Dhanush Birthday: ಧನುಷ್ ಬರ್ತ್​ಡೇಗೆ ‘ಕ್ಯಾಪ್ಟನ್ ಮಿಲ್ಲರ್​’ ಟೀಸರ್ ರಿಲೀಸ್; ಮಾಸ್ ಆಗಿ ಎಂಟ್ರಿ ಕೊಟ್ಟ ಶಿವಣ್ಣ

Captain Miller Teaser: ಧನುಷ್ ಜನ್ಮದಿನಕ್ಕೆ ಟೀಸರ್​ನ ಗಿಫ್ಟ್ ಆಗಿ ನೀಡಲಾಗಿದೆ. ಬ್ರಿಟಿಷರ ವಿರುದ್ಧ ಹೋರಾಡುವ ವ್ಯಕ್ತಿಯಾಗಿ ಧನುಷ್ ಕಾಣಿಸಿಕೊಂಡಿದ್ದಾರೆ. ಶಿವಣ್ಣ ಅವರು ಕುದುರೆ ಏರಿ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

Dhanush Birthday: ಧನುಷ್ ಬರ್ತ್​ಡೇಗೆ ‘ಕ್ಯಾಪ್ಟನ್ ಮಿಲ್ಲರ್​’ ಟೀಸರ್ ರಿಲೀಸ್; ಮಾಸ್ ಆಗಿ ಎಂಟ್ರಿ ಕೊಟ್ಟ ಶಿವಣ್ಣ
ಧನುಷ್-ಶಿವಣ್ಣ
Follow us
ರಾಜೇಶ್ ದುಗ್ಗುಮನೆ
|

Updated on:Jul 28, 2023 | 8:56 AM

ನಟ ಧನುಷ್ (Dhanush) ಅವರಿಗೆ ಇಂದು (ಜುಲೈ 28) ಬರ್ತ್​ಡೇ ಸಂಭ್ರಮ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಫ್ಯಾನ್ಸ್ ಹಬ್ಬ ಮಾಡುತ್ತಿದ್ದಾರೆ. ಬರ್ತ್​ಡೇ ಪ್ರಯುಕ್ತ ಅವರ ಮುಂದಿನ ಸಿನಿಮಾ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದ (Captain Miller) ಟೀಸರ್ ರಿಲೀಸ್ ಆಗಿದೆ. ಸ್ವಾತಂತ್ರ್ಯ ಪೂರ್ವದ ಕಥೆಯನ್ನು ಈ ಚಿತ್ರ ಹೊಂದಿದ್ದು, ಟೀಸರ್ ಸಾಕಷ್ಟು ರೋಚಕವಾಗಿ ಮೂಡಿ ಬಂದಿದೆ. ಶಿವರಾಜ್​ಕುಮಾರ್ ನಟಿಸಿದ್ದಾರೆ ಎಂಬ ಕಾರಣಕ್ಕೆ ಕನ್ನಡಿಗರಿಗೂ ಈ ಸಿನಿಮಾ ಮೇಲೆ ನಿರೀಕ್ಷೆ ಸೃಷ್ಟಿ ಆಗಿದೆ. ಡಿಸೆಂಬರ್ 15ರಂದು ಚಿತ್ರ ವಿಶ್ವಾದ್ಯಂತ ತೆರೆಗೆ ಬರಲಿದೆ.

‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾ ಘೋಷಣೆ ಆದಾಗಿನಿಂದಲೂ ಸಾಕಷ್ಟು ನಿರೀಕ್ಷೆ ಸೃಷ್ಟಿ ಮಾಡಿತ್ತು. ಇತ್ತೀಚೆಗೆ ಚಿತ್ರ ತಂಡ ಹೊಸ ಪೋಸ್ಟರ್ ಹಂಚಿಕೊಂಡು ಗಮನ ಸೆಳೆದಿತ್ತು. ಈಗ ಧನುಷ್ ಜನ್ಮದಿನಕ್ಕೆ ಟೀಸರ್​ನ ಗಿಫ್ಟ್ ಆಗಿ ನೀಡಲಾಗಿದೆ. ಟೀಸರ್ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡುವ ವ್ಯಕ್ತಿಯಾಗಿ ಧನುಷ್ ಕಾಣಿಸಿಕೊಂಡಿದ್ದಾರೆ. ಶಿವಣ್ಣ ಅವರು ಕುದುರೆ ಏರಿ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅರುಣ್ ಮಾದೇಶ್ವರನ್ ಅವರು ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಜಿವಿ ಪ್ರಕಾಶ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಧನುಷ್, ಶಿವರಾಜ್​ಕುಮಾರ್ ಜೊತೆ ಸಂದೀಪ್ ಕಿಶನ್, ಪ್ರಿಯಾಂಕಾ ಮೋಹನ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಥಿಯೇಟರ್​ನಲ್ಲಿ ಶಿವಣ್ಣನ ಎಂಟ್ರಿಗೆ ಸಿಳ್ಳೆ ಬೀಳೋದು ಪಕ್ಕಾ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಧನುಷ್​ ಹುಟ್ಟುಹಬ್ಬಕ್ಕೆ ಬಿಡುಗಡೆಯಾದ, ಶಿವಣ್ಣ ಅಬ್ಬರಿಸಿರುವ ಕ್ಯಾಪ್ಟನ್​ ಮಿಲ್ಲರ್​ ಟೀಸರ್​ ಇಲ್ಲಿದೆ

ಇದನ್ನೂ ಓದಿ:  ಇನ್​ಸ್ಟಾಗ್ರಾಮ್​ ಲೈವ್​ನಲ್ಲಿ ‘D50’ ಲುಕ್​​ ರಿವೀಲ್ ಮಾಡಿದ ನಟ ಧನುಷ್

ಕ್ರಿಸ್​ಮಸ್ ಸಂದರ್ಭದಲ್ಲಿ ದೊಡ್ಡ ದೊಡ್ಡ ಸಿನಿಮಾಗಳ ಎಂಟ್ರಿ ಆಗುತ್ತದೆ. ‘ಕ್ಯಾಪ್ಟನ್ ಮಿಲ್ಲರ್’ ಕೂಡ ಅದೇ ತಿಂಗಳನ್ನು ಆಯ್ಕೆ ಮಾಡಿಕೊಂಡಿದೆ. ಈ ವರ್ಷ ಡಿಸೆಂಬರ್ 15ರಂದು ವಿಶ್ವಾದ್ಯಂತ ಸಿನಿಮಾ ರಿಲೀಸ್ ಮಾಡುವುದಾಗಿ ಟೀಸರ್​ನಲ್ಲಿ ತಿಳಿಸಲಾಗಿದೆ. ಶಿವರಾಜ್​ಕುಮಾರ್ ಅವರ ಪಾತ್ರದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಫ್ಯಾನ್ಸ್ ಕಾತುರರಾಗಿದ್ದಾರೆ. ಶಿವರಾಜ್​ಕುಮಾರ್ ಅವರು ತಮಿಳಿನ ಮತ್ತೊಂದು ಸಿನಿಮಾ ‘ಜೈಲರ್’ನಲ್ಲಿ ನಟಿಸಿದ್ದಾರೆ. ಈ ಸಿನಿಮಾ ಆಗಸ್ಟ್ 10ರಂದು ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:12 am, Fri, 28 July 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ