ಸಹ ಸ್ಪರ್ಧಿಯ ಬಗ್ಗೆ ಸಂಜನಾ ಹೇಳಿಕೆ, ಒಡೆದು ಇಬ್ಭಾಗವಾದ ಬಿಗ್​​ಬಾಸ್ ಮನೆ

Sanjana Galrani: ಬಿಗ್​​ಬಾಸ್ ತೆಲುಗು ಮನೆಯಲ್ಲಿ 11 ವಾರದಿಂದಲೂ ಮನೆಯಲ್ಲಿರುವ ಸಂಜನಾ ಗಲ್ರಾನಿ ತಮ್ಮ ಭಿನ್ನ ರೀತಿಯ ಆಟದಿಂದ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ತಮಾಷೆಯ ಜೊತೆಗೆ ಜಗಳ ಮಾಡುತ್ತಾ, ಪರಸ್ಪರರ ಬಗ್ಗೆ ದೂರುಗಳನ್ನು ಹೇಳುತ್ತಾ, ಟಾಸ್ಕ್ ಆಡುತ್ತಾ ಬರುತ್ತಿದ್ದಾರೆ ಸಂಜನಾ. ಬಿಗ್​​ಬಾಸ್ ಮನೆಯಲ್ಲಿ ಫಿಲ್ಟರ್ ಇಲ್ಲದೆ ಮಾತನಾಡುವ ಸಂಜನಾ ಗಲ್ರಾನಿ, ಇದೀಗ ಸಹ ಸ್ಪರ್ಧಿಗಳ ಬಗ್ಗೆ ನೀಡಿರುವ ಒಂದು ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಸಹ ಸ್ಪರ್ಧಿಯ ಬಗ್ಗೆ ಸಂಜನಾ ಹೇಳಿಕೆ, ಒಡೆದು ಇಬ್ಭಾಗವಾದ ಬಿಗ್​​ಬಾಸ್ ಮನೆ
Sanjana Galrani

Updated on: Nov 25, 2025 | 12:46 PM

ಸಂಜನಾ ಗಲ್ರಾನಿ (Sanjana Galrani) ಬಿಗ್​​ಬಾಸ್ ತೆಲುಗು ಸೀಸನ್ 9ರಲ್ಲಿ ಸ್ಪರ್ಧಿಯಾಗಿದ್ದಾರೆ. ಆರಂಭದಲ್ಲಿ ಕೇವಲ 19ನೇ ದಿನಕ್ಕೆ ಸಹ ಸ್ಪರ್ಧಿಗಳಿಂದ ಎಲಿಮಿನೇಟ್ ಆಗಿದ್ದ ಸಂಜನಾ, ಕೇವಲ ಒಂದೇ ದಿನಕ್ಕೆ ವಾಪಸ್ಸಾದರು. ಕಳೆದ 11 ವಾರದಿಂದಲೂ ಮನೆಯಲ್ಲಿರುವ ಸಂಜನಾ ಗಲ್ರಾನಿ ತಮ್ಮ ಭಿನ್ನ ರೀತಿಯ ಆಟದಿಂದ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ತಮಾಷೆಯ ಜೊತೆಗೆ ಜಗಳ ಮಾಡುತ್ತಾ, ಪರಸ್ಪರರ ಬಗ್ಗೆ ದೂರುಗಳನ್ನು ಹೇಳುತ್ತಾ, ಟಾಸ್ಕ್ ಆಡುತ್ತಾ ಬರುತ್ತಿದ್ದಾರೆ ಸಂಜನಾ. ಬಿಗ್​​ಬಾಸ್ ಮನೆಯಲ್ಲಿ ಫಿಲ್ಟರ್ ಇಲ್ಲದೆ ಮಾತನಾಡುವ ಸಂಜನಾ ಗಲ್ರಾನಿ, ಇದೀಗ ಸಹ ಸ್ಪರ್ಧಿಗಳ ಬಗ್ಗೆ ನೀಡಿರುವ ಒಂದು ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ನಾಮಿನೇಷನ್ ವೇಳೆಯಲ್ಲಿ ಸಂಜನಾ, ಸಹ ಸ್ಪರ್ಧಿ ರೀತು ಹಾಗೂ ಡೀಮನ್ ಪವನ್ ಬಗ್ಗೆ ಡ್ಯಾಮೆಜಿಂಗ್ ಹೇಳಿಕೆ ನೀಡಿದ್ದಾರೆ. ರಿತು ಅನ್ನು ನಾಮಿನೇಟ್ ಮಾಡುವಾಗ, ‘ರೀತು ಮತ್ತು ಡಿಮನ್ ಪವನ್ ರಾತ್ರಿ ಹೊತ್ತು ಏನೇನು ಮಾಡುತ್ತಾರೆ ಎಂಬುದು ಗೊತ್ತಿದೆ. ಅವರು ಮಾಡುವುದನ್ನು ನನ್ನ ಕಣ್ಣಿನಿಂದ ನೋಡಲು ಸಹ ಆಗದು, ಅದನ್ನು ಬಾಯಿ ಬಿಟ್ಟು ಹೇಳಲು ಸಹ ಆಗದು, ಕೊಳಕಾಗಿ ಅವರು ವರ್ತಿಸುತ್ತಾರೆ’ ಎಂದೆಲ್ಲ ಸಂಜನಾ ಗಲ್ರಾನಿ ಹೇಳಿದ್ದಾರೆ.

ಇದರಿಂದ ರೀತು ಮತ್ತು ಡಿಮನ್ ಪವನ್ ಸಂಜನಾ ಮೇಲೆ ಉರಿದು ಬಿದ್ದಿದ್ದಾರೆ. ಕೆಲ ಮನೆ ಮಂದಿ ಸಹ ಸಂಜನಾರ ಹೇಳಿಕೆ ವಿರುದ್ಧ ಮಾತನಾಡಿದ್ದಾರೆ. ಸಂಜನಾ ಹೇಳಿಕೆ ಕುರಿತಾಗಿ ಮನೆಯಲ್ಲಿ ಜೋರಾದ ಜಗಳ ನಡೆದಿದೆ. ಕೆಲ ಮನೆ ಮಂದಿ, ಸಂಜನಾ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಸಂಜನಾಗೆ ಆತ್ಮೀಯರಾಗಿರುವವರು ಸಹ ಸಂಜನಾ ಬಳಿ, ಹೇಳಿಕೆ ಹಿಂಪಡೆಯುವಂತೆ ಕೇಳಿ ಕೊಂಡಿದ್ದಾರೆ. ಆದರೆ ಸಂಜನಾ, ತಾನು ಯಾವುದೇ ಕಾರಣಕ್ಕೂ ಹೇಳಿಕೆಯನ್ನು ಹಿಂಪಡೆಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಇದನ್ನೂ ಓದಿ:ಪ್ರೇಕ್ಷಕರಿಗೆ ಮಾತ್ರವಲ್ಲ ಸ್ಪರ್ಧಿಗಳ ಕುಟುಂಬದವರಿಗೂ ಸಂಜನಾ ಫೇವರೇಟ್

ಇದೀಗ ಈ ವಿವಾದ ವೀಕೆಂಡ್ ಎಪಿಸೋಡ್​​ನಲ್ಲೇ ಬಗೆಹರಿಯಲಿದೆ. ನಟ ಅಕ್ಕಿನೇನಿ ನಾಗಾರ್ಜುನ ಅವರು ವೀಕೆಂಡ್ ಎಪಿಸೋಡ್​ನಲ್ಲಿ ಸಂಜನಾ ಅವರು ರೀತು ಮತ್ತು ಪವನ್ ಬಗ್ಗೆ ನೀಡಿರುವ ಹೇಳಿಕೆಯ ಬಗ್ಗೆ ಚರ್ಚೆ ಮಾಡುವ ಸಾಧ್ಯತೆ ಇದೆ.

ಕನ್ನಡ ಬಿಗ್​​ಬಾಸ್ ಮೊದಲ ಸೀಸನ್ ನಡೆದಾಗ ಸಂಜನಾ ಗಲ್ರಾನಿ ಆ ಶೋನ ಸ್ಪರ್ಧಿಯಾಗಿ ಭಾಗಿ ಆಗಿದ್ದರು. ಅದಾದ ಬಳಿಕ ಈಗ 9ನೇ ಸೀಸನ್​​ನಲ್ಲಿ ತೆಲುಗು ಬಿಗ್​​ಬಾಸ್​​ನಲ್ಲಿ ಸ್ಪರ್ಧಿಯಾಗಿದ್ದಾರೆ. ಅಂದಹಾಗೆ ಸಂಜನಾ ಮಾತ್ರವೇ ಅಲ್ಲದೆ, ಮತ್ತೊಬ್ಬ ಕನ್ನಡತಿಯೂ ಬಿಗ್​​ಬಾಸ್ ಮನೆಯಲ್ಲಿದ್ದಾರೆ. ತನುಜಾ ಪುಟ್ಟಸ್ವಾಮಿ ಅವರು ತೆಲುಗು ಬಿಗ್​​ಬಾಸ್​​ನಲ್ಲಿದ್ದು, ಅವರು ಒಳ್ಳೆಯ ಪ್ರದರ್ಶನ ತೋರುತ್ತಿದ್ದಾರೆ. ಅವರು ಫಿನಾಲೆಗೆ ಹೋಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ