‘ಕ್ಯಾಪ್ಟನ್ ಮಿಲ್ಲರ್’ ಹಾಡು ಬಿಡುಗಡೆ: ಈರಪ್ಪನ ನೆನೆಯುತ ಧನುಶ್ ಜೊತೆ ಶಿವಣ್ಣನ ಕುಣಿತ
Shiva Rajkumar: ಶಿವರಾಜ್ ಕುಮಾರ್ ನಟಿಸಿರುವ ಎರಡನೇ ತಮಿಳು ಸಿನಿಮಾ ‘ಕ್ಯಾಪ್ಟನ್ ಮಿಲ್ಲರ್’ನ ಹಾಡೊಂದು ಬಿಡುಗಡೆ ಆಗಿದೆ.
‘ಜೈಲರ್’ (Jailer) ಸಿನಿಮಾದ ಬಳಿಕ ತಮಿಳುನಾಡಿನಲ್ಲಿ ಶಿವರಾಜ್ ಕುಮಾರ್ ಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ‘ಜೈಲರ್’ ಸಣ್ಣ ಪಾತ್ರದಿಂದಲೇ ದೊಡ್ಡ ಪರಿಣಾಮವನ್ನು ಶಿವರಾಜ್ ಕುಮಾರ್ ಬೀರಿದ್ದಾರೆ. ಇದೀಗ ಅವರ ನಟನೆಯ ಎರಡನೇ ತಮಿಳು ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಸಿನಿಮಾದ ಹಾಡೊಂದು ಇದೀಗ ಬಿಡುಗಡೆ ಆಗಿದೆ.
ನಟ ಧನುಶ್ ಜೊತೆಗೆ ಶಿವರಾಜ್ ಕುಮಾರ್ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ನಟಿಸಿದ್ದಾರೆ. ‘ಜೈಲರ್’ ಸಿನಿಮಾದಲ್ಲಿ ಶಿವಣ್ಣನದ್ದು ಅತಿಥಿ ಪಾತ್ರವಷ್ಟೆ ಆಗಿತ್ತು, ಆದರೆ ‘ಕ್ಯಾಪ್ಟನ್ ಮಿಲ್ಲರ್’ನಲ್ಲಿ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಈ ಸಿನಿಮಾದ ಹಾಡೊಂದು ಬಿಡುಗಡೆ ಆಗಿದ್ದು, ಹಾಡಿನಲ್ಲಿ ನಟ ಧನುಶ್ ಜೊತೆಗೆ ಶಿವಣ್ಣ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ.
ಇಲ್ಲಿದೆ ನೋಡಿ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಹಾಡು
ರೆಟ್ರೋ ಶೈಲಿಯ ಹಾಡು ಇದಾಗಿದ್ದು, ಬುಡಕಟ್ಟು ಹಾಡಿಯೊಂದರಲ್ಲಿ ಧನುಶ್ ಹಾಗೂ ಶಿವಣ್ಣ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಹಾಡು ಸಹ ಜನಪದದ ಫೀಲ್ ನೀಡುವಂತಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡು ಬಿಡುಗಡೆ ಆಗಿದ್ದು, ಕನ್ನಡದಲ್ಲಿ ‘ಕರಘಟ್ಟದ ಈರಪ್ಪನೂ’ ಹೆಸರಿನಲ್ಲಿ ಹಾಡು ಪ್ರಾರಂಭವಾಗುತ್ತದೆ. ಶಿವಣ್ಣ ರೆಟ್ರೋ ಶೈಲಿಯ ಶರ್ಟ್-ಪ್ಯಾಂಟ್ ಧರಿಸಿದ್ದರೆ, ಧನುಶ್ ಹಳ್ಳಿ ಹೈದನ ರೀತಿ ಉಡುಪು ಧರಿಸಿ ಸಖತ್ ಆಗಿ ಕುಣಿದಿದ್ದಾರೆ.
ಇದನ್ನೂ ಓದಿ:ಶಿವರಾಜ್ ಕುಮಾರ್ ನಟನೆಯ ತಮಿಳು ಸಿನಿಮಾದ ಬಿಡುಗಡೆ ದಿನಾಂಕ ನಿಗದಿ
ಸಿನಿಮಾದ ವಿಡಿಯೋ ಹಾಡು ಇದೀಗ ಬಿಡುಗಡೆ ಆಗಿದ್ದು ಬಿಹೈಂಡ್ ದಿ ಕ್ಯಾಮೆರಾ ದೃಶ್ಯಗಳನ್ನು ಸಹ ವಿಡಿಯೋನಲ್ಲಿ ಸೇರಿಸಲಾಗಿದೆ. ಧನುಶ್ ಹಾಗೂ ಶಿವಣ್ಣ ಆಪ್ತವಾಗಿ ಮಾತನಾಡುತ್ತಾ, ಹರಟೆ ಹೊಡೆಯುತ್ತಾ ಕೆಲಸ ಮಾಡುತ್ತಿರುವ ದೃಶ್ಯಗಳು ವಿಡಿಯೋನಲ್ಲಿವೆ.
‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾದ ಪೋಸ್ಟರ್ ಹಾಗೂ ಟೀಸರ್ ಈಗಾಗಲೇ ಬಿಡುಗಡೆ ಆಗಿದೆ. ಸಿನಿಮಾವನ್ನು ಅರುಣ್ ಮಟ್ಟೇಶ್ವರನ್ ನಿರ್ದೇಶನ ಮಾಡಿದ್ದು, ನಿರ್ಮಾಣ ಮಾಡುತ್ತಿರುವುದು ಸತ್ಯಜ್ಯೋತಿ ಫಿಲಮ್ಸ್, ಈ ಸಿನಿಮಾದಲ್ಲಿ ಶಿವಣ್ಣ-ಧನುಷ್ ಜೊತೆಗೆ ಪ್ರಿಯಾಂಕಾ ಅರುಲ್, ಸಂದೀಪ್ ಕಿಶನ್, ನಿವೇದಿತಾ ಸತೀಶ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ಜನವರಿ 12ಕ್ಕೆ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:26 pm, Wed, 3 January 24