ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಅವರು ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಕೆಜಿಎಫ್ 2’ನಲ್ಲಿ ಅವರು ಮಾಡಿದ ಅಧೀರನ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಆ ಪಾತ್ರ ಅಲ್ಲಿಗೆ ಕೊನೆ ಆಗಿದೆ. ಈ ಸಿನಿಮಾದ ಬಳಿಕ ದಕ್ಷಿಣ ಭಾರತದಿಂದ ಅವರಿಗೆ ಹಲವು ಆಫರ್ಗಳು ಬರುತ್ತಿವೆ. ಅಷ್ಟೇ ಅಲ್ಲ, ಬಾಲಿವುಡ್ನಲ್ಲೂ ಅವರು ಬ್ಯುಸಿ ಇದ್ದಾರೆ. ಅವರು ಹಿಂದಿಯ ‘ವೆಲ್ಕಮ್ 3’ ಚಿತ್ರದ ಭಾಗವಾಗಬೇಕಿತ್ತು. ಆದರೆ, ಅವರು ಸಿನಿಮಾದಿಂದ ಹೊರ ನಡೆದಿದ್ದಾರೆ ಎಂದು ವರದಿ ಆಗಿದೆ.
ಈ ವರ್ಷದ ಆರಂಭದಲ್ಲಿ ಫಿರೋಜ್ ನಾಡಿಯಾದ್ವಾಲಾ ಹಾಗೂ ಅಕ್ಷಯ್ ಕುಮಾರ್ ಅವರು ‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾ ಘೋಷಣೆ ಮಾಡಿದರು. ‘ವೆಲ್ಕಮ್’ ಫ್ರಾಂಚೈಸ್ನ 3 ಸಿನಿಮಾ ಇದು. ಈ ಚಿತ್ರದ ಪಾತ್ರವರ್ಗವನ್ನು ಘೋಷಣೆ ಮಾಡಲಾಗಿದ್ದು, ದೊಡ್ಡ ದೊಡ್ಡ ಸ್ಟಾರ್ಗಳು ಇದ್ದಾರೆ. ಸಂಜಯ್ ದತ್ ಕೂಡ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಬೇಕಿತ್ತು. ಆದರೆ, ಈ ಚಿತ್ರದಿಂದ ಅವರು ಹೊರ ನಡೆದಿದ್ದಾರೆ.
‘ವೆಲ್ಕಮ್ 3’ ಚಿತ್ರದ ಶೂಟಿಂಗ್ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎನ್ನಲಾಗಿದೆ. ಯಾವುದೇ ಪ್ಲ್ಯಾನ್ ಇಲ್ಲದೆ ಶೂಟ್ ಮಾಡಲಾಗುತ್ತಿದೆ. ಇದು ಸಂಜಯ್ ದತ್ ಬೇಸರಕ್ಕೆ ಕಾರಣ ಆಗಿದೆ. ಇನ್ನು, ಸಿನಿಮಾದ ಸ್ಕ್ರಿಪ್ಟ್ನಲ್ಲಿ ಪದೇ ಪದೇ ಬದಲಾವಣೆ ಮಾಡಲಾಗುತ್ತಿದೆ. ಇದರಿಂದ ಸಂಜಯ್ ದತ್ ಅವರ ಉಳಿದ ಸಿನಿಮಾಗಳಿಗೆ ತೊಂದರೆ ಉಂಟಾಗುತ್ತಿದೆ. ಈ ಕಾರಣಕ್ಕೆ ಅವರು ಸಿನಿಮಾದಿಂದ ಹೊರ ನಡೆಯುವ ನಿರ್ಧಾರಕ್ಕೆ ಬಂದಿದ್ದಾರೆ.
‘ವೆಲ್ಕಮ್ 3’ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರು ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಅವರು ಅಕ್ಷಯ್ ಕುಮಾರ್ಗೆ ತಮಗಾಗುತ್ತಿರುವ ಸಮಸ್ಯೆಯನ್ನು ವಿವರಿಸಿದ್ದಾರೆ. ಇದನ್ನು ಒಪ್ಪಿಕೊಂಡಿರೋ ಅಕ್ಷಯ್ ಅವರು ಹೊರ ನಡೆಯಲು ಅವಕಾಶ ನೀಡಿದ್ದಾರೆ. ಸಂಜಯ್ ದತ್ ಅವರು ಈಗಾಗಲೇ 15 ದಿನಗಳ ಕಾಲ ಶೂಟ್ನಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಇದರಿಂದ ತಂಡಕ್ಕೆ ಮತ್ತಷ್ಟು ನಷ್ಟ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಖಳನಾಯಕ್ ಜೊತೆ ‘ಕಾಟೇರ’: ಸಂಜಯ್ ದತ್, ದರ್ಶನ್ ಭೇಟಿ
ಸಂಜಯ್ ದತ್ ಅವರ ಮನ ಒಲಿಸಲು ತಂಡ ಪ್ರಯತ್ನಿಸಬೇಕು. ಇಲ್ಲವಾದಲ್ಲಿ, ಬೇರೆ ಕಲಾವಿದನ ಹಾಕಿಕೊಂಡು ಮತ್ತೆ ರೀಶೂಟ್ ಮಾಡಬೇಕು. ಇದಕ್ಕೆ ಸಂಜಯ್ ದತ್ ಜೊತೆ ಇರುವ ಇತರ ಕಲಾವಿದರ ಕಾಲ್ಶೀಟ್ ಹೊಂದಾಣಿಕೆ ಮಾಡಬೇಕು. ಇದೆಲ್ಲವೂ ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.