
ಮಾಧುರಿ ದೀಕ್ಷಿತ್ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಡ್ಯಾನ್ಸ್ ಮೂಲಕ ಎಲ್ಲರ ಮನ ಗೆದ್ದಿದ್ದ ಅವರು ನಂತರ ನಟನೆಯಲ್ಲೂ ಕಮಾಲ್ ಮಾಡಿದರು. ಮಾಧುರಿ ದೀಕ್ಷಿತ್ ಅಂದಕ್ಕೆ, ನೃತ್ಯಕ್ಕೆ ಫಿದಾ ಆಗದವರೇ ಇಲ್ಲ. ವಿಶೇಷ ಎಂದರೆ ಮಾಧುರಿ ದೀಕ್ಷಿತ್ ವಿವಾಹ ಆದಾಗ ಅನೇಕರಿಗೆ ಹಾರ್ಟ್ಬ್ರೇಕ್ ಆಗಿತ್ತು. ಜನ ಸಾಮಾನ್ಯರು ಮಾತ್ರವಲ್ಲ ಸೆಲೆಬ್ರಿಟಿಗಳಿಗೂ ಈ ಅನುಭವ ಆಯಿತು. ಈ ಬಗ್ಗೆ ಅನೇಕರು ಈ ಮೊದಲು ಹೇಳಿಕೊಂಡಿದ್ದರು.
ಮಾಧುರಿ ದೀಕ್ಷಿತ್ ಅವರು 1999ರಲ್ಲಿ ಶ್ರೀರಾಮ್ ಮಾಧವ್ ನೆನೆ ಅವರನ್ನು ವಿವಾಹ ಆದರು. ಅವರು ಅಮೆರಿಕದಲ್ಲಿ ಸರ್ಜನ್ ಆಗಿದ್ದಾರೆ. ಮಾಧುರಿ ಹಾಗೂ ಶ್ರೀರಾಮ್ ವಿವಾಹ ವಿಚಾರ ಅನೇಕರಿಗೆ ಶಾಕಿಂಗ್ ಎನಿಸಿತು. ಚಿತ್ರರಂಗದವರನ್ನೇ ಅವರು ಮದುವೆ ಆಗಬಹುದು ಎಂದು ಎಲ್ಲರೂ ಊಹಿಸಿದ್ದರು. ಆದರೆ, ಹಾಗಾಗಿಲ್ಲ. ಅವರು ಅಚ್ಚರಿ ಎಂಬಂತೆ ವೈದ್ಯನನ್ನು ವಿವಾಹ ಆದರು.
ರಣಬೀರ್ ಕಪೂರ್ ಅವರಿಗೆ ಮಾಧುರಿ ದೀಕ್ಷಿತ್ ಮೇಲೆ ಕ್ರಶ್ ಇತ್ತು. ‘ಮಾಧುರಿ ದೀಕ್ಷಿತ್ ಮದುವೆ ಆದಾಗ ನನಗೆ ಹಾರ್ಟ್ಬ್ರೇಕ್ ಆಯಿತು’ ಎಂದು ರಣಬೀರ್ ಕಪೂರ್ ಹೇಳಿದ್ದರು. ‘ಮಾಧುರಿ ದೀಕ್ಷಿತ್ ಮದುವೆ ಆದಾಗ ನನಗೂ ಹಾರ್ಟ್ ಬ್ರೇಕ್ ಆಯಿತು’ ಎಂದು ಅನಿಲ್ ಕಪೂರ್ ಹೇಳಿದ್ದರು. ಜಾಕಿ ಶ್ರಾಫ್ ಕೂಡ ಅವರು ಈ ಮಾತನ್ನು ಹೇಳಿದ್ದರು.
ಮಾಧುರಿ ದೀಕ್ಷಿತ್ ಅವರು ವಿವಾಹ ಆಗಿ ಸುಖ ಸಂಸಾರ ನಡೆಸುತ್ತಾ ಇದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು. ಇವರ ಪ್ರೀತಿಗೆ ಯಾರ ಕಣ್ಣೂ ಬೀಳದಿರಲಿ ಎಂದು ಅನೇಕರು ಕೋರಿಕೊಂಡಿದ್ದಾರೆ. ಈ ದಂಪತಿಗೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ ಇರುತ್ತದೆ.
ಇದನ್ನೂ ಓದಿ: ಮಾಧುರಿ ದೀಕ್ಷಿತ್ಗೆ ಇತ್ತು ‘ಲತ್ತೆ’ ಪಟ್ಟ; ಇದು ತೊಳೆದು ಹೋಗಿದ್ದು ಹೇಗೆ?
1984ರಲ್ಲಿ ಬಂದ ‘ಅಬೋದ್’ ಚಿತ್ರದ ಮೂಲಕ ಮಾಧುರಿ ದೀಕ್ಷಿತ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ‘ಅವಾರಾ ಬಾಪ್’ ಮೊದಲಾದ ಚಿತ್ರಗಳಲ್ಲಿ ನಟಿಸಿದರು. ಆಗಿನ ಕಾಲದಲ್ಲಿ ಶ್ರೀದೇವಿ ಅವರಿಗೆ ಸರಿಸಾಟಿ ಆಗಿ ಅವರು ನಿಂತರು. ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ‘ಭೂಲ್ ಭುಲಯ್ಯ 3’ ಸಿನಿಮಾದಲ್ಲಿ ಅವರು ನಟಿಸಿದ್ದರು. ಆ ಬಳಿಕ ಅವರ ಯಾವುದೇ ಹೊಸ ಸಿನಿಮಾ ಘೋಷಣೆ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.