
‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ದೇಶದಾದ್ಯಂತ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಖುದ್ದು ಪ್ರಧಾನಿ ಮೋದಿ ಅವರು ಸಹ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಆ ಸಿನಿಮಾಕ್ಕೆ ಬಾಲಿವುಡ್ನಿಂದ ಬೆಂಬಲ ವ್ಯಕ್ತವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಬಾಲಿವುಡ್ನ ಕೆಲ ಸೆಲೆಬ್ರಿಟಿಗಳು ಬಹಿರಂಗವಾಗಿ ಸಿನಿಮಾದ ಸಬ್ಜೆಕ್ಟ್ಗೆ ವಿರೋಧವನ್ನೂ ವ್ಯಕ್ತಪಡಿಸಿದ್ದರು. ಆ ಸಮಯದಲ್ಲಿ ‘ಧುರಂಧರ್’ ಸಿನಿಮಾದ ಬಗ್ಗೆ ಖಾನ್ಗಳ ಮೌನವನ್ನು ಪ್ರಶ್ನೆ ಮಾಡಲಾಗಿತ್ತು. ಆ ಬಳಿಕ ಆಮಿರ್ ಖಾನ್ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅಧಿಕೃತವಾಗಿ ಮಾತನಾಡಿರಲಿಲ್ಲ. ಇದೀಗ ಕೊನೆಗೂ ಶಾರುಖ್ ಖಾನ್ ‘ಧುರಂಧರ್’ ಬಗ್ಗೆ ಮಾತನಾಡಿದ್ದಾರೆ.
ಗಣೇಶ ಚತುರ್ಥಿಯಂದು ತಮ್ಮ ಅಭಿಮಾನಿಗಳಿಗೆ ಶುಭಕೋರಲು ಶಾರುಖ್ ಖಾನ್ ಟ್ವಿಟರ್ನಲ್ಲಿ ‘#AskSRK’ ಹೆಸರಿನಲ್ಲಿ ಅಭಿಮಾನಿಗಳೊಟ್ಟಿಗೆ ಸಂವಾದ ನಡೆಸಿದ್ದರು. ಅಭಿಮಾನಿಗಳು ತರಹೇವಾರಿ ಪ್ರಶ್ನೆಗಳನ್ನು ಶಾರುಖ್ ಖಾನ್ ಅವರಿಗೆ ಕೇಳಿದರು. ‘ಕಿಂಗ್’ ಚಿತ್ರದ ಬಗ್ಗೆ ಸೇರಿದಂತೆ ಇನ್ನೂ ಹಲವು ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಜೊತೆಗೆ ‘ಧುರಂಧರ್’ ಸಿನಿಮಾದ ಬಗ್ಗೆಯೂ ಪ್ರಶ್ನೆ ಶಾರುಖ್ ಖಾನ್ ಅವರಿಗೆ ಎದುರಾಯ್ತು.
ಅಭಿಮಾನಿಯೊಬ್ಬ, ‘ನೀವು ಧುರಂಧರ್ ನೋಡಿದ್ದೀರಾ? ಎಂದು ಕೇಳಿದರು, ಪ್ರಶ್ನೆಗೆ ಚುಟುಕಾಗಿ ಉತ್ತರಿಸಿದ ಶಾರುಖ್ ಖಾನ್, ‘ಎರಡೂ ಭಾಗಗಳು ತುಂಬಾ ಇಷ್ಟವಾಯಿತು. ಇಡೀ ತಂಡದಿಂದ ಅದ್ಭುತವಾದ ಕೆಲಸ’ ಎಂದರು. ಶಾರುಖ್ ಖಾನ್, ಇದೇ ಮೊದಲ ಬಾರಿಗೆ ಅಧಿಕೃತವಾಗಿ ‘ಧುರಂಧರ್’ ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:‘ಟಾಕ್ಸಿಕ್’ ವೀಕ್ಷಿಸಿ ಯಶ್ ತಾಕತ್ತು ಮೆಚ್ಚಿಕೊಂಡ ‘ಧುರಂಧರ್’ ನಿರ್ದೇಶಕ ಆದಿತ್ಯ ಧರ್
ದೆಹಲಿ ಸಿನಿಮೋತ್ಸವದಲ್ಲಿ ಮಾತನಾಡಿದ್ದ ಆಮಿರ್ ಖಾನ್ ಸಹ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿನಿಮಾ ತಂಡದ ಶ್ರಮವನ್ನು ಕೊಂಡಾಡಿದ್ದರು. ಆದರೆ ಸಲ್ಮಾನ್ ಖಾನ್ ಈ ವರೆಗೆ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ಬಗ್ಗೆ ಅಧಿಕೃತವಾಗಿ ಮೆಚ್ಚುಗೆಯಾಗಲಿ ಅಥವಾ ವಿಮರ್ಶೆಯನ್ನಾಗಲಿ ಮಾಡಿಲ್ಲ.
ಆದಿತ್ಯ ಧರ್ ನಿರ್ದೇಶನ ಮಾಡಿರುವ ‘ಧುರಂಧರ್’ ಸಿನಿಮಾನಲ್ಲಿ ರಣ್ವೀರ್ ಸಿಂಗ್ ಗೂಢಚಾರನ ಪಾತ್ರದಲ್ಲಿ ನಟಿಸಿದ್ದಾರೆ. ಈ ವರೆಗೆ ಭಾರತದಲ್ಲಿ ಬಂದಿರುವ ಎಲ್ಲ ಗೂಢಚಾರ ಸಿನಿಮಾಗಳ ಪೈಜೆ ಹೆಚ್ಚು ನೈಜತೆಯನ್ನು ಒಳಗೊಂಡಿರುವ ‘ಧುರಂಧರ್’ ಸಿನಿಮಾ ಸಹಜವಾಗಿಯೇ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದೆ. ಕಲೆಕ್ಷನ್ನಲ್ಲಿ ಹಲವು ದಾಖಲೆಗಳನ್ನು ಈ ಸಿನಿಮಾ ಮಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ