AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾಜ್ ಕುಮಾರ್ ನಟನೆಯ ತಮಿಳು ಸಿನಿಮಾದ ಬಿಡುಗಡೆ ದಿನಾಂಕ ನಿಗದಿ

Shiva Rajkumar: ಶಿವರಾಜ್ ಕುಮಾರ್ ನಟನೆಯ ತಮಿಳು ಸಿನಿಮಾ ‘ಕ್ಯಾಪ್ಟನ್ ಮಿಲ್ಲರ್’ ಬಿಡುಗಡೆ ದಿನಾಂಕ ಘೋಷಣೆ ಆಗಿದೆ.

ಶಿವರಾಜ್ ಕುಮಾರ್ ನಟನೆಯ ತಮಿಳು ಸಿನಿಮಾದ ಬಿಡುಗಡೆ ದಿನಾಂಕ ನಿಗದಿ
ಮಂಜುನಾಥ ಸಿ.
|

Updated on: Dec 30, 2023 | 4:00 PM

Share

ಶಿವರಾಜ್ ಕುಮಾರ್ (Shiva Rajkumar)​ ಸ್ಯಾಂಡಲ್​ವುಡ್​ನ ಸ್ಟಾರ್ ನಟ ಎಂಬುದು ತಿಳಿದಿರುವ ವಿಚಾರ. ಇತ್ತೀಚೆಗೆ ತಮಿಳು ಚಿತ್ರರಂಗದಲ್ಲಿಯೂ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ ಶಿವಣ್ಣ. ತಮಿಳು ಸಿನಿಮಾ ‘ಜೈಲರ್​’ನಲ್ಲಿ ಅವರ ಪಾತ್ರಕ್ಕೆ ದೊಡ್ಡ ಮಟ್ಟದ ಪ್ರಶಂಸೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ಅವರು ಬಂದು ಹೋಗುವುದು ಕಡಿಮೆ ಸಮಯವಾದರೂ ಅದ್ಭುತವಾದ ಪರಿಣಾಮವನ್ನು ಶಿವಣ್ಣ ಉಂಟು ಮಾಡಿದ್ದಾರೆ. ಇದೇ ಕಾರಣಕ್ಕೆ ತಮಿಳುನಾಡಿನಲ್ಲಿಯೂ ಸಹ ಸಿನಿಮಾ ಪ್ರೇಕ್ಷಕರು ಶಿವಣ್ಣನ ಸಿನಿಮಾಕ್ಕಾಗಿ ಕಾಯುವಂತಾಗಿದೆ. ಇದೀಗ ಶಿವಣ್ಣ ಮತ್ತೊಂದು ತಮಿಳು ಸಿನಿಮಾದಲ್ಲಿ ನಟಿಸಿದ್ದು ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ.

ರಜನೀಕಾಂತ್ ಜೊತೆ ‘ಜೈಲರ್’ ಸಿನಿಮಾದಲ್ಲಿ ನಟಿಸಿದ್ದ ಶಿವರಾಜ್ ಕುಮಾರ್, ಆ ಬಳಿಕ ರಜನೀಕಾಂತ್​ರ ಅಳಿಯ ಧನುಶ್​ ಜೊತೆ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ನಟಿಸಿದರು. ಇದೀಗ ಆ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ‘ಜೈಲರ್’ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶಿವಣ್ಣ, ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ನಾಯಕ ಧನುಶ್​ರಷ್ಟೆ ಸಮಾನವಾದ ಪಾತ್ರ ಶಿವಣ್ಣನಿಗಿದೆ.

ಇದನ್ನೂ ಓದಿ:Dhanush Birthday: ಧನುಷ್ ಬರ್ತ್​ಡೇಗೆ ‘ಕ್ಯಾಪ್ಟನ್ ಮಿಲ್ಲರ್​’ ಟೀಸರ್ ರಿಲೀಸ್; ಮಾಸ್ ಆಗಿ ಎಂಟ್ರಿ ಕೊಟ್ಟ ಶಿವಣ್ಣ

‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾ ಜನವರಿ 12ಕ್ಕೆ ತೆರೆಗೆ ಬರಲಿದೆ. ಸಂಕ್ರಾಂತಿ ಪ್ರಯುಕ್ತ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ‘ಕ್ಯಾಪ್ಟನ್ ಮಿಲ್ಲರ್’ ಅಲ್ಲದೆ ಇನ್ನೂ ಕೆಲವು ಸಿನಿಮಾಗಳು ಸಂಕ್ರಾಂತಿಗೆ ಬಿಡುಗಡೆ ಆಗುತ್ತಿದ್ದು, ಅದರ ನಡುವೆ ಧನುಷ್-ಶಿವಣ್ಣನ ಸಿನಿಮಾ ಗೆಲ್ಲಲಿದೆಯೇ ಎಂಬುದು ಕುತೂಹಲ ಮೂಡಿಸಿದೆ. ತೆಲುಗಿನಲ್ಲಂತೂ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ, ‘ಹನುಮಾನ್’, ವೆಂಕಟೇಶ್ ನಟನೆಯ ಹೊಸ ಸಿನಿಮಾ ಇನ್ನೂ ಕೆಲವು ಸಿನಿಮಾಗಳು ಸಂಕ್ರಾಂತಿಗೆ ಬಿಡುಗಡೆ ಆಗಲಿದೆ.

ಸಿನಿಮಾವು ಪಕ್ಕಾ ಆಕ್ಷನ್ ಕತೆಯನ್ನು ಹೊಂದಿದ್ದು ಸಿನಿಮಾದಲ್ಲಿ ಶಿವಣ್ಣ ಎರಡು ಷೇಡ್​ನ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಟೀಸರ್, ಪೋಸ್ಟರ್​ಗಳನ್ನು ಗಮನಿಸಿದರೆ ಭಾರಿ ಪ್ರಮಾಣದ ಆಕ್ಷನ್ ದೃಶ್ಯಗಳು ಸಿನಿಮಾದಲ್ಲಿ ಇವೆ ಎಂಬುದು ಸುಲಭದ ಊಹೆ. ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾವನ್ನು ಅರುಣ್ ಮತ್ತೇಸ್ವರನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ಪ್ರಿಯಾಂಕಾ ಮೋಹನ್, ನಿವೇದಿತಾ ನಟಿಸಿದ್ದಾರೆ. ಸಿನಿಮಾದಲ್ಲಿ ಧನುಶ್, ಶಿವರಾಜ್ ಕುಮಾರ್ ಜೊತೆಗೆ ವಿನಾಯಗನ್, ನಾಸರ್, ‘ಆರ್​ಆರ್​ಆರ್’ ಖ್ಯಾತಿಯ ವಿದೇಶಿ ನಟ ಎಡ್ವರ್ಡ್ ಸೊನ್ನೆನ್​ಬಿಕ್, ನಾಸರ್ ಇನ್ನೂ ಕೆಲವರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ