Shreya Ghoshal | ತಾಯಿ ಆಗಲಿದ್ದಾರೆ ಶ್ರೇಯಾ ಘೋಶಾಲ್: ವೈರಲ್ ಆಯ್ತು ಗಾಯಕಿಯ ಹೊಸ ಫೋಟೋ
ಹಿನ್ನೆಲೆ ಗಾಯಕಿ ಶ್ರೇಯಾ , ಶಿಲಾದಿತ್ಯ ಅವರನ್ನು 2015 ಫೆಬ್ರವರಿ 5ರಂದು ಮದುವೆ ಆಗಿದ್ದರು. ಈ ಮೂಲಕ ಹಲವು ವರ್ಷಗಳ ಪ್ರೀತಿಗೆ ಹೊಸ ಅರ್ಥ ನೀಡಿದ್ದರು.
ಮಧುರ ಕಂಠದ ಮೂಲಕ ಗಮನ ಸೆಳೆದಿರುವ ಗಾಯಕಿ ಶ್ರೇಯಾ ಘೋಶಾಲ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಅವರು ಶೀಘ್ರವೇ ತಾಯಿ ಆಗುವ ಬಗ್ಗೆ ಬರೆದುಕೊಂಡಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಯಾಗಿದ್ದು, ಅಭಿನಂದನೆ ತಿಳಿಸಿದ್ದಾರೆ. ಶ್ರೇಯಾ ಘೋಶಾಲ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದನ್ನು ಹಾಕಿಕೊಂಡಿದ್ದಾರೆ. ಶ್ರೇಯಾ ಹೊಟ್ಟೆ ಉಬ್ಬಿರುವುದು ಫೋಟೋದಲ್ಲಿ ಕಾಣುತ್ತದೆ. ಇದಕ್ಕೆ ಅಡಿಬರಹ ನೀಡಿರುವ ಅವರು, ಬೇಬಿ ಶ್ರೇಯಾದಿತ್ಯ ಶೀಘ್ರವೇ ಬರಲಿದ್ದಾರೆ. ಈ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಶಿಲಾದಿತ್ಯ ಮತ್ತು ನಾನು ಸಂತೋಷಗೊಂಡಿದ್ದೇವೆ. ನಮ್ಮ ಜೀವನದಲ್ಲಿ ಈ ಹೊಸ ಅಧ್ಯಾಯಕ್ಕೆ ನಾವು ಸಿದ್ಧರಾಗಿದ್ದೇವೆ. ಇದಕ್ಕೆ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಗಳು ಬೇಕು ಎಂದು ಬರೆದುಕೊಂಡಿದ್ದಾರೆ. ಈ ಫೋಟೋವನ್ನು ನೋಡಿದ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶ್ರೇಯಾಗೆ ಅಭಿನಂದನೆಗಳ ಸುರಿಮಳೆಗೈದಿದ್ದಾರೆ.
Baby #Shreyaditya is on its way!@shiladitya and me are thrilled to share this news with you all. Need all your love and blessings as we prepare ourselves for this new chapter in our lives. pic.twitter.com/oZ6c6fnR6Z
— Shreya Ghoshal (@shreyaghoshal) March 4, 2021
View this post on Instagram
ಹಿನ್ನೆಲೆ ಗಾಯಕಿ ಶ್ರೇಯಾ , ಶಿಲಾದಿತ್ಯ ಅವರನ್ನು 2015 ಫೆಬ್ರವರಿ 5ರಂದು ಮದುವೆ ಆಗಿದ್ದರು. ಈ ಮೂಲಕ ಹಲವು ವರ್ಷಗಳ ಪ್ರೀತಿಗೆ ಹೊಸ ಅರ್ಥ ನೀಡಿದ್ದರು.
ಶ್ರೇಯಾ ಹಿಂದಿ ಮಾತ್ರವಲ್ಲದೆ, ಕನ್ನಡದಲ್ಲೂ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಮೊಗ್ಗಿನ ಮನಸಲಿ…, ಉಲ್ಲಾಸದ ಹೂಮಳೆ…, ಮಳೆ ಬರುವ ಹಾಗಿದೆ… ಪೋಲಿ ಇವನು.. ಸೇರಿ ಸಾಕಷ್ಟು ಹಾಡುಗಳು ಶ್ರೇಯಾ ಕಂಠದಿಂದ ಮೂಡಿ ಬಂದಿದೆ.
ಇದನ್ನೂ ಓದಿ: Chandan Shetty | ಕನ್ನಡ ಹಾಡು ಹಾಕಲ್ಲ ಎಂದಿದ್ದಕ್ಕೆ ಆಕ್ರೋಶ: ಪಬ್ಗಳ ವಿರುದ್ಧ ಮತ್ತೆ ಸಿಡಿದೆದ್ದ ಚಂದನ್ ಶೆಟ್ಟಿ!
Published On - 3:26 pm, Thu, 4 March 21