ಬಿಗ್​ ಬಾಸ್​ ಮನೆಯಲ್ಲಿ ಮೂರು ವಾರ ಮುಚ್ಚಿಟ್ಟಿದ್ದ ವಿಶೇಷ ಪ್ರತಿಭೆಯನ್ನು ಹೊರ ಹಾಕಿದ ಶಮಂತ್​

ಖೈದಿಯ ಬಟ್ಟೆ ಧರಿಸಿ ಶಮಂತ್​ ಜೈಲು ಸೇರಿದ್ದರು. ಅಷ್ಟೇ ಅಲ್ಲ  ಜೈಲಿನಿಂದ ಹೊರಬರುತ್ತಿದ್ದಂತೆಯೇ ತಮ್ಮ ಆಟದ ವೈಖರಿಯನ್ನು ಬದಲಾಯಿಸಿಕೊಳ್ಳುವುದಾಗಿ ಅವರು ಪ್ರತಿಜ್ಞೆ ಮಾಡಿದ್ದರು.

ಬಿಗ್​ ಬಾಸ್​ ಮನೆಯಲ್ಲಿ ಮೂರು ವಾರ ಮುಚ್ಚಿಟ್ಟಿದ್ದ ವಿಶೇಷ ಪ್ರತಿಭೆಯನ್ನು ಹೊರ ಹಾಕಿದ ಶಮಂತ್​
ನಿಧಿ-ಶಮಂತ್​
Edited By:

Updated on: Mar 19, 2021 | 3:22 PM

ಬಿಗ್ ಬಾಸ್​ ಮನೆಯಲ್ಲಿ ಸದ್ಯ 15 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ ವಾರ ಕೂಡ ಓರ್ವ ಸ್ಪರ್ಧಿ ಮನೆಯಿಂದ ಹೊರಗೆ ಹೋಗಲಿದ್ದಾರೆ. ಅವರು ಯಾರು ಎನ್ನುವುದು ವೀಕೆಂಡ್​ನಲ್ಲಿ ಗೊತ್ತಾಗಲಿದೆ. ಸದ್ಯ, ಬಿಗ್​ ಬಾಸ್​ ಮನೆಯಲ್ಲಿರುವ ಸ್ಪರ್ಧಿಗಳು ತಮ್ಮಲ್ಲಿರುವ ವಿಶೇಷ ಪ್ರತಿಭೆಯನ್ನು ಹೊರ ಹಾಕುತ್ತಿದ್ದಾರೆ. ಈ ಬಾರಿ ಶಮಂತ್​ ಸರದಿ. ಬಿಗ್​ ಬಾಸ್​ ಮನೆಯಲ್ಲಿ ಕಳೆದ ವಾರ ಜೈಲಿಗೆ ಹೋಗಿ ಬಂದಿದ್ದ ಅವರು, ಈ ವಾರ ಫುಲ್​ ಆ್ಯಕ್ಟಿವ್​ ಆಗಿದ್ದಾರೆ.

ಎರಡು ವಾರಗಳ ಕ್ಯಾಪ್ಟನ್ಸಿಯಲ್ಲಿ ಶಮಂತ್​ ಪರ್ಫಾಮೆನ್ಸ್​ ಚೆನ್ನಾಗಿರಲಿಲ್ಲ. ಮನೆಯ ಸದಸ್ಯರಿಂದಲೂ ಇದೇ ಅಭಿಪ್ರಾಯ ಬಂದಿತ್ತು. ಹೀಗಾಗಿ, ಬಿಗ್​ ಬಾಸ್​ ನಿಯಮದಂತೆ ವಾರದಲ್ಲಿ ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿಯು ಜೈಲುವಾಸ ಅನುಭವಿಸಬೇಕು. ಅದರ ಪ್ರಕಾರ ಶಮಂತ್​ರನ್ನು ಜೈಲಿಗೆ ಕಳುಹಿಸಲಾಗಿತ್ತು. ಖೈದಿಯ ಬಟ್ಟೆ ಧರಿಸಿ ಶಮಂತ್​ ಜೈಲು ಸೇರಿದ್ದರು. ಅಷ್ಟೇ ಅಲ್ಲ  ಜೈಲಿನಿಂದ ಹೊರಬರುತ್ತಿದ್ದಂತೆಯೇ ತಮ್ಮ ಆಟದ ವೈಖರಿಯನ್ನು ಬದಲಾಯಿಸಿಕೊಳ್ಳುವುದಾಗಿ ಅವರು ಪ್ರತಿಜ್ಞೆ ಮಾಡಿದ್ದರು.

ಶಮಂತ್​ ಪ್ರತಿಜ್ಞೆ ಮಾಡಿದಂತೆ ಜೈಲು ವಾಸ ಮುಗಿಸಿ ಬಂದ ನಂತರ ಶಮಂತ್​ ಫುಲ್​​ ಆ್ಯಕ್ಟಿವ್​ ಆಗಿದ್ದಾರೆ. ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕುತ್ತಿದ್ದಾರೆ. ಶಬ್ದ ಮೊಳಗುವ ಜಾಗದಲ್ಲಿ ಮೈಕ್​ ಬಳಕೆ ಮಾಡಿದರೆ ಚಿತ್ರ ವಿಚಿತ್ರವಾಗಿ ಕೇಳುತ್ತದೆ. ಶಮಂತ್​ ಅವರು ತಮ್ಮ ಬಾಯಿಂದಲೇ ಆ ರೀತಿಯ ಭಿನ್ನ ಧ್ವನಿಯನ್ನು ಹೊರ ಹಾಕಿದ್ದಾರೆ. ಇದು ಧ್ವನಿ ವರ್ಧಕದಲ್ಲಿ ಪ್ರತಿಧ್ವನಿಸಿದ ರೀತಿಯಲ್ಲಿ ಕೇಳಿದೆ.

ಇದನ್ನೂ ಓದಿ: Bigg Boss Kannada: ಕಾಯಿಲೆ ಬಿದ್ದ ತಂದೆ ಜೊತೆ 2 ವರ್ಷದಿಂದ ಮಾತನಾಡಿಲ್ಲ ಬಿಗ್​ ಬಾಸ್​ ರಾಜೀವ್​! ಕಾರಣ ಏನು?

ನಮ್ಮಣ್ಣನ ಕೂದಲ ಸುದ್ದಿಗೆ ಬಂದ್ರೆ ಸರಿ ಇರಲ್ಲ; ಬಿಗ್​ ಬಾಸ್​ಗೆ ಮಂಜು ಎಚ್ಚರಿಕೆ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us