ಮೊದಲ ಸಿನಿಮಾ ಚಿತ್ರೀಕರಣ ಮುಗಿವ ಮುನ್ನವೇ ಇನ್ನೆರಡು ಸಿನಿಮಾಗಳಿಗೆ ಸಹಿ ಹಾಕಿದ ಯುವ ರಾಜ್​ಕುಮಾರ್ಮೊದಲ ಸಿನಿಮಾ ಚಿತ್ರೀಕರಣ ಮುಗಿವ ಮುನ್ನವೇ ಇನ್ನೆರಡು ಸಿನಿಮಾಗಳಿಗೆ ಸಹಿ ಹಾಕಿದ ಯುವ ರಾಜ್​ಕುಮಾರ್

|

Updated on: Nov 12, 2023 | 6:21 PM

Yuva Rajkumar: ಯುವ ರಾಜ್​ಕುಮಾರ್ ನಟನೆಯ ಮೊದಲ ಸಿನಿಮಾದ ಚಿತ್ರೀಕರಣವೆ ಇನ್ನೂ ಮುಗಿದಿಲ್ಲ, ಈ ನಡುವೆ ಎರಡು ಹೊಸ ಸಿನಿಮಾಗಳ ಕತೆ ಕೇಳಿ ಒಪ್ಪಿಗೆಯನ್ನೂ ಸೂಚಿಸಿದ್ದಾರಂತೆ ಯುವ.

ಮೊದಲ ಸಿನಿಮಾ ಚಿತ್ರೀಕರಣ ಮುಗಿವ ಮುನ್ನವೇ ಇನ್ನೆರಡು ಸಿನಿಮಾಗಳಿಗೆ ಸಹಿ ಹಾಕಿದ ಯುವ ರಾಜ್​ಕುಮಾರ್ಮೊದಲ ಸಿನಿಮಾ ಚಿತ್ರೀಕರಣ ಮುಗಿವ ಮುನ್ನವೇ ಇನ್ನೆರಡು ಸಿನಿಮಾಗಳಿಗೆ ಸಹಿ ಹಾಕಿದ ಯುವ ರಾಜ್​ಕುಮಾರ್
ಯುವ ರಾಜ್​ಕುಮಾರ್
Follow us on

ರಾಘವೇಂದ್ರ ರಾಜ್​ಕುಮಾರ್ ಪುತ್ರ ಯುವ ರಾಜ್​ಕುಮಾರ್ (Yuva Rajkumar) ಚಂದನವನಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಈ ಹಿಂದೆ ಮೈಥಾಲಜಿ ಸಿನಿಮಾ ಒಂದರ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಡಲು ಯುವ ರಾಜ್​ಕುಮಾರ್ ಸಜ್ಜಾಗಿದ್ದರು. ಆದರೆ ಆ ನಂತರ ನಡೆದ ಕೆಲವು ಬೆಳವಣಿಗೆಗಳಿಂದಾಗಿ ‘ಯುವ’ ಸಿನಿಮಾ ಮೂಲಕ ಯುವ ರಾಜ್​ಕುಮಾರ್ ಚಿತ್ರರಂಗಕ್ಕೆ ಕಾಲಿಡುತ್ತಿದ್ದು, ‘ಯುವ’ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ‘ಯುವ’ ಸಿನಿಮಾದ ಚಿತ್ರೀಕರಣ ಇನ್ನೂ ಚಾಲ್ತಿಯಲ್ಲಿರಬೇಕಾದರೆ ಯುವ ರಾಜ್​ಕುಮಾರ್ ಇನ್ನೂ ಎರಡು ಸಿನಿಮಾಗಳ ಕತೆ ಕೇಳಿ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

‘ಯುವ’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ಯುವ ರಾಜ್​ಕುಮಾರ್ ಅವರನ್ನು ಅರಸಿ ಇನ್ನೆರಡು ಸಿನಿಮಾ ಅವಕಾಶಗಳು ಬಂದಿದ್ದು, ಕತೆ ಕೇಳಿರುವ ಯುವ ರಾಜ್​ಕುಮಾರ್, ಕತೆಯನ್ನು ಓಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ‘ಮಫ್ತಿ’ ಪ್ರಸ್ತುತ ಶಿವರಾಜ್ ಕುಮಾರ್ ಜೊತೆಗೆ ‘ಭೈರತಿ ರಣಗಲ್’ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿರುವ ನಿರ್ದೇಶಕ ನರ್ತನ್ ಅವರು ಯುವ ರಾಜ್​ಕುಮಾರ್​ಗಾಗಿ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಹೆಬ್ಬುಲಿ ಕೃಷ್ಣ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎರಡರಲ್ಲಿ ಒಂದು ಸಿನಿಮಾವನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರ ಪಿಆರ್​ಕೆ ಪ್ರೊಡಕ್ಷನ್ಸ್​ನವರು ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಬಂದ್ ದಿನವೂ ಸಿನಿಮಾ ಶೂಟಿಂಗ್? ಸ್ಪಷ್ಟನೆ ನೀಡಿದ ಯುವ ರಾಜ್​ಕುಮಾರ್

ಯುವ ರಾಜ್​ಕುಮಾರ್ ನಟನೆಯ ‘ಯುವ’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಮುಂದಿನ ವರ್ಷ ಮಾರ್ಚ್ ತಿಂಗಳ 28ನೇ ತಾರೀಖು ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ಈ ಹಿಂದೆ ಡಿಸೆಂಬರ್ 22ಕ್ಕೆ ಸಿನಿಮಾ ಬಿಡುಗಡೆ ಮಾಡುವ ನಿರ್ಧಾರ ಮಾಡಲಾಗಿತ್ತು, ಆದರೆ ‘ಸಲಾರ್’ ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಗಿ ‘ಸಲಾರ್’ ಅನ್ನು ಡಿಸೆಂಬರ್ 22ಕ್ಕೆ ಬಿಡುಗಡೆ ಮಾಡಲು ಹೊಂಬಾಳೆ ನಿರ್ಧರಿಸಿರುವ ಕಾರಣ, ‘ಯುವ’ ಸಿನಿಮಾದ ಬಿಡುಗಡೆ ಮುಂದೂಡಲಾಗಿದೆ.

ಯುವ ರಾಜ್​ಕುಮಾರ್, ಬೇರೊಂದು ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಪ್ರವೇಶಿಸಲು ಸಜ್ಜಾಗಿದ್ದರು. ಆದರೆ ಪುನೀತ್ ರಾಜ್​ಕುಮಾರ್ ಅಕಾಲ ಮೃತ್ಯುವಿನಿಂದಾಗಿ ಎಲ್ಲವೂ ಬದಲಾಯ್ತು. ಇದೀಗ ಅಪ್ಪುವಿನ ಸ್ಥಾನವನ್ನು ತುಂಬುವ ಪ್ರಯತ್ನವನ್ನು ಯುವ ರಾಜ್​ಕುಮಾರ್ ಮಾಡುತ್ತಿದ್ದಾರೆ. ಅವರು ಎಷ್ಟರ ಮಟ್ಟಿಗೆ ಸಫಲವಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಪ್ರಸ್ತುತ ನಟಿಸುತ್ತಿರುವ ‘ಯುವ’ ಸಿನಿಮಾವನ್ನು ಸಂತೋಷ್ ಆನಂದ್​ರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿ. ಸಿನಿಮಾವು ಕಾಲೇಜು ಯುವಕನ ಕತೆಯನ್ನು ಒಳಗೊಂಡಿದ್ದು, ಯುವ ರಾಜ್​ಕುಮಾರ್ ಅವರನ್ನು ಅದ್ಧೂರಿಯಾಗಿ, ಸ್ಟೈಲಿಷ್ ಆಗಿ ತೆರೆಗೆ ಪರಿಚಯಿಸುವ ಪ್ರಯತ್ನವನ್ನು ಸಂತೋಷ್ ಆನಂದ್​ರಾಮ್ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ