‘ಕೆಡಿ’ ರಿಲೀಸ್ ಆದರೂ ಕಡಿಮೆ ಆಗಿಲ್ಲ ಶಿಲ್ಪಾ ಶೆಟ್ಟಿ ಕೊರಗು

ಶಿಲ್ಪಾ ಶೆಟ್ಟಿ ಈಗ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದು, ತಮ್ಮ ಇಬ್ಬರು ಮಕ್ಕಳಾದ ಸಮಿಶಾ ಮತ್ತು ವಿಯಾನ್ ಇದುವರೆಗೂ ತಮ್ಮನ್ನು ಚಿತ್ರಮಂದಿರದ ದೊಡ್ಡ ಪರದೆಯ ಮೇಲೆ ನೋಡಿಲ್ಲ ಎಂಬುದು ಅವರ ಬೇಸರ. ಹಾಗಾಗಿ, ಮಕ್ಕಳಿಗಾಗಿಯೇ ಥಿಯೇಟರ್ ರಿಲೀಸ್ ಆಗುವ ಸಿನಿಮಾಗಳಲ್ಲಿ ನಟಿಸಲು ಅವರು ನಿರ್ಧರಿಸಿದ್ದಾರೆ. ತಮ್ಮ ಈ ಹಂಬಲವನ್ನು ನಟಿ ವ್ಯಕ್ತಪಡಿಸಿದ್ದು, ದೊಡ್ಡ ಪರದೆಯ ಮೇಲೆ ಕಮಾಲ್ ಮಾಡಲು ಸಜ್ಜಾಗಿದ್ದಾರೆ.

‘ಕೆಡಿ’ ರಿಲೀಸ್ ಆದರೂ ಕಡಿಮೆ ಆಗಿಲ್ಲ ಶಿಲ್ಪಾ ಶೆಟ್ಟಿ ಕೊರಗು
ಶಿಲ್ಪಾ

Updated on: Jun 08, 2026 | 1:09 PM

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಈಗ ಅವರು ಬಾಲಿವುಡ್ ಬಿಗ್ ಸ್ಕ್ರೀನ್ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಈ ಬಾರಿ ಅವರು ಥಿಯೇಟರ್ ರಿಲೀಸ್ ಸಿನಿಮಾಗಳನ್ನೇ ಮಾಡಲು ಬಯಸುತ್ತಿರುವುದರ ಹಿಂದೆ ಒಂದು ವಿಶೇಷವಾದ ಮತ್ತು ವೈಯಕ್ತಿಕವಾದ ಕಾರಣವಿದೆ. ತಮ್ಮ ಇಬ್ಬರು ಮಕ್ಕಳಾದ ಸಮಿಶಾ ಮತ್ತು ವಿಯಾನ್ ಇದುವರೆಗೂ ತಮ್ಮನ್ನು ಚಿತ್ರಮಂದಿರದ ದೊಡ್ಡ ಪರದೆಯ ಮೇಲೆ ನೋಡಿಲ್ಲ ಎಂದು ಶಿಲ್ಪಾ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ‘ನನ್ನ ಮಕ್ಕಳು ನನ್ನನ್ನು ಎಂದಿಗೂ ಚಿತ್ರಮಂದಿರದ ದೊಡ್ಡ ಪರದೆಯ ಮೇಲೆ ನೋಡಿಯೇ ಇಲ್ಲ. ಹಾಗಾಗಿ ಅವರಿಗಾಗಿಯಾದರೂ ನಾನು ಥಿಯೇಟರ್‌ನಲ್ಲಿ ಬಿಡುಗಡೆಯಾಗುವ ಸಿನಿಮಾವೊಂದನ್ನು ಮಾಡಬೇಕು ಎಂಬ ಹಂಬಲವಿದೆ’ ಎಂದು ತಮ್ಮ ಇಚ್ಛೆಯನ್ನು ಹಂಚಿಕೊಂಡಿದ್ದಾರೆ.

2023ರಲ್ಲಿ ತೆರೆಕಂಡ ಶಿಲ್ಪಾ ಅವರ ‘ಸುಖಿ’ ಸಿನಿಮಾವನ್ನು ಅವರ ಮಗ ವಿಯಾನ್ ನೋಡಿದ್ದನಾದರೂ, ಅದು ಪ್ರಿವ್ಯೂ ಥಿಯೇಟರ್‌ನಲ್ಲಿ ಮಾತ್ರ ಸಾಧ್ಯವಾಗಿತ್ತು. ಸುಖಿ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ನಮಗೆ ಸೂಕ್ತ ಪ್ರಮಾಣದಲ್ಲಿ ಚಿತ್ರಮಂದಿರಗಳು ಸಿಗಲಿಲ್ಲ. ಅದು ಆ ಚಿತ್ರಕ್ಕೆ ಮಾಡಿದ ಅನ್ಯಾಯವಾಗಿತ್ತು. ಆದಾಗ್ಯೂ ಒಟಿಟಿ ಒಂದು ಅದ್ಭುತ ವೇದಿಕೆಯಾಗಿದೆ. ಪ್ರೇಕ್ಷಕರು ತಮಗೆ ಬಿಡುವು ಸಿಕ್ಕಾಗ ಸಿನಿಮಾಗಳನ್ನು ಹುಡುಕಿ ನೋಡಲು ಇದು ಸಹಾಯ ಮಾಡುತ್ತದೆ. ಆದರೆ ಈಗ ನನ್ನ ಗುರಿ ಏನಿದ್ದರೂ ಥಿಯೇಟರ್ ರಿಲೀಸ್ ಚಿತ್ರಗಳ ಮೇಲಿದೆ’ ಎಂದು ಅವರು ಹೇಳಿದ್ದಾರೆ.

ಸಿನಿಮಾಗಳನ್ನು ಆಯ್ಕೆ ಮಾಡುವಾಗ ತಮಗೆ ಪಾತ್ರದ ಉದ್ದ ಅಥವಾ ಲೆಂತ್ ಎಂದಿಗೂ ಮಾನದಂಡವಾಗಿರಲಿಲ್ಲ ಎಂದು ಶಿಲ್ಪಾ ಸ್ಪಷ್ಟಪಡಿಸಿದ್ದಾರೆ. ‘ನಾನು ಈ ಹಿಂದೆ ಹಲವು ಬಿಗ್ ಬಜೆಟ್ ಸಿನಿಮಾಗಳನ್ನು ತಿರಸ್ಕರಿಸಿದ್ದೇನೆ. ಅದಕ್ಕೆ ನನ್ನದೇ ಆದ ಸಮರ್ಥನೀಯ ಕಾರಣಗಳಿದ್ದವು. ಆ ನಿರ್ಧಾರಗಳು ನನಗೂ ಮತ್ತು ಚಿತ್ರದ ನಿರ್ಮಾಪಕರಿಗಷ್ಟೇ ಗೊತ್ತು. ಆ ಬಗ್ಗೆ ನಾನು ಎಲ್ಲೂ ಮಾತನಾಡುವುದಿಲ್ಲ ಮತ್ತು ನನ್ನ ಯಾವುದೇ ನಿರ್ಧಾರಗಳ ಬಗ್ಗೆ ನನಗೆ ಎಂದಿಗೂ ಪಶ್ಚಾತ್ತಾಪವಿಲ್ಲ’ ಎಂದು ಅವರು ಖಡಕ್ ಆಗಿ ನುಡಿದಿದ್ದಾರೆ.

ಇದನ್ನೂ ಓದಿ: 50ನೇ ವಯಸ್ಸಿನಲ್ಲೂ ಶಿಲ್ಪಾ ಶೆಟ್ಟಿ ಫಿಟ್ನೆಸ್; ಇದರ ಹಿಂದಿದೆ ಶಿಸ್ತು, ನಿರಂತರ ಪರಿಶ್ರಮ

ಶಿಲ್ಪಾ ಶೆಟ್ಟಿ ಅವರು ಇತ್ತೀಚೆಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ, ಬಹುನಿರೀಕ್ಷಿತ ಕನ್ನಡದ ‘ಕೆಡಿ: ದಿ ಡೆವಿಲ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಥಿಯೇಟರ್​ನಲ್ಲೇ ರಿಲೀಸ್ ಆಗಿತ್ತು. ಆದರೆ, ಸಿನಿಮಾ ಕನ್ನಡದಲ್ಲಿ ಇದ್ದಿದ್ದರಿಂದ ಅವರ ಮಕ್ಕಳಿಗೆ ನೋಡೋಕೆ ಸಾಧ್ಯವಾಗಿಲ್ಲ. ಹೀಗಾಗಿ, ಶಿಲ್ಪಾ ಶೆಟ್ಟಿ ಅವರ ಕೊರಗು ಕಡಿಮೆ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us