ಮ್ಯಾಚ್​​ಗೂ ಮುನ್ನ ಏರ್​ಪೋರ್ಟ್​ನಲ್ಲಿ ಸಾರಾ​-ಶುಬ್​ಮನ್ ಭೇಟಿ; ಗಂಟೆಗಟ್ಟಲೆ ಹರಟೆ ಹೊಡೆದ ಜೋಡಿ

|

Updated on: Apr 19, 2023 | 9:27 AM

ಏಪ್ರಿಲ್ 16ರಂದು ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ಮಧ್ಯೆ ಅಹಮದಾಬಾದ್​ನಲ್ಲಿ ಪಂದ್ಯ ನಡೆದಿದೆ. ಈ ಪಂದ್ಯಕ್ಕೂ ಮುನ್ನ ಶುಬ್​ಮನ್ ಗಿಲ್ ಹಾಗೂ ಸಾರಾ ಅಲಿ ಖಾನ್ ಭೇಟಿ ಆಗಿದೆ ಎನ್ನಲಾಗುತ್ತಿದೆ.

ಮ್ಯಾಚ್​​ಗೂ ಮುನ್ನ ಏರ್​ಪೋರ್ಟ್​ನಲ್ಲಿ ಸಾರಾ​-ಶುಬ್​ಮನ್ ಭೇಟಿ; ಗಂಟೆಗಟ್ಟಲೆ ಹರಟೆ ಹೊಡೆದ ಜೋಡಿ
ಸಾರಾ-ಶುಬ್​ಮನ್
Follow us on

ಐಪಿಎಲ್​ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಶುಬ್​ಮನ್ ಗಿಲ್ದ್ಯ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಸಾರಾ ಹೆಸರು. ಈ ಮೊದಲು ಸಾರಾ ತೆಂಡೂಲ್ಕರ್ ಜೊತೆ ಶುಬ್​ಮನ್ (Shubman Gill) ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ, ಇದನ್ನು ಅವರು ಒಪ್ಪಿಲ್ಲ. ಇದಕ್ಕೆ ಬಲವಾದ ಸಾಕ್ಷಿ ಕೂಡ ಸಿಕ್ಕಿಲ್ಲ. ಆದರೆ, ಶುಬ್​ಮನ್​ ಗಿಲ್​ ಹಾಗೂ ಸಾರಾ ಅಲಿ ಖಾನ್ (Sara Ali Khan) ಡೇಟಿಂಗ್ ಮಾಡುತ್ತಿದ್ದಾರೆ ಎಂಬುದಕ್ಕೆ ಹಲವು ಸಾಕ್ಷಿಗಳು ಸಿಕ್ಕಿವೆ. ಇತ್ತೀಚೆಗೆ ಇಬ್ಬರೂ ಏರ್​ಪೋರ್ಟ್​ನಲ್ಲಿ ಭೇಟಿ ಆಗಿ ಹರಟೆ ಹೊಡೆದಿದ್ದಾರೆ ಎಂದು ವರದಿ ಆಗಿದೆ.

ಏಪ್ರಿಲ್ 16ರಂದು ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ಮಧ್ಯೆ ಅಹಮದಾಬಾದ್​ನಲ್ಲಿ ಪಂದ್ಯ ನಡೆದಿದೆ. ಈ ಪಂದ್ಯಕ್ಕೂ ಮುನ್ನ ಶುಬ್​ಮನ್ ಗಿಲ್ ಹಾಗೂ ಸಾರಾ ಅಲಿ ಖಾನ್ ಭೇಟಿ ಆಗಿದೆ ಎನ್ನಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಇಬ್ಬರೂ ಸೀಕ್ರೆಟ್ ಆಗಿ ಭೇಟಿ ಮಾಡಿದ್ದಾರೆ. ಗಂಟೆಗಟ್ಟಲೆ ಇಬ್ಬರೂ ಹರಟಿದ್ದಾರೆ. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಫೋಟೋನ ಯಾರೋ ಲೀಕ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರ ವೈರಲ್ ಆಗಿದೆ.

ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರು ಶುಬ್​ಮನ್ ಗಿಲ್​ ಅವರನ್ನು ಈ ವಿಚಾರದಲ್ಲಿ ಪ್ರಶ್ನೆ ಮಾಡಿದ್ದಾರೆ. ‘ಸಾರಾ ತೆಂಡೂಲ್ಕರ್ ಅವರನ್ನು ನೀವು ಏಕೆ ಬಿಟ್ಟಿರಿ’ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ, ಈ ರೀತಿಯ ವಿಚಾರಗಳಿಗೆ ಶುಬ್​ಮನ್ ಗಿಲ್ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ.

ಇದನ್ನೂ ಓದಿ: Shubman Gill: ಶುಭ್​ಮನ್ ಗಿಲ್ ಶತಕ ಸಿಡಿಸಿದಾಗ ವಿರಾಟ್ ಕೊಹ್ಲಿ ಇನ್​ಸ್ಟಾದಲ್ಲಿ ಶೇರ್ ಮಾಡಿದ ಸ್ಟೇಟಸ್ ಏನು ಗೊತ್ತೇ?

ಅಂದಹಾಗೆ, ಇತ್ತೀಚೆಗೆ ರಶ್ಮಿಕಾ ಮಂದಣ್ಣ ವಿಚಾರದಲ್ಲೂ ಶುಬ್​ಮನ್ ಗಿಲ್ ಹೆಸರು ಚರ್ಚೆ ಆಗಿತ್ತು. ‘ರಶ್ಮಿಕಾ ಮಂದಣ್ಣ ಮೇಲೆ ಕ್ರಶ್ ಇದೆ’ ಎಂದು ಶುಬ್​ಮನ್ ಹೇಳಿಕೊಂಡಿದ್ದಾರೆ ಎಂದು ವರದಿ ಆಗಿತ್ತು. ಆದರೆ, ಇದನ್ನು ಅವರು ಅಲ್ಲ ಗಳೆದಿದ್ದರು. ನಾನು ಆ ರೀತಿ ಹೇಳೆ ಇಲ್ಲ ಎಂದು ಶುಬ್​ಮನ್​ ಸ್ಪಷ್ಟನೆ ನೀಡಿದ್ದರು. ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎನ್ನುವ ಬಗ್ಗೆ ಅಭಿಮಾನಿಗಳಿಗೆ ಗೊಂದಲ ಮೂಡಿತ್ತು.

ಇದನ್ನೂ ಓದಿ: ‘ಕ್ರಿಕೆಟರ್​ಗಳ ಕ್ರಶ್​ ಆಗಿದ್ದೀರಿ’; ಶುಬ್​ಮನ್ ಗಿಲ್ ಬಗ್ಗೆ ಹೇಳಿದ್ದಕ್ಕೆ ರಶ್ಮಿಕಾ ಮಂದಣ್ಣ ರಿಯಾಕ್ಷನ್ ಹೇಗಿತ್ತು?

ಸೈಫ್ ಅಲಿ ಖಾನ್ ಮಗಳು ಎನ್ನುವ ಕಾರಣಕ್ಕೆ ಸಾರಾಗೆ ಸುಲಭವಾಗಿ ಚಿತ್ರರಂಗಕ್ಕೆ ಎಂಟ್ರಿ ಸಿಕ್ಕಿತು. ಆದರೆ, ದೊಡ್ಡ ಗೆಲುವು ಸಿಗಲಿಲ್ಲ. ಈವರೆಗೆ ಅವರು ಆರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಯಾವುದೂ ಗೆಲುವು ತಂದುಕೊಟ್ಟಿಲ್ಲ. ‘ಜರಾ ಹಟ್​ಕೆ ಜರಾ ಬಚ್​ ಕೆ’ ಸೇರಿ ನಾಲ್ಕು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ