‘ಒಬ್ಬನೇ ಶಿವ, ಒಬ್ಬನೇ ಯುವ‘ ಅದ್ಧೂರಿ ಎಂಟ್ರಿ ಕೊಟ್ಟ ದೊಡ್ಮನೆ ಕುಡಿ

|

Updated on: Mar 03, 2024 | 8:23 AM

Yuva: ಯುವ ರಾಜ್​ಕುಮಾರ್ ನಟನೆಯ ಮೊದಲ ಸಿನಿಮಾ ‘ಯುವ’ದ ಮೊದಲ ಹಾಡು ಬಿಡುಗಡೆ ಆಗಿದೆ. ಹಾಡಿನ ಸಾಲುಗಳು ದೊಡ್ಮನೆ ಅಭಿಮಾನಿಗಳಿಗೆ ಭರವಸೆ ನೀಡುವಂತೆ ಇದೆ.

‘ಒಬ್ಬನೇ ಶಿವ, ಒಬ್ಬನೇ ಯುವ‘ ಅದ್ಧೂರಿ ಎಂಟ್ರಿ ಕೊಟ್ಟ ದೊಡ್ಮನೆ ಕುಡಿ
Follow us on

ದೊಡ್ಮನೆ ಕುಡಿ ಯುವ ರಾಜ್​ಕುಮಾರ್ (Yuva Rajkumar) ನಟಿಸಿರುವ ಮೊದಲ ಸಿನಿಮಾ ‘ಯುವ’ದ ಮೊದಲ ಹಾಡು ಬಿಡುಗಡೆ ಆಗಲಿದೆ. ಮಾರ್ಚ್ 02 ರಂದು ದೊಡ್ಮನೆಯ ತವರು ಚಾಮರಾಜನಗರದಲ್ಲಿ ನಡೆದ ಅದ್ಧೂರಿ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ‘ಯುವ’ ಸಿನಿಮಾದ ಮೊದಲ ಹಾಡು ಬಿಡುಗಡೆ ಮಾಡಲಾಯ್ತು. ‘ಒಬ್ಬನೇ ಶಿವ, ಒಬ್ಬನೇ ಯುವ’ ಎಂಬ ಇಂಟ್ರೊಡಕ್ಷನ್ ಹಾಡಿನಲ್ಲಿ ಯುವ ತಮ್ಮ ಲುಕ್ಸ್​ಗಳ ಜೊತೆಗೆ ತಮ್ಮ ನೃತ್ಯ ಪ್ರತಿಭೆಯ ಪ್ರದರ್ಶನವನ್ನೂ ಮಾಡಿದ್ದಾರೆ. ತಮ್ಮ ದೊಡ್ಡಪ್ಪ-ಚಿಕ್ಕಪ್ಪರಂತೆ ತಾವೂ ಸಹ ಒಳ್ಳೆಯ ನೃತ್ಯಗಾರ ಎಂಬುದನ್ನು ಸಾರಿ ಹೇಳಿದ್ದಾರೆ.

ಈಗ ಬಿಡುಗಡೆ ಆಗಿರುವ ‘ಯುವ’ ಸಿನಿಮಾದ ಹಾಡು ದೊಡ್ಮನೆಯ ಅಭಿಮಾನಿಗಳಿಗೆ ಭರವಸೆ ನೀಡುವ ರೀತಿಯಲ್ಲಿದೆ. ‘ಇನ್ಮೆಲೆ ಇವ ಜೊತೆ ನಿಲ್ಲುವ’, ‘ಪವರ್ರು ಕಟ್ ಆಗಲ್ಲ’ ಎಂಬಿತ್ಯಾದಿ ಸಾಲುಗಳು, ಅಪ್ಪುವನ್ನು ಕಳೆದುಕೊಂಡ ಅಭಿಮಾನಿಗಳಿಗೆ ಭರವಸೆ ನೀಡುವಂತೆ ತೋರುತ್ತಿವೆ. ಸದ್ಯಕ್ಕೆ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಆಗಿದ್ದು, ಅಲ್ಲಲ್ಲಿ ಯುವ ರಾಜ್​ಕುಮಾರ್ ಅವರ ಡ್ಯಾನ್ಸ್​ನ ಝಲಕ್​ಗಳನ್ನು ತೋರಿಸಲಾಗಿದೆ. ಯುವ ರಾಜ್​ಕುಮಾರ್ ಡ್ಯಾನ್ಸ್ ನೋಡಿದರೆ ಪಕ್ಕಾ ತಯಾರಿ ಮಾಡಿಕೊಂಡೆ ಯುವ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆಂಬುದು ಖಾತ್ರಿ ಆಗುತ್ತದೆ. ಅಪ್ಪುವಿಗೆ ಹೋಲಿಸಲಾಗದು ಆದರೂ ಅವರಂತೆ ಕುಣಿಯುವ ಪ್ರಯತ್ನವನ್ನಂತೂ ಯುವ ರಾಜ್​ಕುಮಾರ್ ಮಾಡಿದ್ದಾರೆ.

ಇದನ್ನೂ ಓದಿ:ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ: ಯುವಕನ ಜೀವ ಉಳಿಸಿದ ಅಮ್ಮನ ಫೋನ್​ ಕರೆ!

ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಯುವ ರಾಜ್​ಕುಮಾರ್, ‘ನಮ್ಮ ಕುಟುಂಬದ ಸಿನಿಮಾ ಪಯಣ ಪ್ರಾರಂಭವಾಗಿದ್ದೇ ಚಾಮರಾಜನಗರ, ಹಾಗಾಗಿ ನನ್ನ ಮೊದಲ ಸಿನಿಮಾಕ್ಕೆ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇನೆ. ನಾನು ಪರಿಶ್ರಮದಿಂದ ಈ ಸಿನಿಮಾ ಮಾಡಿದ್ದೇನೆ. ತಪ್ಪುಗಳು ಇರಬಹುದು, ಆದರೆ ಆ ತಪ್ಪುಗಳನ್ನು ಮುಂದೆ ತಿದ್ದಿಕೊಳ್ಳುತ್ತೇನೆ. ನಿಮ್ಮನ್ನು ಮನರಂಜಿಸುವ ಪ್ರಯತ್ನವನ್ನು ಮಾತ್ರ ಬಿಡುವುದಿಲ್ಲ.

‘ಯುವ’ ಸಿನಿಮಾವನ್ನು ಪುನೀತ್ ರಾಜ್​ಕುಮಾರ್ ಅವರ ಮೆಚ್ಚಿನ ನಿರ್ದೇಶಕ ಸಂತೋಷ್ ಆನಂದ್​ರಾಮ್ ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲಮ್ಸ್​ ನಿರ್ಮಾಣ ಮಾಡಿದೆ. ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಮಾರ್ಚ್ 29ಕ್ಕೆ ಬಿಡುಗಡೆ ಆಗಲಿದೆ. ‘ಯುವ’ ಯುವ ರಾಜ್​ಕುಮಾರ್ ನಟನೆಯ ಮೊದಲ ಸಿನಿಮಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ