ್ಚೆಯಲ್ಲಿದೆ. ಈ ಚಿತ್ರಕ್ಕೆ ಬಂಡವಾಳ ಹೂಡಿರೋ ಯಶ್ಗೆ ಲಾಭದಲ್ಲಿ ಸಿಗೋ ಪಾಲೆಷ್ಟು ಎನ್ನುವ ಬಗ್ಗೆ ಇಲ್ಲಿದೆ ವಿವರ.
‘ರಾಮಾಯಣ’ ಸಿನಿಮಾ ನಿರ್ಮಾಣ ಆಗುತ್ತಿರುವುದು 800+ ಕೋಟಿ ರೂಪಾಯಿ ಬಜೆಟ್ನಲ್ಲಿ. ಈ ಚಿತ್ರಕ್ಕಾಗಿ ಯಶ್ ಅವರು ಲಾಭದಲ್ಲಿ 20-30 ಪರ್ಸೆಂಟ್ ಪಡೆಯಲಿದ್ದಾರಂತೆ. ಅಂದರೆ, ಅವರ ಹೂಡಿಕೆ ಕೂಡ ಇಷ್ಟೇ ದೊಡ್ಡ ಮಟ್ಟದಲ್ಲಿ ಇರಲಿದೆ ಅನ್ನೋದು ಪಕ್ಕಾ ಆಗಿದೆ. ಸದ್ಯ ಈ ವಿಚಾರದಲ್ಲಿ ಯಾವುದೂ ಅಧಿಕೃತ ಆಗಿಲ್ಲ.
ಏಪ್ರಿಲ್ನಲ್ಲಿ ಯಶ್ ಅವರು ‘ರಾಮಾಯಣ’ದ ಬಗ್ಗೆ ಮಾತನಾಡಿದ್ದರು. ಸಿನಿಮಾದ ಪಾತ್ರದ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಮಾಡಿರಲಿಲ್ಲ. ಆದರೆ, ಅವರು ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದು ಏಕೆ ಎಂದು ವಿವರಿಸಿದ್ದರು. ಇದು ಅವರ ಕನಸಿನ ಪ್ರಾಜೆಕ್ಟ್ ಅಂತೆ. ಹೀಗಾಗಿ ಸಿನಿಮಾ ನಿರ್ಮಾಣ ಮಾಡಲು ಮುಂದಾದರು. ಯಶ್ ಅವರನ್ನು ರಾವಣನಾಗಿ ಫ್ಯಾನ್ಸ್ ಹೇಗೆ ಸ್ವೀಕರಿಸುತ್ತಾರೆ ಅನ್ನೋ ಕುತೂಹಲ ಅನೇಕರಿಗೆ ಮೂಡಿದೆ.
ಇದನ್ನೂ ಓದಿ: ‘ರಾಮಾಯಣ’ ಸಿನಿಮಾ: ರಣ್ಬೀರ್-ಸಾಯಿ ಪಲ್ಲವಿ ಫೋಟೊ ಲೀಕ್
‘ರಾಮಾಯಣ’ದ ಬಜೆಟ್ 835 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಗಲಿದೆ. ಇದರ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ 600 ದಿನಗಳ ಅವಶ್ಯಕತೆ ಇದೆಯಂತೆ. ಗ್ಲೋಬಲ್ ಲೆವೆಲ್ನಲ್ಲಿ ಸಿನಿಮಾ ಮಾಡಲು ತಂಡ ನಿರ್ಧರಿಸಿದೆ. ಸಾಯಿ ಪಲ್ಲವಿ ಅವರು ಸೀತೆಯಾಗಿ, ಅರುಣ್ ಗೋವಿಲ್ ಹಾಗೂ ಲಾರಾ ದತ್ ಅವರು ದಶರಥ ಹಾಗೂ ಕೈಕೇಯಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸನ್ನಿ ಡಿಯೋಲ್ ಅವರು ಹನುಮಂತನ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಸೆಟ್ ಫೋಟೋ ವೈರಲ್ ಆಗಿದೆ. ಈ ಲೀಕ್ ತಡೆಯಲು ಫ್ಯಾನ್ಸ್ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.