AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣಪತಿ ಪೂಜೆ ನಮ್ಮ ಸಂಸ್ಕೃತಿ ಅಲ್ಲ, ಅದು ಕೇವಲ ಪೌರಾಣಿಕ ಕಲ್ಪನೆ ಅಷ್ಟೇ -ಪಂಡಿತಾರಾಧ್ಯ ಸ್ವಾಮೀಜಿ

ಸಾಣೇಹಳ್ಳಿಯ ತರಳಬಾಳು ಮಠ ಆಯೋಜಿಸಿದ್ದ ನಾಟಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಪಂಡಿತಾರಾಧ್ಯ ಸ್ವಾಮೀಜಿ ಅವರು ಗಣಪತಿ ನಮ್ಮ ಸಂಸ್ಕೃತಿ ಅಲ್ಲ ಎಂಬ ಸಾಣೆಹಳ್ಳಿ ಶ್ರೀ ಭಾಷಣ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. ಗಣಪತಿ ನಮ್ಮ ಸಂಸ್ಕೃತಿ ಅಲ್ಲ ಎಂದು ಪುನರುಚ್ಚರಿಸಿದ್ದಾರೆ.

ಗಣಪತಿ ಪೂಜೆ ನಮ್ಮ ಸಂಸ್ಕೃತಿ ಅಲ್ಲ, ಅದು ಕೇವಲ ಪೌರಾಣಿಕ ಕಲ್ಪನೆ ಅಷ್ಟೇ -ಪಂಡಿತಾರಾಧ್ಯ ಸ್ವಾಮೀಜಿ
ಪಂಡಿತಾರಾಧ್ಯ ಸ್ವಾಮೀಜಿ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Nov 05, 2023 | 9:53 AM

Share

ಚಿತ್ರದುರ್ಗ, ನ.05: ಪ್ರಥಮ ಪೂಜಿತ, ವಿಘ್ನ ನಿವಾರಕ, ಶಿವ ಪುತ್ರ ಗಣೇಶನ ಮೇಲೆ ಈಗ ಪ್ರಶ್ನೆ ಎದ್ದಿದೆ. ಗಣಪತಿ ಪೂಜೆ (Ganesha Puja), ಉತ್ಸವದ ವಿರುದ್ಧ ಪಂಡಿತಾರಾಧ್ಯ ಸ್ವಾಮೀಜಿ ಮತ್ತೆ ಕಿಡಿ ಕಾರಿದ್ದಾರೆ. ಗಣಪತಿ ಪೂಜೆ ಬಸವ ಸಂಸ್ಕೃತಿ ಅಲ್ಲ. ಗಣಪತಿ (Lord Ganesha) ಪೌರಾಣಿಕ ಕಲ್ಪನೆ ಎಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯ ನಾಟಕೋತ್ಸವದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ (Panditaradhya Swamiji) ಹೇಳಿಕೆ ನೀಡಿದ್ದಾರೆ. ಗಣಪತಿ ಯಾರಿಗಾದರೂ ವರ ಅಥವಾ ಶಾಪ ಕೊಟ್ಟಿದ್ದಾನೆಯೇ? ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಗಣಪತಿ ದೇವಸ್ಥಾನಕ್ಕೆ ಹೋಗುತ್ತಾರೆ. ಓದದಿದ್ದರೆ, ಉತ್ತರ ಬರೆಯದಿದ್ದರೆ ಪಾಸ್ ಆಗಲು ಸಾಧ್ಯವೇ? ಎಂದು ಪಂಡಿತಾರಾಧ್ಯಶ್ರೀ ಪ್ರಶ್ನಿಸಿದ್ದಾರೆ.

ಸಾಣೇಹಳ್ಳಿಯ ತರಳಬಾಳು ಮಠ ಆಯೋಜಿಸಿದ್ದ ನಾಟಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಪಂಡಿತಾರಾಧ್ಯ ಸ್ವಾಮೀಜಿ ಅವರು ಗಣಪತಿ ನಮ್ಮ ಸಂಸ್ಕೃತಿ ಅಲ್ಲ ಎಂಬ ಸಾಣೆಹಳ್ಳಿ ಶ್ರೀ ಭಾಷಣ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. ಗಣಪತಿ ನಮ್ಮ ಸಂಸ್ಕೃತಿ ಅಲ್ಲ ಎಂದು ಪುನರುಚ್ಚರಿಸಿದ್ದಾರೆ. ಗಣಪತಿ ಪೂಜೆ ಬಸವ ಸಂಸ್ಕೃತಿ ಅಲ್ಲ ಎಂದು ಸಾಣೇಹಳ್ಳಿಯಲ್ಲಿ ಶಿವಧ್ವಜಾರೋಹಣ ಬಳಿಕ ಹೇಳಿದ್ದೆವು. ಇಷ್ಟಲಿಂಗ ಧರಿಸಿ ಪೂಜಿಸುವುದು ಬಸವ ಸಂಸ್ಕೃತಿ. ಗಣಪತಿ ಪೌರಾಣಿಕ ಕಲ್ಪನೆ. ಗಣಪತಿಗೆ ಸುಮ್ಮನೆ ಇಷ್ಟೆಲ್ಲಾ ಪೂಜೆ ಮಾಡುತ್ತೀರಿ. ಗಣಪತಿ ಯಾರಿಗಾದರೂ ವರ, ಶಾಪ ಕೊಟ್ಟಿದ್ದಾನೆಯೇ? ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಗಣಪತಿ ದೇಗುಲಕ್ಕೆ ಹೋಗುತ್ತಾರೆ. ಓದದಿದ್ದರೆ, ಉತ್ತರ ಬರೆಯದಿದ್ದರೆ ಪಾಸ್ ಆಗಲು ಸಾಧ್ಯವೇ? ಗಣಪತಿ ಎಂಬುದು ಅದೊಂದು ನಂಬಿಕೆ ಅಷ್ಟೇ. ಅದನ್ನೇ ವಿಜೃಂಭಣೆ ಮಾಡುತ್ತ. ವಾತಾವರಣ‌‌ ಕುಲಗೆಡಿಸಲಾಗುತ್ತಿದೆ. ಡಿಜೆ ಸೌಂಡ್ ಹಾಕಿ ಎಲ್ಲರ ಕಿವಿ ಕೆಪ್ಪ ಮಾಡುವ ವಾತಾವತಣ ನಿರ್ಮಾಣ ಆಗುತ್ತಿದೆ. ಕುಡಿದು ಕುಣಿದು ಮತ್ತೇನೇನೋ ಮಾಡುತ್ತಿರುತ್ತಾರೆ ಎಂದು ಕಿಡಿಕಾರಿದರು.

ಈ ಬಗ್ಗೆ ಪ್ರತಿಭಟನೆ ಮಾಡಬೇಕಾದವರು ಯಾರು? ಸತ್ಯ ಹೇಳಬೇಕಾಗುತ್ತದೆ, ನಿಷ್ಠುರವಾಗಿ ಮಾತಾಡಬೇಕಾಗುತ್ತದೆ. ರಾಜಕಾರಣಿಗಳು ಗಣಪತಿ ಉತ್ಸವಕ್ಕೆ ಕೆಲ ಹೊತ್ತು ಹೋಗಿ ಬರುತ್ತಾರೆ. ಸತ್ಯ ಹೇಳಿದ್ದಕ್ಕೆ ನಮ್ಮ ವಿರುದ್ಧ ಮುಗಿಬಿದ್ದರೆ ನಾವು ಭಯಪಡುವ ಅಗತ್ಯವಿಲ್ಲ. ವಿಶ್ವೇಶ್ವರಭಟ್ ಅವರ ಪತ್ರಿಕೆಯಲ್ಲಿ ಕೀಳುಮಟ್ಟದ ಪದ ಬಳಸಿ ನಮ್ಮ ಬಗ್ಗೆ ಲೇಖನ ಬರೆಯಲಾಗಿದೆ. ಅದು ಅವರ ಸಂಸ್ಕೃತಿ, ನಮ್ಮ ಸಂಸ್ಕೃತಿ ಅಲ್ಲ. ಪ್ರತಿಭಟನೆ ಮಾಡುತ್ತೇವೆಂದ ಭಕ್ತರಿಗೆ ಬೇಡ ಎಂದು ಹೇಳಿದ್ದೇವೆ ನಾವೇ ನೇರವಾಗಿ ಮಾತಾಡುತ್ತೇವೆಂದು ಹೇಳಿದ್ದೇವೆ ಎಂದರು.

ಇದನ್ನೂ ಓದಿ: ಯಾರಾದ್ರೂ ನನ್ನ ಪರ ಮಾತಾಡಿದ್ರೆ ನೋಟಿಸ್ ಕೊಡ್ತೀನಿ, ನನಗೆ ಯಾರ ಬೆಂಬಲವೂ ಬೇಡ -ಇಕ್ಬಾಲ್ ಹುಸೇನ್ ವಿರುದ್ಧ ಡಿಕೆ ಶಿವಕುಮಾರ್ ಗರಂ

ಪಂಡಿತಾರಾಧ್ಯ ಸ್ವಾಮೀಜಿಗೆ ಗಣೇಶ ಮೂರ್ತಿ, ಪತ್ರ ರವಾನಿಸಿದ ಕಲಾವಿದ

ಇನ್ನು ಗಣೇಶ ಉತ್ಸವದ ಕುರಿತು ಪಂಡಿತಾರಾಧ್ಯ ಸ್ವಾಮೀಜಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಧಾರವಾಡ ಕಲಾವಿದ ಸಾಣೆಹಳ್ಳಿ ಶ್ರೀಗೆ ಗಣೇಶಮೂರ್ತಿ ಹಾಗೂ ಪತ್ರ ರವಾನಿಸಿದ್ದಾರೆ. ಧಾರವಾಡದ ಗಣೇಶಮೂರ್ತಿ ತಯಾರಕ ಮಂಜುನಾಥ ಹಿರೇಮಠ ಅವರು ಪಂಡಿತಾರಾಧ್ಯ ಸ್ವಾಮೀಜಿಗಳಿಗೆ ಅವರ ಹೇಳಿಕೆ ಖಂಡಿಸಿ, ಕೋರಿಯರ್ ಮೂಲಕ ಪತ್ರ, ಗಣೇಶಮೂರ್ತಿ ರವಾನಿಸಿದ್ದಾರೆ.

ನಾವು ಕಲಾವಿದರು, ಗಣೇಶನ ಮಣ್ಣಿನಲ್ಲಿಯೇ ಅನ್ನ ಕಂಡವರು. ನಾವು ಗಣೇಶನಂತೆಯೇ, ವಚನಗಳನ್ನೂ ಗೌರವಿಸುತ್ತೇವೆ. ನಮಗೆ ಎರಡೂ ಬೇಕು. ಆದರೆ ನೀವು ಗಣೇಶನ ಬಗ್ಗೆ ಹೇಳಿದ್ದು ಸರಿಯಲ್ಲ. ನಿಮ್ಮ ಹೇಳಿಕೆಯಿಂದ ನಮ್ಮ ಮನಸ್ಸಿಗೆ ಘಾಸಿಯಾಗಿದೆ. ನಿಮ್ಮ ಹೇಳಿಕೆ ಬಗ್ಗೆ ಒಮ್ಮೆ ಭಕ್ತರನ್ನೂ ಕೇಳಿ ನೋಡಿ ಎಂದು ಪತ್ರ ಬರೆದಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು