ರಜನಿಕಾಂತ್​ ಆರೋಗ್ಯದ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತಪಡಿಸಿದ ಕಿರುತೆರೆ ನಟಿ

| Updated By: ರಾಜೇಶ್ ದುಗ್ಗುಮನೆ

Updated on: Jun 28, 2021 | 7:58 PM

ದೇಶದಲ್ಲಿ ಕೊವಿಡ್​ ಸಂಖ್ಯೆ ಹೆಚ್ಚಿರುವುದರಿಂದ ಭಾರತೀಯರಿಗೆ ನೇರವಾಗಿ ಅಮೆರಿಕಕ್ಕೆ ಎಂಟ್ರಿ ಇಲ್ಲ. ಆದಾಗ್ಯೂ ರಜನಿಕಾಂತ್​ಗೆ ಅಮೆರಿಕಕ್ಕೆ ತೆರಳೋಕೆ ಅವಕಾಶ ಸಿಕ್ಕಿದೆ. ಇದಕ್ಕೆ ರಜನಿ ಭಾರತ ಸರ್ಕಾರದಿಂದ ವಿಶೇಷ ಒಪ್ಪಿಗೆ ಪಡೆದಿದ್ದರು ಎನ್ನಲಾಗಿದೆ.

ರಜನಿಕಾಂತ್​ ಆರೋಗ್ಯದ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತಪಡಿಸಿದ ಕಿರುತೆರೆ ನಟಿ
ರಜನಿಕಾಂತ್​ ಆರೋಗ್ಯದ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತಪಡಿಸಿದ ಕಿರುತೆರೆ ನಟಿ
Follow us on

ನಟ ರಜನಿಕಾಂತ್​ ವೈದ್ಯಕೀಯ ಪರೀಕ್ಷೆಗಾಗಿ ಇತ್ತೀಚೆಗೆ ಏಕಾಏಕಿ ಅಮೆರಿಕಕ್ಕೆ ತೆರಳಿದ್ದರು. ಅವರು ವೈದ್ಯಕೀಯ ಪರೀಕ್ಷೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದ್ದವು. ಈಗ ರಜನಿಕಾಂತ್​ ಆರೋಗ್ಯದ ಬಗ್ಗೆ ನಟಿ ಕಸ್ತೂರಿ ಶಂಕರ್​ ಅವರು ಸಾಕಷ್ಟು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ರಜನಿ ಅವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ ಉತ್ತರ ನಿರೀಕ್ಷಿಸುತ್ತಿರುವುದಾಗಿ ಹೇಳಿದ್ದಾರೆ.

ದೇಶದಲ್ಲಿ ಕೊವಿಡ್​ ಸಂಖ್ಯೆ ಹೆಚ್ಚಿರುವುದರಿಂದ ಭಾರತೀಯರಿಗೆ ನೇರವಾಗಿ ಅಮೆರಿಕಕ್ಕೆ ಎಂಟ್ರಿ ಇಲ್ಲ. ಆದಾಗ್ಯೂ ರಜನಿಕಾಂತ್​ಗೆ ಅಮೆರಿಕಕ್ಕೆ ತೆರಳೋಕೆ ಅವಕಾಶ ಸಿಕ್ಕಿದೆ. ಇದಕ್ಕೆ ರಜನಿ ಭಾರತ ಸರ್ಕಾರದಿಂದ ವಿಶೇಷ ಒಪ್ಪಿಗೆ ಪಡೆದಿದ್ದರು ಎನ್ನಲಾಗಿದೆ. ಈ ಎಲ್ಲಾ ಕಾರಣಕ್ಕೆ ಕಸ್ತೂರಿ ಅನುಮಾನ ಹೊರ ಹಾಕಿದ್ದಾರೆ.

‘ಭಾರತದ ಪ್ರಜೆಗಳು ಅಮೆರಿಕಕ್ಕೆ ನೇರವಾಗಿ ಎಂಟ್ರಿ ಪಡೆಯುವುದರ ಮೇಲೆ ಅಲ್ಲಿನ ದೇಶ ನಿರ್ಬಂಧ ಹೇರಿದೆ. ಆದರೆ, ವೈದ್ಯಕೀಯ ಸಮಸ್ಯೆ ಆದರೆ ಮಾತ್ರ ವಿನಾಯತಿ ಇದೆ. ಈ ಸಂದರ್ಭದಲ್ಲಿ ರಜನಿಕಾಂತ್​ ಏಕೆ ಮತ್ತು ಹೇಗೆ ಅಮೆರಿಕಕ್ಕೆ ತೆರಳಿದರು. ಅವರು ರಾಜಕೀಯ ಪಕ್ಷ ಸ್ಥಾಪನೆಯಿಂದ ಹಿಂದೆ ಸರಿದಿದ್ದರು. ಈಗ ಅವರು ಅಮೆರಿಕಕ್ಕೆ ತೆರಳಿದ ವಿಚಾರ ಅನುಮಾನ ಹುಟ್ಟು ಹಾಕಿದೆ. ರಜನಿ ಸರ್​ ದಯವಿಟ್ಟು ಇದನ್ನು ಸ್ಪಷ್ಟಪಡಿಸಿ’ ಎಂದು ಕಸ್ತೂರಿ ಕೇಳಿದ್ದಾರೆ.

‘ಸಾಮಾನ್ಯ ವೈದ್ಯಕೀಯ ಪರೀಕ್ಷೆಗೆ ರಜನಿ ಅಮೆರಿಕಕ್ಕೆ ಹೋಗಿದ್ದಾರೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಭಾರತದಲ್ಲಿ ಸಿಗದೆ ಇರುವ ಈ ಚಿಕಿತ್ಸೆ ಅಮೆರಿಕದಲ್ಲಿ ಸಿಗುತ್ತಿದೆಯೇ?  ರಜನಿಕಾಂತ್​ ಅಮೆರಿಕಕ್ಕೆ ತೆರಳಿದ್ದು ಒಂದು ಮಿಸ್ಟರಿ ರೀತಿಯಲ್ಲಿ ಕಾಣಿಸುತ್ತಿದೆ. ರಜನಿ ತೆರಳಿರುವ ಮಾಯೊ ಕ್ಲೀನಿಕ್​  ಹೃದಯಕ್ಕೆ ಸಂಬಂಧಿಸಿದ ಆಸ್ಪತ್ರೆ. ನಾನು ಹೆಚ್ಚು ಆಲೋಚನೆ ಮಾಡಿದಷ್ಟು ಕೆಟ್ಟದಾಗಿ ಕಾಣುತ್ತಿದೆ ಎಂದು ಅವರು ಆತಂಕ ಹೊರ ಹಾಕಿದ್ದಾರೆ.

‘ಅಣ್ಣಾಥೆ’ ಸಿನಿಮಾದ ಚಿತ್ರೀಕರಣಕ್ಕಾಗಿ ರಜನಿಕಾಂತ್ ಏಪ್ರಿಲ್​​ನಲ್ಲಿ ಹೈದರಾಬಾದ್‌ಗೆ ತೆರಳಿದ್ದರು.  ಒಂದು ತಿಂಗಳು ನಿರಂತರವಾಗಿ ಅವರು ಸಿನಿಮಾ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದರು. ಸದ್ಯ ಈ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಪ್ರಗತಿಯಲ್ಲಿವೆ.

ಇದನ್ನೂ ಓದಿ:ಕೊವಿಡ್​ ಇಳಿಮುಖ ಆಗುತ್ತಿದ್ದಂತೆಯೇ ವಿದೇಶಕ್ಕೆ ಹಾರಿದ ರಜನಿಕಾಂತ್​; ಕಾರಣ ಏನು?

Published On - 6:32 pm, Mon, 28 June 21