AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದಯ ಟಿವಿಯಲ್ಲಿ ‘ಶ್ರೀಮದ್ ರಾಮಾಯಣ’ ಧಾರಾವಾಹಿ ನೋಡಿ, ನಗದು ಬಹುಮಾನ ಗೆಲ್ಲಿ

ಹೊಸ ಕಲಾವಿದರು, ಹೊಸ ತಂತ್ರಜ್ಞಾನ ಹಾಗೂ ಹೊಸ ಮೆರುಗಿನೊಂದಿಗೆ ರಾಮಾಯಣ ಕಥೆ ಈಗ ಕಿರುತೆರೆ ಪ್ರೇಕ್ಷಕರ ಎದುರು ಬರುತ್ತಿದೆ. ಉದಯ ವಾಹಿನಿಯು ‘ಶ್ರೀಮದ್​ ರಾಮಾಯಣ’ ಸೀರಿಯಲ್​ ಪ್ರಸಾರಕ್ಕೆ ಸಜ್ಜಾಗಿದೆ. ಪೌರಾಣಿಕ ಕಥೆಯನ್ನು ನೋಡಲು ಕಾದಿರುವ ವೀಕ್ಷಕರಿಗೆ ಇದು ಹೊಸ ಅನುಭವ ನೀಡಲಿದೆ. ಮೇ 20ರಿಂದ ಸೋಮವಾರದಿಂದ ಶನಿವಾರದ ತನಕ ಸಂಜೆ 6 ಗಂಟೆಗೆ ಈ ಸೀರಿಯಲ್​ ಪ್ರಸಾರ ಆಗಲಿದೆ.

ಉದಯ ಟಿವಿಯಲ್ಲಿ ‘ಶ್ರೀಮದ್ ರಾಮಾಯಣ’ ಧಾರಾವಾಹಿ ನೋಡಿ, ನಗದು ಬಹುಮಾನ ಗೆಲ್ಲಿ
ಶ್ರೀಮದ್​ ರಾಮಾಯಣ
ಮದನ್​ ಕುಮಾರ್​
|

Updated on: May 15, 2024 | 10:09 PM

Share

ಈಗಾಗಲೇ ಅನೇಕ ಧಾರಾವಾಹಿಗಳು (Kannada Serial) ಕನ್ನಡ ಕಿರುತೆರೆಯಲ್ಲಿ ಪ್ರಸಾರ ಕಾಣುತ್ತಿವೆ. ಆದರೆ ಪೌರಾಣಿಕ ಕಥಾಹಂದರ ಸೀರಿಯಲ್​ಗಳ ಸಂಖ್ಯೆ ಕಡಿಮೆ. ಆ ಕೊರತೆ ನೀಗಿಸುವ ರೀತಿಯಲ್ಲಿ ಈಗ ‘ಉದಯ’ ವಾಹಿನಿಯು ಒಂದು ಹೊಸ ಧಾರಾವಾಹಿಯನ್ನು ಪ್ರೇಕ್ಷಕರ ಎದುರು ತರುತ್ತಿದೆ. ಉದಯ ಟಿವಿ (Udaya TV) ತನ್ನ ಪ್ರೇಕ್ಷಕರಿಗೆ ‘ಗಂಗೆ ಗೌರಿ’, ‘ಅಣ್ಣ ತಂಗಿ’, ‘ಶಾಂಭವಿ’, ‘ಸೇವಂತಿ’, ‘ಸೂರ್ಯವಂಶ’, ‘ರಾಧಿಕಾ’, ‘ಜನನಿ’, ‘ಗೌರಿಪುರದ ಗಯ್ಯಾಳಿಗಳು’, ‘ಮೈನಾ’ ಮುಂತಾದ ಧಾರಾವಾಹಿಗಳನ್ನು ನೀಡುತ್ತಿದೆ. ಅದರ ಜೊತೆಗೆ ಈಗ ‘ಶ್ರೀಮದ್ ರಾಮಾಯಣʼ (Shrimad Ramayana) ಸೀರಿಯಲ್ ಪ್ರಸಾರಕ್ಕೆ ಸಜ್ಜಾಗಿದೆ. ಮೇ 20ರಿಂದ ಸಂಜೆ 6 ಗಂಟೆಗೆ ಸೋಮವಾರದಿಂದ ಶನಿವಾರದವರೆಗೆ ಈ ಧಾರಾವಾಹಿ ಪ್ರಸಾರ ಆಗಲಿದ್ದು, ಇದರ ವೀಕ್ಷಕರಿಗೆ ನಗದು ಬಹುಮಾನ ಗೆಲ್ಲುವ ಅವಕಾಶ ನೀಡಲಾಗುತ್ತಿದೆ.

‘ಶ್ರೀಮದ್ ರಾಮಾಯಣ’ ಸೀರಿಯಲ್ ಪ್ರತಿ ಸಂಚಿಕೆಯಲ್ಲಿ 250 ವೀಕ್ಷಕರಿಗೆ ಒಟ್ಟೂ 2.5 ಲಕ್ಷ ರೂಪಾಯಿ ನಗದು ಬಹುಮಾನ ಗೆಲ್ಲುವ ಅವಕಾಶವನ್ನು ‘ಉದಯ ಟಿವಿ’ ನೀಡುತ್ತಿದೆ. ಈ ಧಾರಾವಾಹಿಯನ್ನು ನೋಡಿ, ಸಂಚಿಕೆಯ ಕೊನೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ ಪ್ರತಿ ಎಪಿಸೋಡ್​ನಲ್ಲಿ ಅದೃಷ್ಟಶಾಲಿ 250 ವೀಕ್ಷಕರಿಗೆ ತಲಾ ಒಂದು ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ಉದಯ ವಾಹಿನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಇಂದಿಗೂ ಪ್ರಸ್ತುತ ಆಗುವಂತಹ ಕಥೆ ರಾಮಾಯಣದ್ದು. ಭಾರತೀಯ ಪರಂಪರೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಥೆ ಅದು. ರಾಮನ ಜೀವನದಿಂದ ನಾವು ಕಲಿಯಬಹುದಾದ ಅನೇಕ ನೀತಿಪಾಠ ಇದೆ. ರಾಮ ಹಾಗೂ ಸೀತೆಯ ಪವಿತ್ರ ಪ್ರೇಮಕಥೆ ಕೂಡ ಇದರಲ್ಲಿದೆ. ವೈಭವದಿಂದ ಕೂಡಿರುವ ರಾಮಾಯಣವನ್ನು ಪ್ರೇಕ್ಷಕರಿಗೆ ಅಷ್ಟೇ ವೈಭವದಿಂದ ತೋರಿಸಲು ಉದಯ ವಾಹಿನಿ ಸಜ್ಜಾಗಿದೆ.

ಇದನ್ನೂ ಓದಿ: ‘ಕಣ್ಣಪ್ಪ’ ಶೂಟಿಂಗ್​ ಸೆಟ್​ಗೆ ಬಂದ ಪ್ರಭಾಸ್​; ಪೋಸ್ಟರ್​ ಮೂಲಕ ಗುಡ್​ ನ್ಯೂಸ್​

ರಾಮಾಯಣ ಕಥೆಯನ್ನು ಆಧರಿಸಿ ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಅಷ್ಟೇ ಅಲ್ಲದೇ ಕಿರುತೆರೆಯಲ್ಲಿ ಕೂಡ ಈಗಾಗಲೇ ರಾಮಾಯಣ ಧಾರಾವಾಹಿ ಬಂದು ಹೋಗಿದೆ. ಈಗ ಮತ್ತೆ ಆ ಕಥೆಯನ್ನು ಹೊಸ ಕಲಾವಿದರ ಮೂಲಕ ಹೊಸ ತಂತ್ರಜ್ಞಾನ ಹಾಗೂ ದೃಶ್ಯ ವೈಭವದೊಂದಿಗೆ ಪ್ರೇಕ್ಷಕರಿಗೆ ತೋರಿಸಲಿದೆ ಉದಯ ಟಿವಿ. ಈ ಧಾರಾವಾಹಿಯು ವೀಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂಬ ಭರವಸೆ ಉದಯ ವಾಹಿನಿಯದ್ದು. ಪೌರಾಣಿಕ ಕಥೆಗಳನ್ನು ಇಷ್ಟಪಡುವ ವೀಕ್ಷಕರು ‘ಶ್ರೀಮದ್ ರಾಮಾಯಣ’ ಸೀರಿಯಲ್ ನೋಡಲು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ