ರಾಧಿಕಾ ಪಂಡಿತ್ ಕೂದಲ ಮೇಲೆ ಯಶ್​ಗೆ ಇದೆ ವಿಶೇಷ ಪ್ರೀತಿ; ಇಲ್ಲಿದೆ ಸಾಕ್ಷಿ

ಯಶ್ ಮತ್ತು ರಾಧಿಕಾ ಪಂಡಿತ್ ಅವರ ಪ್ರೀತಿಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ, ಇತ್ತೀಚೆಗೆ ವೈರಲ್ ಆಗಿರುವ ಒಂದು ವಿಡಿಯೋ ಯಶ್ ಅವರ ರಾಧಿಕಾ ಪಂಡಿತ್ ಅವರ ಕೂದಲಿನ ಮೇಲಿನ ಅಪಾರ ಪ್ರೀತಿಯನ್ನು ತೋರಿಸಿದೆ. ರಾಧಿಕಾ ಅವರ ಕೂದಲು ಮುಂದಕ್ಕೆ ಬಂದಾಗ ಯಶ್ ಅವರು ಸರಿಪಡಿಸುವಂತೆ ಹೇಳುತ್ತಾರೆ ಎಂಬುದು ತಿಳಿದುಬಂದಿದೆ.

ರಾಧಿಕಾ ಪಂಡಿತ್ ಕೂದಲ ಮೇಲೆ ಯಶ್​ಗೆ ಇದೆ ವಿಶೇಷ ಪ್ರೀತಿ; ಇಲ್ಲಿದೆ ಸಾಕ್ಷಿ
ಯಶ್
Updated By: ರಾಜೇಶ್ ದುಗ್ಗುಮನೆ

Updated on: May 10, 2025 | 7:57 AM

ಯಶ್ ಹಾಗೂ ರಾಧಿಕಾ ಪಂಡಿತ್ (Radhika Pandit) ಅವರು ಪ್ರೀತಿಸಿ ಮದುವೆ ಆದವರು. ಆ ವಿಚಾರ ಅನೇಕರಿಗೆ ತಿಳಿದೇ ಇದೆ. ಅವರು ಈಗ ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ. ಯಶ್ ಅವರಿಗೆ ರಾಧಿಕಾ ಮೇಲೆ ಸಾಕಷ್ಟು ಪ್ರೀತಿ ಇದೆ. ಯಶ್ ಅವರಿಗೆ ರಾಧಿಕಾ ಪಂಡಿತ್ ಮೇಲೆ ಮಾತ್ರವಲ್ಲ ಅವರ ಕೂದಲ ಮೇಲೆ ವಿಶೇಷ ಪ್ರೀತಿ ಹೊಂದಿದ್ದಾರೆ ಎಂಬುದು ಸಾಬೀತಾಗುವಂತ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿ ಫ್ಯಾನ್ಸ್ ತುಂಬಾನೇ ಮೆಚ್ಚಿಕೊಂಡಿದ್ದಾರೆ.

ರಾಧಿಕಾ ಪಂಡಿತ್ ಹಾಗೂ ಯಶ್ ಅವರು ಕಿರುತೆರೆಯಲ್ಲಿ ಒಟ್ಟಾಗಿ ಕೆಲಸ ಮಾಡಿದವರು. ಆ ಬಳಿಕ ಹಿರಿತೆರೆಗೆ ಕಾಲಿಟ್ಟರು. ಅಲ್ಲಿಂದ ಯಶ್ ಅವರ ಬದುಕು ಬದಲಾಯಿತು. ಯಶ್ ಹಾಗೂ ರಾಧಿಕಾ ಒಟ್ಟಿಗೆ ಚಿತ್ರರಂಗದಲ್ಲಿ ಗುರುತಿಸಿಕೊಂಡವರು ಅನ್ನೋದು ವಿಶೇಷ. ಇವರು ಅನೇಕ ಸಿನಿಮಾಗಳನ್ನು ಒಟ್ಟಾಗಿ ಮಾಡಿದ್ದಾರೆ. ಹೀಗಾಗಿ, ಇವರ ಮಧ್ಯೆ ಪ್ರೀತಿ ಮೂಡಿತು.

ಇದನ್ನೂ ಓದಿ
ಪ್ರೀತಿಯಿಂದ ವಿಜ್ಜು ಎಂದು ಕರೆದು ಬರ್ತ್​ಡೇ ವಿಶ್ ತಿಳಿಸಿದ ರಶ್ಮಿಕಾ ಮಂದಣ್ಣ
‘ಪಾಕಿಗಳು ರಕ್ತಸಿಕ್ತ ಜಿರಳೆಗಳು, ಭೂಪಟದಿಂದಲೇ ಇಲ್ಲದಂತೆ ಮಾಡಬೇಕು’; ಕಂಗನಾ
ಪೊಲೀಸರಿಗೆ ಆವಾಜ್ ಹಾಕಿದ ‘ಜೈಲರ್’ ಖ್ಯಾತಿಯ ವಿನಾಯಕನ್; ಮತ್ತೆ ನಟನ ಕಿರಿಕ್
‘ನಿನ್ನ ದೇಹ ನೀನೇ ನಿರ್ಧರಿಸು’; ದೀಪಿಕಾಗೆ ನೇರವಾಗಿ ಹೇಳಿದ್ದ ರಣವೀರ್ ಸಿಂಗ್

ಇದನ್ನೂ ಓದಿ: ರಾಕಿಭಾಯ್ ಜೊತೆಗಿನ ಅಪರೂಪದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

ರಾಧಿಕಾ ಪಂಡಿತ್ ತಲೆ ಕೂದಲು ಮುಂಭಾಗಕ್ಕೆ ಬಂದರೆ ಅದನ್ನು ಹಿಂದಕ್ಕೆ ಹಾಕಿಕೊಳ್ಳುವಂತೆ ಯಶ್ ಹೇಳುತ್ತಾರಂತೆ. ಅದ್ವಿತಿ ಶೆಟ್ಟಿ ಅವರು ರಾಜೇಶ್ ಗೌಡ ಸಂದರ್ಶನದಲ್ಲಿ ಈ ವಿಚಾರವನ್ನು ಹೇಳಿಕೊಂಡಿದ್ದರು ಮತ್ತು ಈ ಕ್ಲಿಪ್​ನಲ್ಲಿ ಅದ್ವಿತಿ ಅವರು, ‘ರಾಧಿಕಾ ಅವರ ಕೂದಲು ಮುಂದಕ್ಕೆ ಬಂದಿದ್ದರೆ ಅದನ್ನು ಹೇಳೋಕೆ ಆಗುತ್ತಾ ಇರಲಿಲ್ಲ. ಆಗ ಅವರು ಕೈ ಸನ್ನೆ ಮಾಡಿ ತೋರಿಸುತ್ತಿದ್ದರು. ಆಗ ರಾಧಿಕಾ ಕೂದಲು ಸರಿ ಮಾಡಿಕೊಳ್ಳುತ್ತಿದ್ದರು’ ಎಂದು ವಿವರಿಸಿದ್ದರು. ‘ರಾಮಾಚಾರಿ’ ಸಿನಿಮಾದಲ್ಲಿ ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ ನಟಿಸಿದ್ದರು. ಹೀಗಾಗಿ, ಯಶ್ ಮತ್ತು ರಾಧಿಕಾ ಜೊತೆ ಒಳ್ಳೆಯ ಬಾಂಧವ್ಯ ಬೆಳೆದಿದೆ.

ರಾಧಿಕಾ ಪಂಡಿತ್ ಅವರು ಸದ್ಯ ನಟನೆಯಿಂದ ದೂರ ಇದ್ದಾರೆ. ಮಕ್ಕಳ ಆರೈಕೆಯಲ್ಲಿ ಅವರು ಬ್ಯುಸಿ ಇದ್ದಾರೆ. ಇದರ ಜೊತೆಗೆ ಕುಟುಂಬದ ಜೊತೆ ಅವರು ಸಮಯ ಕಳೆಯುತ್ತಾ ಇದ್ದಾರೆ. ಪತಿಯ ಜೊತೆ ಅವರು ಸದಾ ಇರುತ್ತಾರೆ. ಮುಂಬೈನಲ್ಲಿ ಯಶ್ ಜೊತೆ ರಾಧಿಕಾ ಅವರು ಅನೇಕ ಬಾರಿ ಕಾಣಿಸಿಕೊಂಡಿದ್ದೂ ಇದೆ ಅನ್ನೋದು ವಿಶೇಷ. ಯಶ್ ಅವರು ‘ಟಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.