AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜಯ್ ದತ್ ಹೆಸರಿಗೆ 72 ಕೋಟಿ ರೂ. ಆಸ್ತಿ ಬರೆದಿದ್ದ ಅಭಿಮಾನಿ; ಮುಂದೇನಾಯ್ತು?  

ಸಂಜಯ್ ದತ್ ಅವರಿಗೆ ಓರ್ವ ಅಭಿಮಾನಿ 72 ಕೋಟಿ ರೂಪಾಯಿ ಆಸ್ತಿಯನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ, ಸಂಜಯ್ ದತ್ ಈ ಉಡುಗೊರೆಯನ್ನು ಸ್ವೀಕರಿಸಲು ನಿರಾಕರಿಸಿದ್ದರು. ಅವರ ಜನಪ್ರಿಯತೆಗೆ ಇದು ಸಾಕ್ಷಿಯಾಗಿದೆ. ಕೆಜಿಎಫ್ 2, ಲಿಯೋ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ 'ಕೆಡಿ' ಚಿತ್ರದಲ್ಲೂ ಅವರು ಅಭಿನಯಿಸಿದ್ದಾರೆ.

ಸಂಜಯ್ ದತ್ ಹೆಸರಿಗೆ 72 ಕೋಟಿ ರೂ. ಆಸ್ತಿ ಬರೆದಿದ್ದ ಅಭಿಮಾನಿ; ಮುಂದೇನಾಯ್ತು?  
ಸಂಜಯ್ ದತ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Feb 11, 2025 | 10:20 AM

Share

ಸಂಜಯ್ ದತ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ಅವರ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಿದೆ. ಅವರು 135ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್​​ನಲ್ಲಿ ಅವರು ದೊಡ್ಡ ಮಟ್ಟದ ಹೆಸರು ಮಾಡಿದ್ದು, ಇತ್ತೀಚೆಗೆ ದಕ್ಷಿಣದತ್ತ ಮುಖ ಮಾಡಿ ಗಮನ ಸೆಳೆದಿದ್ದಾರೆ. ಇವರ ಜೀವನದಲ್ಲಿ ನಡೆದ ಒಂದು ಅಚ್ಚರಿಯ ವಿಚಾರ ಹೇಳಲೇಬೇಕು. 2018ರಲ್ಲಿ ನಡೆದ ಒಂದು ಘಟನೆ ಅವರಿಗೆ ಸಾಕಷ್ಟು ಅಚ್ಚರಿ ತಂದಿತ್ತು. ಇದು ಅವರ ಬಗ್ಗೆ ಇರುವ ಕ್ರೇಜ್​ಗೆ ಸಾಕ್ಷಿ.

2018ರಲ್ಲಿ ಸಂಜಯ್ ದತ್ ಅವರಿಗೆ ಪೊಲೀಸ್ ಠಾಣೆಯಿಂದ ಕಾಲ್ ಬಂದಿತ್ತು. ನಿಶಾ ಪಾಟಿಲ್ ಎಂಬ ಅಭಿಮಾನಿ ಅವರ 72 ಕೋಟಿ ರೂಪಾಯಿ ಆಸ್ತಿಯನ್ನು ಇವರ ಹೆಸರಿಗೆ ಬರೆದಿದ್ದರು. ನಟನಿಗೆ ಎಲ್ಲಾ ಆಸ್ತಿ ನೇರವಾಗಿ ಹಸ್ತಾಂತರ ಆಗಬೇಕು ಎಂದು ಬರೆದಿದ್ದರು. ಇದು ಅನೇಕರಿಗೆ ಅಚ್ಚರಿ ತಂದಿತ್ತು.

ಆದರೆ, ಸಂಜಯ್ ದತ್ ಅವರನ್ನು ಇದನ್ನು ಸ್ವೀಕರಿಸಿಲ್ಲ. ಅವರ ಲೀಗಲ್ ಟೀಂ ಈ ಬಗ್ಗೆ ಸ್ಪಷ್ಟನೆ ನೀಡಿತ್ತು. ‘ನಿಶಾ ಪಾಟೀಲ್ ಬಗ್ಗೆ ತಿಳಿದಿಲ್ಲ. ನಾನು ಅವರ ಆಸ್ತಿಯನ್ನು ಪಡೆದುಕೊಂಡಿಲ್ಲ’ ಎಂದು ಸಂಜಯ್ ದತ್ ಹೇಳಿದ್ದಾಗಿ ಸ್ಪಷ್ಟನೆ ಸಿಕ್ಕಿತ್ತು. ಈ ವಿಚಾರ ಅನೇಕರಿಗೆ ಶಾಕಿಂಗ್ ಎನಿಸಿತ್ತು. ಇಷ್ಟು ಡೈಹಾರ್ಡ್​ ಫ್ಯಾನ್ಸ್ ಇದ್ದಾರಾ ಎಂಬ ವಿಚಾರ ತಿಳಿದು ಅನೇಕರು ಅಚ್ಚರಿಗೊಂಡಿದ್ದರು.

ಸಂಜಯ್ ದತ್ ಅವರು ‘ಕೆಜಿಎಫ್ 2’ ಚಿತ್ರದ ಮೂಲಕ ಕನ್ನಡಕ್ಕೆ ಬಂದರು. ಆ ಬಳಿಕ ದಕ್ಷಿಣ ಭಾರತದಲ್ಲಿ ಅವರಿಗೆ ಹಲವು ವಿಲನ್ ಪಾತ್ರಗಳು ಬಂದವು. ಯಶ್ ನಟನೆಯ ‘ಕೆಜಿಎಫ್ 2’ ಚಿತ್ರದಲ್ಲಿ ಅಧೀರನ ಪಾತ್ರ ಮಾಡಿ ಅವರು ಮಿಂಚಿದರು. ‘ಲಿಯೋ’ ಸಿನಿಮಾದಲ್ಲೂ ಅವರು ನಟಿಸಿದ್ದರು.

ಇದನ್ನೂ ಓದಿ: ‘ಚಿತ್ರಂಗಕ್ಕೆ ಬರಬೇಡಿ’; ಐಶ್ವರ್ಯಾಗೆ ಸೂಚನೆ ಕೂಟ್ಟಿದ್ದ ಸಂಜಯ್ ದತ್

ಈಗ ಅವರು ‘ಕೆಡಿ’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಧ್ರುವ ಸರ್ಜಾ ನಟನೆಯ ಈ ಚಿತ್ರಕ್ಕೆ ಪ್ರೇಮ್ ನಿರ್ದೇಶನ ಇದೆ. ಇದಲ್ಲದೆ, ‘ಭಾಗಿ 4’ ಚಿತ್ರದಲ್ಲೂ ಸಂಜಯ್ ದತ್ ನಟಿಸಿದ್ದು, ಸೆಪ್ಟೆಂಬರ್ 5ರಂದು ಈ ಚಿತ್ರ ತೆರೆಗೆ ಬರಲಿದೆ. ಈ ಚಿತ್ರಕ್ಕೆ ಕನ್ನಡದ ಎ. ಹರ್ಷ ನಿರ್ದೇಶನ ಇದೆ. ಟೈಗರ್ ಶ್ರಾಫ್ ಚಿತ್ರದ ಹೀರೋ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.